ದೆಹಲಿ: ಇ.ಡಿ. ನಿರ್ದೇಶನಾಲಯದ ಸೂಚನೆಯ ಮೆರೆಗೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಇಂದು ದೆಹಲಿಯಲ್ಲಿರುವ ಇ.ಡಿ. ಕಚೇರಿಗೆ ಭೇಟಿ ನೀಡಿದ್ದಾರೆ.
ಕಳೆದ ತಿಂಗಳು ಬೆಂಗಳೂರಿನಲ್ಲಿ ತಮ್ಮ ಮನೆಗಳು ಮತ್ತು ಕಚೇರಿಗಳ ಮೇಲೆ ನಡೆದಿದ್ದ ಇಡಿ ದಾಳಿಯ ಸಂಬಂಧ ದಾಖಲೆ ಸಲ್ಲಿಸಲು ಕಚೇರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದ್ದಾರೆ.
ಜಮೀರ್ ಆಹ್ಮದ್ ಖಾನ್ ನಿನ್ನೆ ಸಂಜೆ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದಾರೆ. ದಾಳಿಯಾದ ನಂತರ ಇ.ಡಿ ಕಚೇರಿಗೆ ಕೆಲವು ದಾಖಲೆಗಳನ್ನ ಜಮೀರ್ ಆಹ್ಮದ್ ಖಾನ್ ನೀಡಿದ್ದರು. ಈ ವೇಳೆ ಮತ್ತಷ್ಟು ದಾಖಲೆಗಳನ್ನ ನೀಡುವಂತೆ ಇ.ಡಿ ಅಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆ ದಾಖಲೆಗಳನ್ನ ನೀಡಲು ತೆರಳಿರುವ ಶಾಸಕ ಜಮೀರ್ ಮತ್ತಷ್ಟು ದಾಖಲೆಗಳನ್ನು ಕಲೆಹಾಕಿ ನೀಡಿದ್ದಾರೆ ಎನ್ನಲಾಗಿದೆ.

























Discussion about this post