ಚಿಕ್ಕಮಗಳೂರು: ದತ್ತಪೀಠ ವಿಚಾರದಲ್ಲಿ ಸರ್ಕಾರ ಸಮಿತಿ ರಚನೆ, ಅಹವಾಲು ಸ್ವೀಕಾರದ ಹೆಸರಿನಲ್ಲಿ ಮೀನಾಮೇಷ ಎಣಿಸದೆ ಕೂಡಲೇ ದತ್ತಪೀಠವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು, ಶ್ರೀ ದತ್ತಾತ್ರೇಯರಿಗೆ ದ್ರೋಹ ಮಾಡಿದರೆ ಬಿಜೆಪಿ ಸರ್ಕಾರ ಉಳಿಯಲ್ಲ ಎಂದು ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಖಡಕ್ ಸಂದೇಶ ರವಾನಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಧಿಕಾರಕ್ಕೆ ಬಂದ ಒಂದೇ ತಿಂಗಳಿಗೆ ದತ್ತಪೀಠವನ್ನು ಹಿಂದೂಗಳಿಗೆ ಎಂದು ಹೇಳಿಕೆ ನೀಡಿದ್ದರು. ಇದೀಗ ಅಧಿಕಾರಕ್ಕೆ ಬಂದು ಎರಡ್ಮೂರು ವರ್ಷಗಳೇ ಕಳೆದರು ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಿಲ್ಲ, ಕೂಡಲೇ ಸರ್ಕಾರ ಸಮಿತಿ ರಚನೆ, ಅಹವಾಲು ಸ್ವೀಕಾರ ಎನ್ನದೇ ನ್ಯಾಯಾಲಯದ ಸೂಚನೆಯಂತೆ ಕೂಡಲೇ ಸಮಸ್ಯೆಯನ್ನು ಇತ್ಯರ್ಥಪಡಿಸಿ ಹಿಂದೂಗಳಿಗೆ ದತ್ತಪೀಠವನ್ನು ಹಸ್ತಾಂತರಿಸುವಂತೆ ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುವುದಾಗಿ ಹೇಳಿದ್ದೆ ಅದರಂತೆಯೇ ಒಂದು ವರ್ಷದ ಒಳಗೆ ಅಧಿಕಾರ ಕಳೆದುಕೊಂಡಿದ್ದಾರೆ. ದತ್ತಾತ್ರೇಯರಿಗೆ ದ್ರೋಹ ಮಾಡಿದರೆ ಬಿಜೆಪಿ ಸರ್ಕಾರ ಉಳಿಯಲ್ಲ, ಧರ್ಮ ನಿಮ್ಮನ್ನು ಎಂದಿಗೂ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ರಾಜಕಾರಣ ಏನಾದ್ರೂ ಮಾಡಿಕೊಳ್ಳಿ, ಧರ್ಮ ಗುರುಗಳ ಜೊತೆ ಹುಡುಗಾಟ ಒಳ್ಳೆಯದಲ್ಲ, ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಲು ಸಮಿತಿ ರಚನೆ ಮಾಡುವ ಅಗತ್ಯವೇನಿದೆ? ಇಷ್ಟು ವರ್ಷಗಳ ಕಾಲ ಕೋರ್ಟ್ ಕೊಟ್ಟ ತೀರ್ಪಿಗೆ ಕಿಮ್ಮತ್ತಿಲ್ವಾ ಎಂದು ಪ್ರಶ್ನಿಸಿದರು.
Dattamale Campaign: ಜಿಲ್ಲೆಯಲ್ಲಿ ನ.8 ರಿಂದ 14ವರೆಗೆ ಶ್ರೀರಾಮಸೇನೆ ದತ್ತಮಾಲೆ ಅಭಿಯಾನ

























Discussion about this post