ಶಿವಮೊಗ್ಗ: ಸುದೀರ್ಘ ಪತ್ರ ಬರೆದಿಟ್ಟು ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದ ಶಿವಮೊಗ್ಗ ಡಿಸಿ ಕಚೇರಿಯ ಸಿಬ್ಬಂದಿ ಗಿರಿರಾಜ್ ಕೊನೆಗೂ ಪತ್ತೆಯಾಗಿದ್ದಾರೆ. ಡಿಸಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಗಿರಿರಾಜ್ ಕೆಲಸದ ಒತ್ತಡ, ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಬೇಸತ್ತು ಸುಧೀರ್ಘ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದರು.
ಇವರು ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದಾರೆ. ಅಲ್ಲಿನ ಅಡುಗೆ ಭಟ್ಟರೊಬ್ಬರು ಇವರನ್ನು ಗುರುತಿಸಿದ್ದಾರೆ. ಮಾಹಿತಿ ಪಡೆದ ಸರ್ಕಾರಿ ನೌಕರರ ಇಲಾಖೆಯ ಸಿಬ್ಬಂದಿ ವರ್ಗ ಗಿರಿರಾಜ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪತ್ತೆಯಾದಾಗ ಅವರು ಅಸ್ವಸ್ಥತೆ ಹೊಂದಿದ್ದರು.
ಶಿವಮೊಗ್ಗ ಪೊಲೀಸ್ ಇಲಾಖೆ, ಜಿಲ್ಲೆಯ ಡಿಸಿ ಶಿವಕುಮಾರ್ ಸೇರಿದಂತೆ ಸರ್ಕಾರಿ ನೌಕರರ ಸಂಘದವರು ತೀವ್ರವಾಗಿಶೋಧನೆತೀವ್ರವಾಗಿ ಶೋಧನೆ ನಡೆಸಿದ್ದು, ಗಿರಿರಾಜ್ ಮರಳಿ ಬರುತ್ತಾರೆ ಎಸ್ ಪಿ ಲಕ್ಷ್ಮೀ ಪ್ರಸಾದ್ ಸಹ ತಿಳಿಸಿದ್ದರು

























Discussion about this post