ಉಡುಪಿ: ಬ್ರಹ್ಮಾವರ ತಾಲೂಕಿನ ಚಾಂತಾರು ದೇವುಬೈಲಿನಲ್ಲಿ ನಾಯಿ ಎಂದು ತಿಳಿದುಕೊಂಡು ಚಿರತೆಯ ಮರಿಯನ್ನು ಬಾವಿಯಿಂದ ರಕ್ಷಣೆ ಮಾಡಿದ ಘಟನೆ ನಡೆದಿದೆ. ಬಾವಿಗೆ ಬಿದ್ದಿದ್ದ ಚಿರತೆಯನ್ನು ಬೆಳಗ್ಗೆ ಮನೆಯವರು ಗಮನಿಸಿ ನಾಯಿ ಎಂದು ಭಾವಿಸಿ ರಕ್ಷಿಸಲು ಮುಂದಾದರು.
ಇದಕ್ಕಾಗಿ ಹಗ್ಗದ ಮೂಲಕ ಬಾವಿಗೆ ಕೊಡಪಾನ ಇಳಿಸಿ ಚಿರತೆಯನ್ನು ಮೇಲಕ್ಕೆ ಎತ್ತಿದ್ದಾರೆ. ಚಿರತೆ ಮರಿ ಭಯದಿಂದ ಮನೆಯ ಪಕ್ಕದಲ್ಲಿಯೇ ಇದ್ದ ಚಿಕ್ಕ ಶೆಡ್‌ನಲ್ಲಿ ಅಡಗಿ ಕುಳಿತುಕೊಂಡಿದೆ. ಆಗ ಚಿರತೆ ಅನ್ನುವುದು ತಿಳಿದು ಮನೆಯವರು ಮತ್ತು ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.
ಇಲಾಖೆಯವರು ಆಗಮಿಸಿದ ಬಳಿಕ ಬಲೆ ಎಸೆದು 8 ತಿಂಗಳ ಹೆಣ್ಣು ಚಿರತೆಯನ್ನು ಬೋನಿಗೆ ಸೇರಿಸಿ ಹುಲಿಕಲ್ ಘಾಟಿಗೆ ಬಿಡಲಾಗಿದೆ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಹರೀಶ್ ಕೆ, ಇಲಾಖೆಯ ಗುರುರಾಜ್ ಕೆ. ದೇವರಾಜ್ ಪಾಣ, ರಮೇಶ್, ಸುರೇಶ್, ಕೇಶವ, ಮಂಜುನಾಥ್, ಜೋಯ್, ಪೊಲೀಸ್ ಸಿಬ್ಬಂದಿ ಸಹ ಪಾಲ್ಗೊಂಡಿದ್ದರು.

























Discussion about this post