ಶಿವಮೊಗ್ಗ: ಮೂರು ಜಿಲ್ಲಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಖತರ್ ನಾಕ್ ಕಳ್ಳರನ್ನು ಶಿವಮೊಗ್ಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಭದ್ರಾವತಿಯ ಸುಹೇಲ್ ಪಾಷಾ, ಶಿವಮೊಗ್ಗದ ಮೊಹಮ್ಮದ್ ಹ್ಯಾರಿಸ್, ಫಜಲು ಹಾಗೂ ಸಾಹಿಲ್ ಶೇಟ್ ಎಂದು ಬಂಧಿತರನ್ನು ಗುರುತಿಸಲಾಗಿದೆ.
ಚಿಕ್ಕಮಗಳೂರು-ಶಿವಮೊಗ್ಗ-ದಾವಣಗೆರೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ತಂಡ ಇದಾಗಿದ್ದು, ಬಂಧಿತರಿಂದ ಸುಮಾರು ಹತ್ತು ಲಕ್ಷ ಮೌಲ್ಯದ ೨೨ ಬೈಕ್ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ನಗರದ ತುಂಗಾನಗರ ಠಾಣೆಯಲ್ಲಿ ೦೩, ದೊಡ್ಡ ಪೇಟೆಯಲ್ಲಿ ೦೫, ಜಯನಗರ, ವಿನೋಭ ನಗರದಲ್ಲಿ ತಲಾ ೦೨, ಶಿರಾಳಕೊಪ್ಪ ಠಾಣೆಯಲ್ಲಿ ೦೩, ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ, ಶಿವಮೊಗ್ಗ ಗ್ರಾಮಾಂತರ ಠಾಣೆ, ಕುಂಸಿ ಠಾಣೆಯಲ್ಲಿ ತಲಾ ೦೧ ಪ್ರಕರಣಗಳು ಇದ್ದುವು.
ದಾವಣಗೆರೆ ಹೊನ್ನಾಳಿಯಲ್ಲಿ ೦೨, ಚಿಕ್ಕಮಗಳೂರಿನ ಬೀರೂರು-ಕಡೂರು ಪೊಲೀಸ್ ಠಾಣೆಯಲ್ಲಿ ತಲಾ ೦೧ ಪ್ರಕರಣ ದಾಖಲಾಗಿತ್ತು. ತುಂಗಾನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ದೀಪಕ್ ಜೊತೆಗೆ ಸಿಬ್ಬಂದಿ ವರ್ಗವು ಸಿಟಿ ಡಿವೈಎಸ್ಪಿ ಪ್ರಶಾಂತ್ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿತ್ತು.

























Discussion about this post