ಸಿಎಂ ಬಿಎಸ್ ಯಡಿಯೂರಪ್ಪನವರ ಹತ್ರ ಕೆಲಸ ಆಗಬೇಕೆಂದರೆ, ಮೊದಲು ಅವರ ಸುಪುತ್ರನ ಹತ್ರ ಹೋಗೋ ವ್ಯಕ್ತಿಗಳು ಬಹಳ ಇದ್ದರು. ಪುತ್ರ ಬಿ.ವೈ ವಿಜಯೇಂದ್ರ ರಾಜ್ಯ ಬಿಜೆಪಿ ನಾಯಕರ ಪಟ್ಟಿಯಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಬಿ.ಎಸ್.ವೈ ಮುಖ್ಯಮಂತ್ರಿ ಆಗಿದ್ದಾಗಲಂತೂ ವಿಜಯೇಂದ್ರ ಸೂಪರ್ ಸಿಎಂ ಅನ್ನುವ ಮಾತಿತ್ತು.
ಆದ್ರೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ವಿಜಯೇಂದ್ರ ಈವರೆಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ ನಿಜ, ಆದ್ರೆ ತಮ್ಮದೇ ಆದ ಅನೇಕ ಚುನಾವಣಾ ತಂತ್ರಗಳ ಮೂಲಕ ಬೇಕಾದವರನ್ನು ಗೆಲ್ಲಿಸಿಕೊಟ್ಟಿದ್ದಾರೆ. ಸದ್ಯ ವಿಜಯೇಂದ್ರ ಹೆಸರು ಸಿಂಧಗಿ ಮತ್ತು ಹಾನಗಲ್ ಉಪಚುನಾವಣೆಯ ಸ್ಪರ್ಧೆ ಕಡೆ ಅವರು ಕೇಂದ್ರೀಕರಿಸಿದ್ದಾರೆ.
ಸಿಂಧಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಹಲವು ಊಹಾಪೋಹಗಳಿವೆ. ಆದರೆ ವಿಜಯೇಂದ್ರಗೆ ಯಾವುದೇ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಆತುರ ಇಲ್ಲ ಎಂದು ಸಹ ಸುದ್ದಿಗಳಿವೆ.
ಅವರು ೨೦೨೩ ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಕಡೆ ಸಂಪೂರ್ಣ ಗಮನ ಇಟ್ಟಿದ್ದಾರೆ ಅನ್ನೋದು ಬಹಿರಂಗ ಸತ್ಯ.

























Discussion about this post