ಹಾವೇರಿ: ಪ್ರಸಕ್ತ ಸಂದರ್ಭದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಸ್ಪಷ್ಟತೆಯನ್ನು ಹೊಂದಿರುವಂತೆ ತೋರುತ್ತಿಲ್ಲ, ಈ ಹಿಂದಿನ ವರದಿಯ ಅಂಶಗಳನ್ನು ಒಳಗೊಂದಿದ್ದರೂ ಸಹ, ಇನ್ನೊಮ್ಮೆ ಮರುಪರಿಶೀಲನೆ ನಡೆಸಿ, ವಿಸ್ತೃತ ಅಧ್ಯಯನ ನಡೆಸುವುದು ಸೂಕ್ತ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾವೇರಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಪ್ರಸ್ತಕ ನರ್ಸರಿ lower kg, highter kg, ಒಂದು ಅಥವಾ ಎರಡನೆ ಇಯತ್ತೆ ಸೇರಿ ಒಂದು ಭಾಗ, ೨,೩,೪ನೇ ಇಯತ್ತೆ ಒಂದು ಭಾಗ, ೫,೬,೭ ಇಯತ್ತೆ ಸೇರಿ ಒಂದು ಭಾಗ ಉಳಿದಂತೆ ೮,೯,೧೦,೧೧,೧೨ ಇಯತ್ತೆ ಒಂದು ಭಾಗ ಮಾಡಿರುವುದು ವೈಯಕ್ತಿಕವಾಗಿ ಸರಿಯಲ್ಲ, ಈ ಕ್ರಮವನ್ನು ವಿಸ್ತೃತವಾಗಿ ಅಧ್ಯಯನ ನಡೆಸಬೇಕು ಹಾಗೂ ಸ್ವಲ್ಪ ಬದಲಾವಣೆ ಮಾಡುವುದು ಸೂಕ್ತ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಹುತೇಕ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಸರ್ಕಾರ ಬದಲಾದರೂ ಸಹ, ಶಿಕ್ಷಣ ನೀತಿ ಬದಲಾಗುವುದಿಲ್ಲ. ಆದರೆ ನಮ್ಮಲ್ಲಿ ಸರ್ಕಾರಗಳು ಬದಲಾದಂತೆ, ಶಿಕ್ಷಣ ನೀತಿಗಳು ಬದಲಾಗುತ್ತವೆ. ಇದರಿಂದ ಶಿಕ್ಷಣ ವ್ಯವಸ್ಥೆಗೆ ತೊಂದರೆ ಆಗುತ್ತೆ. ಏನೇ ಬದಲಾಗಲಿ, ಆದರೆ ಶಿಕ್ಷಣ ನೀತಿ ಬದಲಾಗಬಾರದು, ಹಿಂದಿನವರು ಅದರ ಸಾಧಕ-ಬಾಧಕಗಳನ್ನು ಮನಗಂಡೇ ನೀತಿ ರೂಪಿಸಿರುತ್ತಾರೆ. ಅವುಗಳನ್ನು ಸಾರಾಸಗಟಾಗಿ ಬದಲಾಯಿಸುವ ಬದಲು, ಸರಿಪಡಿಸುವ ಕ್ರಮ ಕೈಗೊಳ್ಳಬೇಕು ಎಂದು ಹೊರಟ್ಟಿ ವಿವರಿಸಿದರು.
ಪ್ರಸಕ್ತ ಇರುವ ಲೋಯರ್ ಪ್ರೈಮರಿ(ಐದನೇ ಇಯತ್ತೆವರಿಗೆ), ಹೈಯರ ಪ್ರೈಮರಿ( 6,7,8ನೇ ಇಯತ್ತೆ) ಹಾಗೂ ಹೈಯರ್ ಸೆಕೆಂಡರಿ(9,10,11ಹಾಗೂ 12ನೇ ಇಯತ್ತೆ) ತ್ರೀಟೈಯರ್ ಶಿಕ್ಷಣ ಪದ್ದತಿ ಉತ್ತಮವಾದದ್ದು. ಅದನ್ನೇ ಬೆಳೆಸಿಕೊಂಡು ಹೋಗುವುದು ಸರಿಯಾದುದು ಎಂದರು.
ಪ್ರೈಮರಿ ಶಿಕ್ಷಣವೇ ಮ್ಕಕಳಿಗೆ ಅಡಿಪಾಯ, ಪ್ರಸಕ್ತ ಪ್ರೈಮರಿ ಶಿಕ್ಷಣಕ್ಕೆ ಆದ್ಯತೆಯನ್ನು ನೀಡಲಾಗುವುದು ಎಂದು ಈ ನೀತಿಯಲ್ಲಿ ಇದ್ದರೂ ಸಹ ಪದ್ದತಿ ಮಾತ್ರ ಸರಿಯಾಗಿಲ್ಲ. ಇದರಿಂದ ಗ್ರಾಮೀಣ ಶಿಕ್ಷಣ ಪ್ರಗತಿ ಹೊಂದುವುದಿಲ್ಲ ಎಂದು ಅವರು ಹೇಳಿದರು.
ಇಂದಿರಾ ಗಾಂಧಿ ಪ್ರಧಾನಿಯಾದ ನಂತರ ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ಯೋಜನೆಯನ್ನು ಜಾರಿಗೆ ತಂದರು. ಎರಡನೆಯದಾಗಿ ರಾಜೀವ್ ಗಾಂಧಿ ಜಾರಿಗೆ ತಂದರು. ಈಗ ಪ್ರಧಾನಿ ನರೇಂದ್ರ ಮೊದಿಯವರು ನೀಡುತ್ತಿರುವುದು ಮೂರನೆಯದು. ಇಲ್ಲಿಯವರೆಗೆ ಕೇಂದ್ರ ಸರ್ಕಾರಗಳಿಂದ ಬಂದ ಅಧಿಕೃತ ವರದಿಗಳಾಗಿವೆ. ಪ್ರಸಕ್ತ ನೀತಿಯನ್ನು ೨೦೪೦ ರವರೆಗೆ ಜಾರಿಗೆ ಮಾಡಬೇಕೆನ್ನುವುದು ಇಂದಿನ ಸರ್ಕಾರದ ಉದ್ದೇಶವಾಗಿದೆ ಅಲ್ಲಿಯವರೆಗೆ ಯಾರು ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಇದು ಸರಿಯಾದುದಲ್ಲ, ಈ ನೀತಿಗಳು ಮರುಕಳಿಸುತ್ತಿವೆ ಎಂದರು.
ಮಹರಾಷ್ಟ್ರ ಪದ್ಧತಿಗೆ ಸ್ವಾಗತ: ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದವರಿಗೆ ವೇತನದಲ್ಲಿನ ನ್ಯೂನತೆಯನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿನ ಅನುದಾನ ರಹಿತ ಶಾಲೆಯಲ್ಲಿನ ಶಿಕ್ಷಕರಿಗೆ ವೇತನ ನೀಡುವ ಮಾದರಿಯಲ್ಲಿ ಇಲ್ಲಿನೂ ನೀಡುವಂತಾಗಬೇಕು ಎಂದವರು ಅಭಿಪ್ರಾಯ ತಿಳಿಸಿದರು.
.

























Discussion about this post