ಬೆಂಗಳೂರು: ಬೊಮ್ಮನಹಳ್ಳಿ ಶಾಸಕ ಸತೀಷ್ ರೆಡ್ಡಿ ಕಾರ್ ಗಳಿಗೆ ಬೆಂಕಿ ಹಚ್ಚಿದ್ದ ದುಷ್ಕರ್ಮಿಗಳಿಗೆ ಮೂರು ಪೋಲೀಸ್ ಠಾಣೆಗಳ ಪೋಲೀಸರು ಬಲೆಬೀಸಿದ್ದಾರೆ. ಈ ನಡುವೆ ಶಾಸಕ ಸತೀಷ್ ರೆಡ್ಡಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ರಾತ್ರಿ ಒಂದು ಗಂಟೆ ೨೩ ನಿಮಿಷದ ವೇಳೆ ದುಷ್ಕರ್ಮಿಗಳು ಹಿಂಬದಿ ಗೇಟ್ ಮೂಲಕ ಒಳ ಪ್ರವೇಶಿದ್ದು, ತಾವೇ ತಂದಿದ್ದ ಪೆಟ್ರೋಲ್ ಬಳಸಿ ಫಾರ್ಚುನರ್, ಜೀಪ್ ಕಾರ್ ಗಳನ್ನು ಬೆಂಕಿಗೀಡುಮಾಡಿದ್ದಾರೆ.
ನಾಲ್ಕು ನಿಮಿಷ ಅಡ್ಡಾಡಿ ವಾಪಾಸ್ಸು ಹೋಗಿದ್ದಾರೆ. ಬ್ಯಾಟರಿ ಸಿಡಿದಾಗ ಮಲಗಿದ್ದ ನಾವೆಲ್ಲಾ ಹೊರಗೆ ಬಂದು ನೋಡಿದಾಗ ಕಾರ್ ಗಳೆಲ್ಲಾ ಹೊತ್ತಿ ಉರಿಯುತ್ತಿದ್ದವು ಎಂದಿದ್ದಾರೆ.
ಬೆಂಕಿ ನಂದಿಸಲು ಶುರು ಮಾಡಿದ್ದು, ಅಗ್ನಿಶಾಮಕ ಧಳದವರು ಸ್ಥಳಕ್ಕೆ ಆಗಮಿಸಿ ರಾತ್ರಿ ಎರಡು ಗಂಟೆ ಒಳಗಡ ಬೆಂಕಿ ಶಮನಗೊಳಿಸಿದರು. ಈಗಾಗಲೇ ನಗರ ಪೋಲೀಸ್ ಆಯುಕ್ತ ಕಮಲ್ ಪಂತ್ ಬೇಟಿನೀಡಿ ತನಿಖೆ ಚುರುಕುಗೊಳಿಸಿದ್ದಾರೆ. ಕೃತ್ಯ ನಡೆದಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಎಲ್ಲಾ ಮಾಹಿತಿಯನ್ನು ಇಲಾಖೆಗೆ ನೀಇದ್ದೇವೆ ಎಂದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಯಾರು ಈ ದುಷ್ಕೃತ್ಯ ಎಸಗಿದ್ದಾರೋ ಗೊತ್ತಿಲ್ಲ, ರಾಜಕೀಯ ಕಾರಣಕ್ಕೆ ನಡೆಸಿರಬಹುದು ಎಂಬ ಗುಮಾನಿ ಇಲ್ಲ ಎಂದಿದ್ದಾರೆ. ಕಳೆದ ೧೫-೨೦ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ಎಲ್ಲಾ ಪಕ್ಷಗಳಲ್ಲೂ ಮಿತ್ರರಿದ್ದಾರೆ. ಯಾರನ್ನ ಬೇಕಾದರೂ ಟಾರ್ಗೆಟ್ ಮಾಡ್ತೀವಿ ಅನ್ನೋ ಉದ್ದೇಶಕ್ಕೆ ನಡೆಸಿರೋ ಸಾಧ್ಯತೆ ಇದೆ ಎಂಬುದಾಗಿ ಶಾಸಕರು ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಸೇರಿದಂತೆ ಗೃಹಮಂತ್ರಿಗಳ ಮಾಹಿತಿ ತೆಗೆದುಕೊಂಡಿದ್ದು, ಪೋಲೀಸರು ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ

























Discussion about this post