• Home
  • About Us
  • Contact Us
  • Terms of Use
  • Privacy Policy
Wednesday, June 18, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
Shri News
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

2022ನೇ ಇಸವಿಯ ಜನ್ಮರಾಶಿ ಆಧಾರಿತ ವರ್ಷಭವಿಷ್ಯವನ್ನು ಕೆಳಗೆ ನೀಡಲಾಗಿದೆ.

Shri News Desk by Shri News Desk
Dec 31, 2021, 11:05 am IST
in ಭವಿಷ್ಯ
2022ನೇ ವರ್ಷದ ರಾಶಿ ಭವಿಷ್ಯ

2022ನೇ ವರ್ಷದ ರಾಶಿ ಭವಿಷ್ಯ

Share on FacebookShare on TwitterTelegram

ಮೇಷ ರಾಶಿ: ಮಂಗಳನು ಜನವರಿ 16ರಂದು ಮಾಸದ ಉತ್ತರಾರ್ಧದಲ್ಲಿ ಧನಸ್ಸು ರಾಶಿಯನ್ನು ಪ್ರವೇಶಿಸುತ್ತಿದ್ದು ಇದು ಹಣಕಾಸಿನ ದೃಷ್ಟಿಯಿಂದ ಉತ್ತಮವಾಗಿರಲಿದೆ. ಈ ಗೋಚಾರವು ಶುಭಫಲಗಳ ಸರಣಿಯನ್ನೇ ಹೊತ್ತು ತರಲಿದೆ. ಏಪ್ರಿಲ್‌ 13ರಂದು ಗುರು ತನ್ನ ಸ್ವರಾಶಿಯಾದ ಮೀನರಾಶಿಯಲ್ಲಿ ಸಂಚರಿಸುತ್ತಿದ್ದು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಲಿದ್ದಾರೆ.  ಶನಿಯು ನಿಮ್ಮ 10ನೇ ಮನೆಯಲ್ಲಿ ವರ್ಷದ ಬಹುಭಾಗ ಸಂಚರಿಸುತ್ತಿದ್ದು ಯಶಸ್ಸಿಗೆ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಹೊಸವರ್ಷದ ಆರಂಭವು ಪ್ರೇಮಿಗಳ ಪಾಲಿಗೆ ಅನೇಕ ಸವಾಲುಗಳನ್ನು ತರಲಿದೆ. ವರ್ಷದ ಆರಂಭದಿಂದ ಮಾರ್ಚ್‌ ತಿಂಗಳವರೆಗೆ ಶನಿ ಮತ್ತು ಬುಧರು ಒಟ್ಟಿಗಿದ್ದು ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳನ್ನು ತರಬಹುದು. ಆಗಸ್ಟ್‌ ಮಧ್ಯಭಾಗದಲ್ಲಿ ಮೀನರಾಶಿಯಲ್ಲಿ ಸಂಚರಿಸುವ ಮಂಗಳನಿಂದ ಜೀರ್ಣಕ್ರಿಯಗೆ ಸಂಬಂಧಿಸಿದ ಸಮಸ್ಯೆಗಳನ್ನು ತರುವ ಸಾಧ್ಯತೆಯಿದೆ, ವಿಶೇಷ ಮುನ್ನೆಚ್ಚರಿಕೆ ಹಾಗೂ ತಿನ್ನುವ ಆಹಾರದ ಮೇಲೆ ಗಮನ ಅವಶ್ಯಕ. ಮಂಗಳನು ನಿಮ್ಮ ರಾಶಿಯಲ್ಲೇ ತನ್ನ ಸ್ವರಾಶಿಯಲ್ಲಿ ಆಗಸ್ಟ್‌ 10ರ ತನಕ ಸಂಚರಿಸುಲಿದ್ದು  ನಾಲ್ಕನೆಯ ಮನೆಯನ್ನು ನೋಡುವುದರಿಂದ ಹಾಗೂ ನಂತರ ನಿಮ್ಮ ರಾಶಿಯಿಂದ ದ್ವಿತೀಯದಲ್ಲಿ ಸಂಚರಿಸುವುದರಿಂದ ಈ ಸಮಯದಲ್ಲಿ ನಿಮ್ಮ ಕೌಟುಂಬಿಕ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ವಿದ್ಯೆ, ವೃತ್ತಿ, ಹಾಗೂ ವ್ಯಾಪಾರ ರಂಗಗಳಲ್ಲಿ ಉತ್ತಮ ಫಲಗಳಿವೆ. ನಿಮ್ಮ ಕೆಲಸಕ್ಕೆ ಹೆಚ್ಚಿನ ಸಮಯ ನೀಡಬೇಕಾಗುವುದರಿಂದ ಕುಟುಂಬಕ್ಕೆ ಹೆಚ್ಚು ಸಮಯ ನೀಡಲು ಸಾಧ್ಯವಾಗದು. ಹೊಸ ಸಂಬಂಧಗಳು ಬೆಳೆದು ನಿಮ್ಮ ವೃತ್ತಿ-ವ್ಯಾಪಾರಗಳಿಗೆ ಸಹಕಾರಿಯಾಗಲಿದೆ. ಅವಿವಾಹಿತರಿಗೆ ಆಸಕ್ತಿಕರ ಸಂಬಂಧಗಳು ಉಂಟಾಗುವ ಸಾಧ್ಯತೆಗಳಿವೆ. ಪ್ರೇಮ-ಪ್ರಣಯ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡದ ನೀವು ಕಡೇ ಪಕ್ಷ ನಿರಾಳವಾಗಿ ಇರುವುದನ್ನಾದರೂ ಕಲಿಯಬೇಕಿದೆ. ವರ್ಷಾಂತ್ಯಕ್ಕೆ ಬುಧನು ವಕ್ರಿಯಾಗುವುದರಿಂದ ಸಂವಹನ ತಂತ್ರಜ್ಞಾನ/ಉಪಕರಣಗಳಲ್ಲಿ ಅಡಚಣೆ, ಉದ್ವೇಗ, ಪ್ರಯಾಣದಲ್ಲಿ ಅಡೆ-ತಡೆ, ಹಾಗೂ ವಸ್ತುಗಳನ್ನು ಕಳೆದುಕೊಳ್ಳುವ ಸಂಭವವಿದೆ. ನಿಮ್ಮ ಹಿಂದಿನ ಸಂಗತಿಗಳ ಬಗ್ಗೆ ಹೆಚ್ಚು ಆಲೋಚಿಸುವ ಅಥವಾ ನಿಮ್ಮ ಹಳೆಯ ಸಂಬಂಧಗಳ ಜನರನ್ನು ಭೇಟಿ ಮಾಡುವ ಸಂಭವವಿದೆ.

