ಕಳೆದ 40 ವರ್ಷಗಳಿಂದ ನೀರಿಲ್ಲದೆ ಬತ್ತಿದ್ದ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡ ಶಿವಾರ ಗ್ರಾಮದ ಕೆರೆ ಈಗ ಸಂಪೂರ್ಣ ಭರ್ತಿಯಾಗಿದ್ದು ಕೋಡಿ ಹರಿಯುತ್ತಿದೆ. ಇದಕ್ಕೆ ಕಾರಣ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಕೆ.ಸಿ. ವ್ಯಾಲಿ ಯೋಜನೆ.
ತಾಜ್ಯ ನೀರನ್ನು ಸಂಸ್ಕರಿಸಿ ಆ ನೀರಿನ ಮೂಲಕ ಕೋಲಾರ ಜಿಲ್ಲೆಯ 126 ಕೆರೆಗಳನ್ನು ತುಂಬಿಸುವುದು ಯೋಜನೆಯ ಉದ್ದೇಶ. ಭರ್ತಿಯಾಗಿರುವ ದೊಡ್ಡ ಶಿವಾರ ಗ್ರಾಮದ ಕೆರೆಗೆ ಸಿದ್ದರಾಮಯ್ಯ ಅವರು ಇಂದು ಗ್ರಾಮಸ್ಥರ ಹರ್ಷೋದ್ಗಾರದ ನಡುವೆ ಬಾಗೀನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾಲೂರು ಶಾಸಕ ನಂಜೇಗೌಡ, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಹಾಜರಿದ್ದರು.

























Discussion about this post