ದಾವಣಗೆರೆ: ನಾಡಿನ ಹೆಸರಾಂತ ವೈದ್ಯೆಯಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಕನ್ನಡ ಸಾರಸ್ವತ ಲೋಕದಲ್ಲಿ ಸಂಶೋದಕಿ, ಕಾದಂಬರಿಕಾರ್ತಿ,ಕತೆಗಾರ್ತಿಯಾಗಿ ತೊಡಗಿಕೊಂಡಿದ್ದರು.
ಡಾ. ಹೆಚ್. ಗಿರಿಜಮ್ಮ (೭೦) ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಡಿನ ಗಣ್ಯರು, ಹಿರಿಯ ವೈದ್ಯರು ಅಗಲಿದ ಚೇತನಕ್ಕೆ ಕಂಬನಿ ಮಿಡಿದಿದ್ದಾರೆ.
ಹುಟ್ಟಿ ಬೆಳೆದದ್ದು ದಾವಣಗೆರೆ, ಪಿಯುಸಿತನಕ ದಾವಣಗೆರೆಯಲ್ಲಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ವೈದ್ಯ ವೃತ್ತಿ ಆಯ್ಕೆ ಮಾಡಿಕೊಂಡರು. ತಮ್ಮ ಮಾನಸ ಪುತ್ರಿಯ ಬೆಳವಣಿಗೆ ಕುರಿತು ಒಂದ ವರ್ಷದವರೆಗೆ ದೈಹಿಕ, ಮಾನಸಿಕ ಬೆಳವಣಿಗೆಯ ಅಧ್ಯಯನ ನಡೆಸಿದ್ದರು.
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾಗಿ ಜನಪ್ರಿಯರಾಗಿದ್ದ ಅವರು ಕನಕಪುರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸಹ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಬಡ ತಾಯಂದಿರಿಗಾಗಿ ಮಮ್ಮಲ ಮರುಗುತ್ತಿದ್ದ ತಾಯ್ತನದ ವೈದ್ಯೆಯಾಗಿದ್ದರು.
ಕರ್ನಾಟಕ ಲೇಖಕಿಯರ ಸಂಘದಿಂದ ಅನುಪಮಾ ನಿರಂಜನ ಪ್ರಶಸ್ತಿಗೆ ಭಾಜನರಾಗಿದ್ದರು. ವೈದ್ಯಕೀಯ ಕ್ಷೇತ್ರ ಮತ್ತು ವೈದ್ಯಕೀಯ ಸಾಹಿತ್ಯ ಕ್ಷೇತ್ರಕ್ಕೆ ಅವರು ಸಲ್ಲಿಸಿದ್ದ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ ಬಿ.ಸರೋಜಾದೇವಿ ಸಾಹಿತ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸಿತ್ತು.

























Discussion about this post