ವೃಷಭ ರಾಶಿ: ಜೀವನದ ವಿವಿಧ ವಲಯಗಳಲ್ಲಿ ಹೊಸವರ್ಷ ನಿಮಗೆ ಸಾಧಾರಣ ಫಲಗಳನ್ನು ತರಲಿದೆ. ಜನವರಿ 16ರಿಂದ ಧನಸ್ಸುರಾಶಿಯಲ್ಲಿ ಸಂಚರಿಸುವ ಮಂಗಳನ್ನು ನಿಮಗೆ ಜೀವನದ ಅನೇಕ ವಿಷಯಗಳಲ್ಲಿ ಭಾಗ್ಯವನ್ನು ತರಲಿದ್ದಾನೆ. ಉದ್ಯೋಗ ರಂಗದಲ್ಲಿ ಉತ್ತಮ ಫಲಿತಾಂಶಗಳು ದೊರಕಿ ವೃತ್ತಿಜೀವನ ಸಂತೋಷದಾಯಕವಾಗಿರಲಿದೆ.  ನಿಮ್ಮ ರಾಶಿಯಿಂದ 9ನೇ ಮನೆಯಲ್ಲಿರುವ ಶನಿಯು ವಿವಿಧ ಮೂಲಗಳಿಂದ ನಿಮಗೆ ಆದಾಯವನ್ನು ತರಲಿದ್ದಾನೆ. ಏಪ್ರಿಲ್‌ ತಿಂಗಳಲ್ಲಿ ಉಂಟಾಗುವ ವಿವಿಧ ಗ್ರಹಗಳ ಸ್ಥಾನಬದಲಾವಣೆಗಳು ಹೆಚ್ಚಿನ ಧನಸಂಗ್ರಹಕ್ಕೆ ದಾರಿಮಾಡಿಕೊಡಲಿವೆ. ಆದರೂ, ಈ ವರ್ಷದ ಆಗಸ್ಟ್‌ ಮತ್ತು ಅಕ್ಟೋಬರ್‌ ತಿಂಗಳುಗಳ ನಡುವೆ ಕೆಲ ಹಣಕಾಸಿನ ಏರಿಳಿತಗಳು ಕಂಡುಬರಲಿವೆ. ಗುರುವು ಏಪ್ರಿಲ್‌ನಿಂದ ನಿಮ್ಮ ರಾಶಿಯಿಂದ 11ನೇ ಮನೆಯಲ್ಲಿ ಸಂಚರಿಸುವುದರಿಂದ ವೈಭವಯುತ ಜೀವನ ನಡೆಸಲು ಹಾಗೂ ಬಯಕೆಗಳನ್ನು ಈಡೇರಿಸಿಕೊಳ್ಳಲು ಹೆಚ್ಚು ಹಣ ಖರ್ಚು ಮಾಡುವಿರಿ. ನಿಮ್ಮ ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಏರ್ಪಡಲಿದೆ. ವರ್ಷದ ಕೊನೆಯ 3 ತಿಂಗಳು ನಿಮ್ಮ ಮಕ್ಕಳಿಗೆ ಶುಭ ಫಲ ತರಲಿವೆ.

ಮಿಥುನ ರಾಶಿ: ಹೊಸ ವರ್ಷದಲ್ಲಿ ನಿಮಗೆ ಅನೇಕ ಸವಾಲುಗಳೊಂದಿಗೆ ಉತ್ತಮ ಅವಕಾಶಗಳೂ ಒದಗಿಬರಲಿವೆ. ನಿಮ್ಮ ರಾಶಿಯಿಂದ 8ನೇ ಮನೆಯಲ್ಲಿ ಸ್ವರಾಶಿಯಲ್ಲಿರುವ ಶನಿಯು ಜನವರಿಯಿಂದ ಮಾರ್ಚ್‌ ತಿಂಗಳವರೆಗೆ ಧನ ನಷ್ಟ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಇದು ನಿಮಗೆ ಸವಾಲಿನ ಸಮಯವಾಗಬಹುದು. ಫೆಬ್ರವರಿ 17ರಿಂದ ಏಪ್ರಿಲ್‌ವರೆಗೆ ಅಸಿಡಿಟಿ, ಕೀಲುಗಳಲ್ಲಿ ನೋವು, ಹಾಗೂ ಶೀತ-ಕೆಮ್ಮುಗಳಂಥ ಕೆಲ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಆದರೂ, ಏಪ್ರಿಲ್‌ ಮಧ್ಯಭಾಗದಲ್ಲಿ ಸ್ಥಾನ ಬದಲಾಯಿಸುವ ರಾಹು ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರಬಹುದು. ಗುರು ಗ್ರಹವು ನಿಮ್ಮ ರಾಶಿಯಿಂದ ಹತ್ತನೇ ಸ್ಥಾನದಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಏಪ್ರಿಲ್‌ನಿಂದ ಜುಲೈವರೆಗೆ ಶುಭ ಫಲವಿದ್ದು ಉತ್ತಮ ಫಲಿತಾಂಶ ಬರಬಹುದಾದರೂ  ಏಪ್ರಿಲ್‌ 27ರ ನಂತರ ಶನಿಯು 9ನೇ ಮನೆಗೆ ಬರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರವ ವಿದ್ಯಾರ್ಥಿಗಳು ಯಶಸ್ಸನ್ನು ನೋಡಲು ಹೆಚ್ಚು ಕಾಲ ಕಾಯಬೇಕಾಗಬಹುದು. ಮಂಗಳನು ಮೇ ಮತ್ತು ಆಗಸ್ಟ್‌ ತಿಂಗಳುಗಳ ನಡುವೆ ನಿಮ್ಮ ರಾಶಿಯಿಂದ 10ನೇ, 11ನೇ, ಹಾಗೂ 12ನೇ ರಾಶಿಗಳಲ್ಲಿ ಸಂಚರಿಸುತ್ತಿರುವುದರಿಂದ ಉದ್ಯೋಗಾರ್ಥಿಗಳು ಹಾಗೂ ವೃತ್ತಿನಿರತರು ಬಯಸಿದ ಅವಕಾಶಗಳನ್ನು ಪಡೆಯುವರು.

ಕರ್ಕ ರಾಶಿ: ವರ್ಷಾರಂಭದಲ್ಲಿ ಶನಿಯು ನಿಮ್ಮ ರಾಶಿಯಿಂದ 7ನೇ ರಾಶಿಯಲ್ಲಿ ಸಂಚರಿಸುತ್ತಿದ್ದು ಜೀವನದಲ್ಲಿ ಕೆಲ ಸಮಸ್ಯೆಗಳನ್ನು ತರುವ ಸಂಭವವಿದೆ. ಆದರೆ, ಜನವರಿ 16ರಿಂದ ಧನಸ್ಸು ರಾಶಿಯಲ್ಲಿ ಸಂಚರಿಸುವ ಮಂಗಳನು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ ನಿಮ್ಮ ಸಮಸ್ಯೆಗಳು ತಕ್ಷಣವೇ ನಿವಾರಣೆಯಾಗಲಿವೆ. ಆದರೆ, ಮಂಗಳನು ನಿಮ್ಮ ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆಗಳನ್ನು ತರಬಹುದು, ಎಚ್ಚರವಹಿಸಿ, ಅವರ ಆಹಾರ-ಪಾನೀಯಗಳ ಮೇಲೆ ಗಮನವಿಡಿ. ಏಪ್ರಿಲ್‌ನಲ್ಲಿ ಅನೇಕ ಗ್ರಹಸಂಚಾರಗಳು ನಡೆಯಲಿವೆ. ಏಪ್ರಿಲ್‌ ಕಡೆಯಿಂದ ಜುಲೈ ಮಧ್ಯದವರೆಗೆ ಕುಂಭರಾಶಿಯಲ್ಲಿ ಸಂಚರಿಸುವ ಶನಿಯು ಮುಖ್ಯವಾಗಿ ನಿಮ್ಮ ಆರ್ಥಿಕ ಜೀವನದ ಮೇಲೆ ಪ್ರಭಾವ ಬೀರಲಿದ್ದು ನಂತರದ ಸಮಯದಲ್ಲಿ ಆಗಸ್ಟ್‌ವರೆಗೆ ಸಮಯ ಚೆನ್ನಾಗಿರಲಿದೆ. ರಾಹು ಮೇಷರಾಶಿಗೆ ಬಂದಾಗ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿದ್ದು ಸೆಪ್ಟೆಂಬರ್‌ ತಿಂಗಳವರೆಗೆ ಉತ್ತಮ ಫಲಗಳು ಮುಂದುವರೆಯಲಿವೆ. ಮಂಗಳನು ಜೂನ್‌ ಮತ್ತು ಜುಲೈ ತಿಂಗಳುಗಳ ನಡುವೆ ಮೇಷರಾಶಿಯನ್ನು ಪ್ರವೇಶಿಸಲಿದ್ದು ನಿಮ್ಮ ರಾಶಿಯನ್ನು ಪೂರ್ಣದೃಷ್ಟಿಯಿಂದ ನೋಡುವುದರಿಂದ ನಿಮ್ಮ ವೈವಾಹಿಕ ಜೀವನದ ಸಮಸ್ಯೆಗಳಿಂದ ಹೊರಬರಲು ಸಹಾಯವಾಗುತ್ತದೆ.

ಸಿಂಹ ರಾಶಿ: ವರ್ಷಾರಂಭದಲ್ಲಿ ನಿಮ್ಮ ರಾಶಿಯ ಅಧಿಪತಿ ರವಿಯು ನಿಮ್ಮ ರಾಶಿಯಿಂದ 5ನೇ ರಾಶಿಯಲ್ಲಿ ಸಂಚರಿಸುವುದರಿಂದ ನಿಮ್ಮ ಹಣಕಾಸಿನ ಸ್ಥಿತಿಯು ಸುಧಾರಿಸಲಿದೆ. ಜನವರಿ ಅಂತ್ಯಭಾಗದಿಂದ ಮಾರ್ಚ್‌ ತಿಂಗಳವರೆಗಿನ ಮಂಗಳನ ಸಂಚಾರವು ನಿಮ್ಮ ಮಗುವಿನ ಆರೋಗ್ಯವನ್ನು ಬಹುಪಾಲು ಸುಧಾರಿಸುತ್ತದೆ. ನಿಮ್ಮ ರಾಶಿಯಿಂದ 6ನೇ ರಾಶಿಯಲ್ಲಿ ಸಂಚರಿಸುವ ಮಂಗಳನು ಫೆಬ್ರವರಿ 26ರಿಂದ ನಿಮ್ಮ 9ನೇ ಮನೆಯನ್ನು ನೋಡುವುದರಿಂದ ವೃತ್ತಿಯಲ್ಲಿ ದೊಡ್ಡ ಯಶಸ್ಸು ನಿಮ್ಮದಾಗಲಿದೆ. ಆದರೂ, ಫೆಬ್ರವರಿ ಮತ್ತು ಏಪ್ರಿಲ್‌ ತಿಂಗಳುಗಳಲ್ಲಿ ಹೆಚ್ಚಿನ ಗ್ರಹಗಳ ಯುತಿ ಹಾಗೂ ಸಂಚಾರಗಳಿರುವುದರಿಂದ ವಿಷಮ ಪರಿಸ್ಥಿತಿಗಳು ಏರ್ಪಡುವ ಸಾಧ್ಯತೆಗಳಿದ್ದು ನೀವು ಎಚ್ಚರದಿಂದಿರಬೇಕು. ಏಪ್ರಿಲ್‌ ತಿಂಗಳು ಸಿಂಹರಾಶಿಯವರಿಗೆ ಅನೀರೀಕ್ಷಿತ ಸಂಗತಿಗಳಿಂದ ತುಂಬಿರಲಿದೆ. ಏಪ್ರಿಲ್‌ 12ರಂದು ರಾಹು ಮೇಷರಾಶಿಗೆ ಬರಲಿದ್ದು 9ನೇ ಮನೆಗೆ ಬರುವುದರಿಂದ ಕೆಲ ಆರೋಗ್ಯ ಸಮಸ್ಯೆಗಳನ್ನು ಕೊಡಬಹುದು, ಹೆಚ್ಚಿನ ಎಚ್ಚರಿಕೆ ಬೇಕಾಗುತ್ತದೆ.  ಏಪ್ರಿಲ್‌ 13ರಿಂದ ಗುರು ಆಗಸ್ಟ್‌ವರೆಗೆ ಮೀನರಾಶಿಯಲ್ಲಿದ್ದು ನಿಮ್ಮ ರಾಶಿಯಿಂದ 5ನೇ ಮನೆಯನ್ನು ಪೂರ್ಣದೃಷ್ಟಿಯಿಂದ ನೋಡುವುದರಿಂದ ಶುಭಪ್ರದವಾಗಲಿದೆ, ಶಾಲಾ ವಿದ್ಯಾರ್ಥಿಗಳಿಗೆ ಯಶಸ್ಸು. ಏಪ್ರಿಲ್‌ 12ರ ನಂತರ ಮೇಷರಾಶಿಗೆ ಬರಲಿರುವ ರಾಹು ನಿಮ್ಮ ಮೇಲಧಿಕಾರಿಗಳೊಂದಿಗೆ ಉತ್ತಮ ವೃತ್ತಿಸಂಬಂಧ ಹೊಂದಿರಲು ಸಹಕರಿಸುತ್ತಾನೆ. ಇದರಿಂದ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ ಹಾಗೂ ಬಡ್ತಿ/ವೇತನ ಹೆಚ್ಚಳದ ಸಾಧ್ಯತೆಯಿದೆ. ಏಪ್ರಿಲ್‌ ಮತ್ತು ಸೆಪ್ಟೆಂಬರ್‌ ತಿಂಗಳುಗಳ ನಡುವೆ ವಿವಾಹಿತ ದಂಪತಿಗಳು ತಮ್ಮ ನಡುವಿನ ವಿವಾದಗಳನ್ನು ಬಗೆಹರಿಸಿಕೊಂಡು ಪ್ರವಾಸದ ಯೋಜನೆಯನ್ನು ಹಾಕಿಕೊಳ್ಳುವರು. ಆಗಸ್ಟ್‌ 10ರಿಂದ ಅಕ್ಟೋಬರ್‌ವರೆಗೆ ವೃಷಭರಾಶಿಯಲ್ಲಿ ಸಂಚರಿಸುವ ಮಂಗಳನು ಭಾಗ್ಯದ ಬಾಗಿಲನ್ನು ತೆರೆಯಲಿದ್ದಾನೆ.

ಕನ್ಯಾ ರಾಶಿ: ವರ್ಷಾರಂಭದಲ್ಲಿ ಮಂಗಳನು ಧನಸ್ಸು ರಾಶಿಯಲ್ಲಿ ಸಂಚರಿಸುತ್ತಿದ್ದು ಹೆಚ್ಚಿನ ಸಂಪತ್ತು ಹಾಗೂ ಆರ್ಥಿಕ ಸಮೃದ್ಧಿ ತರಲಿದ್ದಾನೆ. ಆದರೂ, ಕೆಲ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆರೋಗ್ಯದ ದೃಷ್ಟಿಯಿಂದ ಏಪ್ರಿಲ್, ಜೂನ್, ಮತ್ತು ಸೆಪ್ಟೆಂಬರ್ ತಿಂಗಳುಗಳು ಚಿಂತೆಗೆ ಕಾರಣವಾಗಬಹುದು. ಫೆಬ್ರವರಿ 26ರಿಂದ ಮಂಗಳನು ನಿಮ್ಮ ರಾಶಿಯಿಂದ 5ನೇ ರಾಶಿಯಲ್ಲಿ ಸಂಚರಿಸುವುದರಿಂದ ಶೈಕ್ಷಣಿಕವಾಗಿ ಆಶಾದಾಯಕ ಫಲಗಳು ಉಂಟಾಗಲಿವೆ. ಮಾರ್ಚ್ ತಿಂಗಳ ಆರಂಭದಲ್ಲಿ 5 ಪ್ರಮುಖ ಗ್ರಹಗಳಾದ ಶನಿ, ಮಂಗಳ, ಬುಧ, ಶುಕ್ರರ ಯುತಿಯು ನಿಮ್ಮ ರಾಶಿಯಿಂದ 5ನೇ ಮನೆಯಲ್ಲಿ ಉಂಟಾಗುವುದರಿಂದ ಹೊಸ ಆದಾಯದ ಮೂಲಗಳು ಉಂಟಾಗಿ ಆರ್ಥಿಕ ಅಭಿವೃದ್ಧಿ ಆಗಲಿದೆ. ಏಪ್ರಿಲ್‌ ಅಂತ್ಯಭಾಗದಿಂದ ಜುಲೈ ಮಧ್ಯಭಾಗದವರೆಗೆ ಶನಿಯು 6ನೇ ಮನೆಯಲ್ಲಿರುವುದರಿಂದ ಕುಟುಂಬ ಸದಸ್ಯರೊಡನೆ ಆಭಿಪ್ರಾಯಭೇದಗಳು ತಲೆ ಎತ್ತಲಿವೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬಯಸುವವರಿಗೆ ಸೆಪ್ಟೆಂಬರ್ ಹಾಗೂ ಡಿಸೆಂಬರ್‌ ತಿಂಗಳುಗಳ ಅವಧಿಯಲ್ಲಿ ಬಯಕೆ ಕೈಗೂಡಲಿದೆ. ಅಕ್ಟೋಬರ್ ತಿಂಗಳಿಂದ ನವೆಂಬರ್ ಮಧ್ಯಭಾಗದವರೆಗೆ ಬುಧನು ನಿಮ್ಮ ರಾಶಿಯಿಂದ 2ನೇ ರಾಶಿ ತುಲಾದಲ್ಲಿ ಸಂಚರಿಸುವುದರಿಂದ ನೀವು ಹಾಗೂ ನಿಮ್ಮ ಪ್ರೀತಿಪಾತ್ರರ ನಡುವಿನ ಸಂಬಂಧ ಗಟ್ಟಿಯಾಗಲಿದೆ.

ತುಲಾ ರಾಶಿ:  ನವವರ್ಷಾರಂಭವು ನಿಮ್ಮ ದೈಹಿಕ, ಮಾನಸಿಕ, ಹಾಗೂ ವೃತ್ತಿಜೀವನದಲ್ಲಿ ಶುಭ ಫಲಗಳನ್ನು ತರಲಿದೆ, ಆದರೆ ವ್ಯಾಪಾರ ಹಾಗೂ ಕುಟುಂಬದ ವಿಷಯಗಳಲ್ಲಿ ಸಮಸ್ಯೆಗಳು ತಲೆದೋರಬಹುದು. ಜನವರಿ ಮಧ್ಯಭಾಗದಲ್ಲಿ ಧನಸ್ಸು ರಾಶಿಯಲ್ಲಿ ಸಂಚರಿಸುವ ಮಂಗಳನು ಉತ್ತಮ ಆರ್ಥಿಕ ಫಲಿತಾಂಶಗಳನ್ನು ಹಾಗೂ ಧನಲಾಭವನ್ನು ತರಲಿದ್ದಾನೆ. ಶನಿ, ಮಂಗಳ, ಬುಧ, ಹಾಗೂ ಶುಕ್ರ ಗ್ರಹರು ಮಾರ್ಚ್‌ ಪ್ರಾರಂಭದಲ್ಲಿ ಚತುರ್‌ಗ್ರಹಯೋಗವನ್ನು ಉಂಟುಮಾಡುತ್ತಿದ್ದು ಆರ್ಥಿಕ ಯಶಸ್ಸು ಹಾಗೂ ಸರಾಗವಾದ ಹಣಕಾಸಿನ ಪರಿಸ್ಥಿತಿಯನ್ನು ನೀಡಲಿದ್ದಾರೆ. ಗುರುಗ್ರಹವು ಏಪ್ರಿಲ್‌ ತಿಂಗಳಲ್ಲಿ ಮೀನರಾಶಿಯಲ್ಲಿ ಸಂಚರಿಸುತ್ತಿದ್ದು ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶ ನೀಡಲಿದ್ದಾನೆ. ಮೇ ಹಾಗೂ ನವೆಂಬರ್ ತಿಂಗಳುಗಳ ನಡವಿನ ಅವಧಿಯಲ್ಲಿ ವಿದೇಶಕ್ಕೆ ಸಂಬಂಧಿಸಿದ ವಿದ್ಯಾಭ್ಯಾಸ ಹಾಗೂ ಉದ್ಯೋಗ ವಿಷಯಗಳಲ್ಲಿ ನಿರೀಕ್ಷೆಗಳು ಈಡೇರಲಿವೆ. ಫೆಬ್ರವರಿ 26ರಂದು ಮಂಗಳನ್ನು ನಿಮ್ಮ ರಾಶಿಯಿಂದ ನಾಲ್ಕನೇ ರಾಶಿಗೆ ಬರಲಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡಲಿದ್ದಾನೆ.  ಏಪ್ರಿಲ್‌ ತಿಂಗಳಲ್ಲಿ ನಿಮ್ಮ ರಾಶಿಯಿಂದ 7ನೇ ರಾಶಿಯಾದ ಮೇಷರಾಶಿಯಲ್ಲಿ ಸಂಚರಿಸುವ ರಾಹು ವಿವಾಹಿತ ದಂಪತಿಗಳ ಹಾಗೂ ಪ್ರೇಮಿಗಳ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಿದ್ದಾನೆ. ಏಕಾಂತ ಜೀವನ ನಡೆಸುತ್ತಿರುವವರಿಗೆ ಅಕ್ಟೋಬರ್ ಹಾಗೂ ನವೆಂಬರ್‌ ತಿಂಗಳುಗಳ ನಡುವಿನ ಅವಧಿಯಲ್ಲಿ ವಿವಾಹ ಕೈಗೂಡುವ ಸಾಧ್ಯತೆಗಳಿವೆ.

ವೃಶ್ಚಿಕ ರಾಶಿ: ಹೊಸ ವರ್ಷವು ಈ ರಾಶಿಯಲ್ಲಿ ಜನಿಸಿದವರಿಗೆ ಮಿಶ್ರಫಲಗಳನ್ನು ತರಲಿದೆ. ವರ್ಷಾರಂಭದಿಂದ ಏಪ್ರಿಲ್‌ವರೆಗೆ ಅನಗತ್ಯ ಖರ್ಚು-ವೆಚ್ಚಗಳು ಉಂಟಾಗಲಿವೆ. ಏಪ್ರಿಲ್ ಅಂತ್ಯಭಾಗದಲ್ಲಿ ಶನಿಯ ಕುಂಭ ರಾಶಿ ಸಂಚಾರವು ವೃತ್ತಿಯಲ್ಲಿ, ಆರ್ಥಿಕವಾಗಿ, ಹಾಗೂ ಕೌಟುಂಬಿಕ ಜೀವನದಲ್ಲಿ ಮಿಶ್ರಫಲಗಳನ್ನು ತರಲಿದೆ. ಏಪ್ರಿಲ್‌ ಮಧ್ಯಭಾಗದ ಗುರು ಗ್ರಹದ ಮೀನರಾಶಿ ಸಂಚಾರವು ನಿಮ್ಮ ರಾಶಿಯಿಂದ 5ನೇ ರಾಶಿಯಲ್ಲಿ ಉಂಟಾಗಲಿದ್ದು ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಮುಖ ಸುಧಾರಣೆ ಉಂಟುಮಾಡಲಿದೆ. ಏಪ್ರಿಲ್‌ 12ರಂದು ರಾಹು ತನ್ನ ಸ್ಥಾನವನ್ನು ಬದಲಿಸುವುದರಿಂದ ಆರೋಗ್ಯದಲ್ಲಿದ ಸುಧಾರಣೆಯಾಗಲಿದೆ. ಮಾನಸಿಕ ಒತ್ತಡ ಇರಲಿದ್ದು ಅದು ನಿಮ್ಮ ಜೀವನದ ಇತರ ವಿಷಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಉತ್ತಮ ಗ್ರಹಸ್ಥಿತಿಗಳಿಂದಾಗಿ ನೀವು ಮೇ ಮತ್ತು ಸೆಪ್ಟೆಂಬರ್‌ ತಿಂಗಳುಗಳ ನಡುವೆ ಅಧಿಕ ಧನ ಸಂಪಾದಿಸುವ ಸಾಧ್ಯತೆಯಿದೆ. ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ನೀವು ನಿಮ್ಮ ತಾಯಿಯ ಹಾಗೂ ಸಂಗಾತಿಯ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಶನಿಯು ನಿಮ್ಮ ರಾಶಿಯಿಂದ 4ನೇ ಮನೆಯಾದ ಕುಂಭರಾಶಿಯಲ್ಲಿ ಸಂಚರಿಸುವುದರಿಂದ ನಿಮ್ಮ ಪ್ರೇಮಸಂಬಂಧದಲ್ಲಿ ಸಣ್ಣ-ಪುಟ್ಟ ವಿಷಯಗಳೀಗೆ ವಾದ-ವಿವಾದಗಳು ಹಾಗೂ ಹೊಡೆದಾಟಗಳ ಪರಿಸ್ಥಿತಿಯೂ ಉದ್ಭವಿಸಬಹುದು. ನೀವು ನಿಮ್ಮ ಸಂಬಂಧ ಹಾಗೂ ಸಂಗಾತಿಯ ಮೇಲೆ ನಂಬಿಕೆ ಇಟ್ಟು ಮುನ್ನಡೆದರೆ ಇವನ್ನು ನಿವಾರಿಸಿಕೊಳ್ಳಬಹುದು. ಸೆಪ್ಟೆಂಬರ್‌ ಹಾಗೂ ನವೆಂಬರ್‌ ನಡುವಿನ ಶುಕ್ರನ ಕನ್ಯಾರಾಶಿಯ ನೀಚಸ್ಥಿತಿಯ ಹಾಗೂ 11ನೇ ಸ್ಥಾನದ ಸಂಚಾರವು ನೀವು ಹಾಗೂ ನಿಮ್ಮ ಸಂಗಾತಿಯು ಪರಸ್ಪರರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಹಾಗೂ ದೀರ್ಘಸಮಯ ಜೊತೆಯಿರಲು ಸಹಾಯಮಾಡುತ್ತದೆ.

ಧನಸ್ಸು ರಾಶಿ: ಹೊಸವರ್ಷವು ನಿಮಗೆ ಆರ್ಥಿಕವಾಗಿ ಉತ್ತಮ ಫಲಗಳನ್ನು ಹೊತ್ತು ತರಲಿದೆ. ವರ್ಷಾರಂಭದಲ್ಲಿ ಮಂಗಳನು ನಿಮ್ಮ ರಾಶಿಯಲ್ಲೇ ಸಂಚರಿಸುತ್ತಿದ್ದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಒಂದು ಹಂತದವರೆಗೆ ಸುಧಾರಿಸಲು ಸಹಕರಿಸುತ್ತಾನೆ. ವರ್ಷಾರಂಭವು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರಲಿದೆ. ಫೆಬ್ರವರಿಯಿಂದ ಜೂನ್‌ವರೆಗೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲಿದ್ದೀರಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿರುವವರು ನಿಮ್ಮ ನಿರೀಕ್ಷೆಗೂ ಮೀರಿ ಸಾಧನೆ ಮಾಡುವ ಆತ್ಮವಿಶ್ವಾಸ ಹೊಂದಿರುತ್ತೀರಿ. ಮಂಗಳನ ಧನಸ್ಸುರಾಶಿಯ ಸಂಚಾರವು ವರ್ಷಾರಂಭದಲ್ಲಿ ಮಾನಸಿಕ ಚಿಂತೆಗಳಿಗೆ ಹಾಗೂ ಒತ್ತಡಗಳಿಗೆ ಕಾರಣವಾಗಬಹುದು ಹಾಗೂ ಮಂಗಳನ 7ನೇ ಮನೆಯ ಮೇಲಿನ ದೃಷ್ಟಿ ಕೌಟುಂಬಿಕ ಜೀವನದಲ್ಲಿ ವಾದವಿವಾದಗಳನ್ನು ಹುಟ್ಟುಹಾಕಬಹುದು. ಜನವರಿಯಲ್ಲಿ ರವಿಯ ಮಕರ ರಾಶಿಯಲ್ಲಿ ಸಂಚಾರ ಹಾಗೂ ಶನಿಯೊಂದಿಗಿನ ಯುತಿ ನಿಮ್ಮ ಪ್ರೇಮ/ವೈವಾಹಿಕ ಜೀವನದಲ್ಲಿ ತಪ್ಪುತಿಳುವಳಿಕೆ ಹಾಗೂ ಸಮಸ್ಯೆಗಳನ್ನು ತಂದೊಡ್ಡಬಹುದು, ಮಾತಿನ ಮೇಲೆ ಹಿಡಿತವಿರಲಿ. ಏಪ್ರಿಲ್ ಮತ್ತು ಜೂನ್‌ ತಿಂಗಳ ನಡುವೆ ಗುರುವು ತನ್ನ ಸ್ವರಾಶಿಯಾದ ಮೀನರಾಶಿಯಲ್ಲಿ ಇರುವಾಗ ಪರಿಸ್ಥಿತಿಯಲ್ಲಿ ಸಂಪೂರ್ಣ ಬದಲಾವಣೆ ತರಬಹುದು.ಜೂನ್‌ ತಿಂಗಳಿಂದ ಜುಲೈ 20ರವರೆಗೆ ನಿಮ್ಮ ದಾಂಪತ್ಯ ಜೀವನದಲ್ಲಿ ಪ್ರಮುಖ ಸುಧಾರಣೆ ಆಗಲಿದ್ದು, ವರ್ಷಾಂತ್ಯದಲ್ಲಿ ಗುರು ನಿಮ್ಮ ರಾಶಿಯಿಂದ 4ನೇ ಸ್ಥಾನದಲ್ಲಿ ಸಂಚರಿಸುವ ಸಮಯದಲ್ಲಿ ನೀವು ಸುಖಮಯ ದಾಂಪತ್ಯ ಜೀವನವನ್ನು ಹೊಂದಲಿದ್ದೀರಿ. ನಿಮ್ಮ ವೃತ್ತಿಜೀವನದಲ್ಲಿ  ನವೆಂಬರ್‌ ತಿಂಗಳಿನಿಂದ ಉತ್ತಮ ಉದ್ಯೋಗಾವಕಾಶಗಳು ಸಿಗಬಹುದು. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಶುಕ್ರನು ಜೂನ್‌ ತಿಂಗಳಲ್ಲಿ ನಿಮ್ಮ ರಾಶಿಯಿಂದ 6ನೇ ರಾಶಿಯಲ್ಲಿ ಸಂಚರಿಸುವುದರಿಂದ ಯಾವುದಾದರೂ ಪ್ರಮುಖ ಆರೋಗ್ಯ ಸಮಸ್ಯೆ ತಲೆದೋರುವ ಸಾಧ್ಯತೆಯಿದ್ದು ಅಕ್ಟೋಬರ್‌ವರೆಗೆ ಎಚ್ಚರಿಕೆಯಿಂದ ಇರುವುದು ಅವಶ್ಯಕ.

ಮಕರ ರಾಶಿ: ಹೊಸವರ್ಷವು ಈ ರಾಶಿಯವರಿಗೆ ಏರಿಳಿತಗಳಿಂದ ತುಂಬಿರಲಿದೆ. ರಾಶ್ಯಾಧಿಪತಿ ಶನಿಯು ತನ್ನ ಸ್ವರಾಶಿಯಲ್ಲೇ ಇರುವುದು ವೃತ್ತಿ, ಆರ್ಥಿಕತೆ, ಹಾಗೂ ಶೈಕ್ಷಣಿಕರಂಗದಲ್ಲಿ ಶುಭಫಲಗಳನ್ನು ನೀಡಲಿದೆ. ಆದರೂ, ಶನಿಯ ಏಪ್ರಿಲ್‌ ತಿಂಗಳ ಗೋಚಾರದಿಂದ ಜೀವನದ ಅನೇಕ ವಲಯಗಳಲ್ಲಿ ಸವಾಲುಗಳು ಎದುರಾಗಲಿವೆ. ಮಂಗಳನ 12ನೇ ರಾಶಿಯ ಸಂಚಾರವು ಹಣವನ್ನು ಒಟ್ಟುಗೂಡಿಸಲು ತಡೆ ಉಂಟುಮಾಡಲಿದೆ. ಆದರೆ, ವ್ಯಾಪಾರಿಗಳಿಗೆ ಸೆಪ್ಟೆಂಬರ್ ತಿಂಗಳಿಂದ ವರ್ಷಾಂತ್ಯದವರೆಗೆ ಶುಭ ಫಲಗಳು ಸಿಗಲಿವೆ. ಶನಿಯ ಕುಂಭ ರಾಶಿ ಸಂಚಾರವು ಏಪ್ರಿಲ್‌ ತಿಂಗಳಲ್ಲಿ ಕೆಲ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳನ್ನು ತರಲಿದೆ. ಆಹಾರದ ಕಡೆ ಗಮನ ಅತ್ಯವಶ್ಯಕ. ಜನವರಿಯಲ್ಲಿ ಮಂಗಳನ ಸಂಚಾರವು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಶ್ರಮದ ಅವಶ್ಯಕತೆಯನ್ನು ಉಂಟುಮಾಡುತ್ತದೆ. ಕೇತುವಿನ ವೃಶ್ಚಿಕರಾಶಿ ಸಂಚಾರವು ಕೌಟುಂಬಿಕ ಸಮಸ್ಯೆಗಳನ್ನು ತರುವ ಸಾಧ್ಯತೆಯಿದೆ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಂಬಂಧ ಅವಶ್ಯಕ ಹಾಗೂ ವಾದವಿವಾದಗಳಿಂದ ದೂರ ಇರುವುದು ಉತ್ತಮ. ಪ್ರೇಮಿಗಳಿಗೆ ಹಾಗೂ ದಂಪತಿಗಳಿಗೆ ಮಿಶ್ರಫಲವಿರಲಿದೆ. ಪ್ರೇಮಿಗಳಿಗೆ ಏಪ್ರಿಲ್‌ ತಿಂಗಳ ಗುರುವಿನ ನಿಮ್ಮ ರಾಶಿಯಿಂದ 3ನೇ ಮನೆಯ ಸಂಚಾರ ಶುಭಫಲಗಳನ್ನು ಉಂಟುಮಾಡಲಿದೆ. ವರ್ಷಾರಂಭದಲ್ಲಿ ವಿವಾಹಿತರಿಗೆ ದಾಂಪತ್ಯ ಜೀವನದಲ್ಲಿ ಕೆಲ ಸಣ್ಣ-ಪುಟ್ಟ ಸಮಸ್ಯೆಗಳಿದ್ದರೂ ಆಗಸ್ಟ್‌ ನಂತರ ಉತ್ತಮ ದಾಂಪತ್ಯ ಜೀವನವಿರಲಿದ್ದು ವರ್ಷಾಂತ್ಯವು ