- ಸಿಎಂ ಬೊಮ್ಮಾಯಿ, ಯಡಿಯೂರಪ್ಪನವರ ಆಡಳಿತ ಶ್ಲಾಘನೆ
- ಬೆಳಗಾವಿಯಲ್ಲಿ ಪಕ್ಷದ ಗೆಲುವು ಸಂಭ್ರಮಿಸಿದ ಬಿಜೆಪಿ ನಾಯಕರು
ಬೆಂಗಳೂರು: ಮೊಟ್ಟಮೊದಲ ಬಾರಿಗೆ ಪಕ್ಷದ ಚಿಹ್ನೆಯಡಿ ಗೆದ್ದಿದೆ, ಇದು ಸಿಎಂ ಮತ್ತು ಹಿಂದಿನ ಸಿಎಂ ಯಡಿಯೂರಪ್ಪನವರ ಆಡಳಿತ ಮೆಚ್ಚಿದ ಜನರು ಮತ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಾಳಿತ ವೈಖರಿಯನ್ನು ಜನರು ಮೆಚ್ಚಿದ್ದಾರೆ, ಇದರ ಫಲಿತಾಂಶವೇ ಈ ಚುನಾವಣೆ ಎಂದು ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪಕ್ಷದ ಚಿಹ್ನೆಯಡಿ ಸ್ಪರ್ಧೆ ಮಾಡಿಅಲಿಲ್ಲ. ಆದರೆ ಈ ಬಾರಿ ಪಕ್ಷದ ಚಿಹ್ನೆಯಡಿ ಸ್ಪರ್ಧೆಗಿಳಿದಿದ್ದೆವು. ಹುಬ್ಬಳಿ-ಧಾರವಾಡ ಬಿಜೆಪಿಯ ಭದ್ರಕೋಟೆ ಎಂಬುದು ಸಹ ಈಗ ಮತ್ತೊಮೆ ಸ್ಪಷ್ಟ ಎಂದವರು ಪಕ್ಷದ ಕುರಿತು ಹೆಮ್ಮೆಯಿಂದ ಬೀಗಿದ್ದಾರೆ.

























Discussion about this post