ಮೇಷರಾಶಿ: ಕಠಿಣ ಕಾರ್ಯ ಕಾದಿದೆ. ಕೆಲಸದ ಒತ್ತಡವೂ ಅಕ. ಸಂಗಾತಿ ಜತೆಗೆ ಅಭಿಪ್ರಾಯಭೇದ ಸಂಭವ. ಆರ್ಥಿಕವಾಗಿ ಮಾತ್ರ ಸಮಾಧಾನಕರ ಬೆಳವಣಿಗೆ. ನಿಮ್ಮ ದೈಹಿಕ ಶಕ್ತಿಯನ್ನು ವೃದ್ದಿಸಿಕೊಳ್ಳಿ, ಕ್ರೀಡೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ, ನಿಮ್ಮ ಹಣದ ಸ್ಥಿತಿಯು ಸುಧಾರಣೆ ಕಾಣಲಿದೆ, ಕುಟುಂಬಕ್ಕೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ, ಉತ್ಸಾಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ, ಉದ್ಯೋಗ ಆಕಾಂಕ್ಷಿಗಳಿಗೆ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ,
ವೃಷಭರಾಶಿ: ಗುರಿಸಾಧನೆ. ಬಯಸಿದ ಕಾರ್ಯ ಈಡೇರುವುದು. ಸಂಗಾತಿ ಜತೆಗೆ ಅನವಶ್ಯ ಚರ್ಚೆಗೆ ಇಳಿಯದಿರಿ. ಅದರಿಂದ ಸಂಬಂಧ ಹಾಳಾಗಬಹುದು.ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಖರ್ಚುಗಳಿಗೆ ಕಡಿವಾಣ ಹಾಕಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ, ಪ್ರೀತಿ ನಿರಾಸೆಗೊಳ್ಳಲಿದೆ, ಕೆಲಸದ ಸ್ಥಳದಲ್ಲಿ ಹಿರಿಯ ಸಲಹೆ ಪ್ರಯೋಜನಕ್ಕೆ ಬರಲಿದೆ, ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ, ಸಹೋದ್ಯೋಗಿಗಳ ಬೆಂಬಲ ಮನೋಸ್ಥೈರ್ಯವನ್ನು ಹೆಚ್ಚಿಸಲಿದೆ.
ಮಿಥುನರಾಶಿ: ವೈದ್ಯಕೀಯ ಖರ್ಚು ಹೆಚ್ಚಬಹುದು. ಕುಟುಂಬಸ್ಥರಲ್ಲಿ ವಿಶ್ವಾಸವಿರಲಿ. ಅವರ ನಡೆಯನ್ನು ಶಂಕಿಸಲು ಹೋಗಬೇಡಿ. ವಾಗ್ವಾದಕ್ಕೆ ಹೋಗದಿರಿ. ನಿಮ್ಮ ಪಾಲಿಗೆ ಇಂದು ಅದೃಷ್ಟದ ದಿನ, ಆಭರಣದ ಮೇಲಿನ ಹೂಡಿಕೆ ನಿಮಗೆ ಲಾಭವನ್ನು ತರಲಿದೆ, ಬಹುಕಾಲದ ನಿರೀಕ್ಷೆ, ಕಲ್ಪನೆಗಳು ಸಾಕಾರಗೊಳ್ಳಲಿದೆ, ಸಂಗಾತಿ ನಿಮ್ಮ ಅಚ್ಚರಿಗೊಳಿಸುತ್ತಾರೆ, ಕೆಲಸದ ಹೊರೆಯ ಹೊರತಾಗಿಯೂ ನಿಮ್ಮ ಶಕ್ತಿ ವೃದ್ದಿಸಲಿದೆ, ನಿಗದಿತ ಸಮಯಕ್ಕಿಂತಲೂ ಮೊದಲೇ ಕಾರ್ಯವನ್ನು ಪೂರ್ಣಗೊಳಿಸುವಿರಿ.
ಕರ್ಕಾಟಕರಾಶಿ; ಇತರರ ಮರ್ಜಿಗೆ ಕಾಯದೆ ನಿಮ್ಮ ಕೆಲಸ ಮಾಡುತ್ತಾ ಹೋಗಿ. ಅವರಿವರು ಏನಂದಾರು ಎಂಬ ಚಿಂತೆ ಬೇಡ. ದಿನದಂತ್ಯಕ್ಕೆ ಅದುವೇ ತೃಪ್ತಿ ನೀಡುವುದು. ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಿ, ತಾಯಿಯಿಂದ ಹಣಕಾಸಿನ ಸಹಕಾರ ದೊರೆಯಲಿದೆ, ತಪ್ಪಿಯೂ ಯಾರ ಜೊತೆಗೂ ನಿಮ್ಮ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಬೇಡಿ, ಪ್ರಿಯತಮೆಯ ಕಠಿಣ ಮಾತು ಮನಸ್ಥಿತಿಯನ್ನು ಗೊಂದಲಕ್ಕೀಡು ಮಾಡಲಿದೆ, ಗ್ರಹಗಳು ನಿಮಗೆ ಅನುಕೂಲಕರವಾಗಲಿದೆ.
ಸಿಂಹರಾಶಿ: ನಿಮ್ಮ ಕೆಲಸದ ಗುಣಮಟ್ಟ ಕೆಲವರು ಪ್ರಶ್ನಿಸ ಬಹುದು. ಅದಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ. ಕೌಟುಂಬಿಕ ಕಿರಿಕಿರಿ. ಮಕ್ಕಳೊಂದಿಗೆ ಸಮಯ ಕಳೆಯುವಿರಿ, ಭೂ ವ್ಯವಹಾರಗಳು ನಿಮಗೆ ಲಾಭವನ್ನು ತಂದುಕೊಡಲಿದೆ, ಏಕಾಂಗಿತನ ನಿಮ್ಮನ್ನು ಕಾಡಲಿದೆ, ಸಂಗಾತಿ ನಿಮಗೆ ಸಂತೋಷ ನೀಡುವಲ್ಲಿ ಪ್ರಯತ್ನಿಸುತ್ತಾರೆ, ಸಮಯದ ಸೂಕ್ಷ್ಮತೆಯನ್ನು ಅರಿತುಕೊಳ್ಳಿ, ಅತಿಯಾದ ಖರ್ಚುಗಳ ಮೇಲೆ ಹಿಡಿತವಹಿಸುವಿರಿ, ದಿನಾಂತ್ಯಕ್ಕೆ ಶುಭವಾರ್ತೆ.
ಕನ್ಯಾರಾಶಿ: ಮನಸ್ಸಿನ ಶಾಂತಿಗೆ ಭಂಗ ಬರುವುದು. ಅದಕ್ಕೆ ಕಾರಣ ನಿಮ್ಮ ವೈಯಕ್ತಿಕ ಬದುಕಿನಲ್ಲಿನ ಕೆಲವು ಬೆಳವಣಿಗೆಗಳು. ಆರೋಗ್ಯ ವಿಚಾರದಲ್ಲಿ ನಿಶ್ಚಿಂತೆ. ಮನೆಯ ಚಿಂತೆ ನಿಮ್ಮನ್ನು ಚಿಂತೆಗೀಡು ಮಾಡಲಿದೆ, ಸಂಬಂಧಿಕರಿಗೆ ಹಣದ ಸಹಾರ ನೀಡುವುದನ್ನು ತಪ್ಪಿಸಿ, ಇಡೀ ಕುಟುಂಬಕ್ಕೆ ಸಮೃದ್ದಿಯನ್ನು ತರುವ ಯೋಜನೆಯನ್ನು ಕೈಗೊಳ್ಳುವಿರಿ, ಮನಸಿನ ಒತ್ತಡ ಹೆಚ್ಚಲಿದೆ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನ, ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆ ಅಗತ್ಯ.
ತುಲಾರಾಶಿ: ಖಾಸಗಿ ಬದುಕಿನಲ್ಲಿ ಇಂದು ಹೆಚ್ಚು ಹೊಣೆಗಾರಿಕೆ. ಆರ್ಥಿಕ ವಿಷಯದಲ್ಲಿ ಏರಿಳಿತ ಕಾಣುವಿರಿ. ಆಹಾರದಲ್ಲಿ ವ್ಯತ್ಯಯದಿಂದ ಹೊಟ್ಟೆ ಕೆಡಬಹುದು. ಕೆಲಸದ ನಡುವೆ ವಿಶ್ರಾಂತಿಯನ್ನು ಪಡೆಯಲು ಪ್ರಯತ್ನಿಸಿ, ನಿಮ್ಮ ಹಣಕಾಸು ಸ್ಥಿತಿಯು ಸುಧಾರಣೆಯನ್ನು ಕಾಣಲಿದೆ, ಸಂಗಾತಿಯು ನಿಮ್ಮೊಂದಿಗೆ ಅಸಮಧಾನವನ್ನು ತಾಳುವ ಸಾಧ್ಯತೆಯಿದೆ, ನಿಮ್ಮ ಪಾಲುದಾರರ ಜೊತೆಗೆ ಅನ್ಯೋನ್ಯವಾಗಿರಿ, ದೂರದ ಸಂಬಂಧಿ ಯಾವುದೇ ಮುನ್ಸೂಚನೆ ಇಲ್ಲದೇ ಮನೆಗೆ ಭೇಟಿ ನೀಡಲಿದ್ದಾರೆ.
ವೃಶ್ಚಿಕರಾಶಿ: ಬಹುದಿನಗಳ ಬಳಿಕ ಕುಟುಂಬಸ್ಥರ ಜತೆ ಹೆಚ್ಚು ಕಾಲ ಕಳೆಯುವಿರಿ. ಅನಿರೀಕ್ಷಿತ ಧನಲಾಭ. ಕಾರ್ಯದಲ್ಲಿ ಸಫಲತೆ. ಬಂಧುಗಳಿಂದ ಶುಭಸುದ್ದಿ ಸಿಕ್ಕೀತು. ಹಣಕಾಸಿನ ವಿಚಾರದಲ್ಲಿ ಹಲವು ಪ್ರಯೋಜನ ದೊರೆಯಲಿದೆ, ದೂರ ಪ್ರಯಾಣ ನಿಮಗೆ ಲಾಭವನ್ನು ತರಲಿದೆ, ಹೊಂದಾಣಿಕೆಯಿಂದಲೇ ಕಾರ್ಯ ಸಾಧನೆ ಹೂಡಿಕೆಯ ವಿಚಾರ ದಲ್ಲಿ ಎಚ್ಚರಿಕೆಯಿಂದಿರಿ, ಹಿರಿಯರು ಕೆಲಸ ಕಾರ್ಯದಲ್ಲಿ ಸಹಕಾರವನ್ನು ನೀಡಲಿದ್ದಾರೆ, ಓದಿನ ವಿಚಾರದಲ್ಲಿ ಉತ್ತಮವಾದ ದಿನ. ದಾನ ಮಾಡಿದ್ರೆ ಶುಭದಾಯಕ.
ಧನಸುರಾಶಿ: ಎಲ್ಲರೊಂದಿಗೆ ಸಕಾರಾತ್ಮಕ ಮನೋಭಾವದಿಂದ ವರ್ತಿಸಿ. ಅದರಿಂದ ನಿಮಗೂ ಹಿತ. ಕೆಲವರ ವರ್ತನೆ ಕೆಡುಕೆನಿಸಿದರೆ ಅವರನ್ನು ದೂರ ಸರಿಸಿ. ಜಗಳಕ್ಕೆ ಹೋಗದಿರಿ. ಇತರರಿಗೆ ಸಾಲವನ್ನು ನೀಡಲಿದ್ದೀರಿ, ಕೊಟ್ಟ ಹಣ ಮರಳಿ ಬರಲಿದೆ, ಇತರರ ಸಹಕಾರದಲ್ಲಿ ವ್ಯವಹಾರ ಮಾಡುವುದನ್ನು ದೂರ ಮಾಡಿಕೊಳ್ಳಿ, ಹಗಲುಗನಸು ನಿಮ್ಮ ಅಧಃಪತನಕ್ಕೆ ಕಾರಣವಾಗಲಿದೆ, ಇತರರ ಸಲಹೆ ನಿಮಗೆ ಅಧಿಕ ಲಾಭವನ್ನು ತಂದುಕೊಡಲಿದೆ, ಒತ್ತಡದ ವೇಳಾಪಟ್ಟಿ ನಿಮ್ಮನ್ನು ಕಂಗೆಡಿಸಲಿದೆ, ಧಾರ್ಮಿಕ ಕ್ಷೇತ್ರಗಳ ಭೇಟಿ.
ಮಕರರಾಶಿ: ಅದೇಕೋ ಅಭದ್ರತೆಯ ಭಾವನೆ ಕಾಡಬಹುದು. ಕೆಲವು ವಿಷಯಗಳು ನಿಮಗೆ ಪೂರಕವಾಗಿ ಸಾಗುತ್ತಿಲ್ಲವೆಂಬ ಕೊರಗು. ದೈಹಿಕ ಆಲಸ್ಯ ಕಾಡಬಹುದು. ದಾನ ಕಾರ್ಯಗಳು ಮಾನಸಿಕ ನೆಮ್ಮದಿಯನ್ನು ತರಲಿದೆ, ಮನೆಯಿಂದ ಹೊರ ಹೋಗುವ ಮುನ್ನ ಹಿರಿಯರ ಆಶೀರ್ವಾದವನ್ನು ಪಡೆಯಿರಿ, ಪ್ರವಾಸಿ ತಾಣಗಳ ಭೇಟಿಯಿಂದ ನೆಮ್ಮದಿ ದೊರೆಯಲಿದೆ, ಪಾಲುದಾರಿಗೆ ವ್ಯವಹಾರ ನಿಮಗೆ ಹೆಚ್ಚು ಪ್ರಯೋಜನವನ್ನು ತಂದುಕೊಡಲಿದೆ, ಸಮಸ್ಯೆಗಳಿಗೆ ಸಿಲುಕದಂತೆ ಎಚ್ಚರವಾಗಿರಿ.
ಕುಂಭರಾಶಿ: ವಿಶೇಷಗಳಿಲ್ಲದ ಸಾಮಾನ್ಯ ದಿನ. ಹದಗೆಟ್ಟ ಸಂಬಂಧ ಸುಧಾರಿಸುವುದು. ಕಠಿಣ ದುಡಿಮೆಯಿಂದ ಹೆಚ್ಚು ಫಲ.ಆರ್ಥಿಕವಾಗಿ ಸದೃಢ. ನಿಮ್ಮ ಆತ್ಮವಿಶ್ವಾಸ ವೃದ್ದಿಸಲಿದೆ, ಸ್ಥಳೀಯರು ನಿಮಗೆ ಸಹಕಾರವನ್ನು ನೀಡಲಿದ್ದಾರೆ, ಕುಟುಂಬ ಸದಸ್ಯರಿಗೆ ಹೆಚ್ಚಿನ ಸಮಯವನ್ನು ಅನಗತ್ಯ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಿದೆ, ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಒಳ್ಳೆಯ ದಿನ, ನಿಮ್ಮ ಸಮಯವನ್ನು ವ್ಯರ್ಥ ಮಾಡುವವರಿಂದ ದೂರವಿರಿ.
ಮೀನರಾಶಿ: ಮಾತು, ನಡತೆ ಇತರರಿಗೆ ನೋವು ಕೊಡದಂತಿರಲಿ. ಭಾವಾವೇಶಕ್ಕೆ ಒಳಗಾಗದಿರಿ. ಹದತಪ್ಪಿದ ಮಾತು ಸಂಬಂಧ ಕೆಡಿಸೀತು. ಪ್ರಯಾಣಿಸಲು ದುರ್ಬಲವಾಗಿರುವುದರಿಂದ ದೀರ್ಘ ಪ್ರಯಾಣವನ್ನು ತಪ್ಪಿಸಿ, ನಿಮ್ಮ ಪಾಲಿಗಿಂದು ಉತ್ತಮ ಸಮಯ, ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸನ್ನು ನೀಡುತ್ತದೆ, ಸ್ನೇಹಿತರು ಇಂದು ಮನೆಗೆ ಭೇಟಿ ನೀಡುವ ಸಾಧ್ಯತೆ, ವಿಷಕಾರಿ ಆಹಾರದ ಬಗ್ಗೆ ಎಚ್ಚರಿಕೆಯನ್ನು ವಹಿಸಿ, ನಿಜವಾದ ಪ್ರೀತಿ ನಿಮಗೆ ತಿಳಿಯಲಿದೆ.
Discussion about this post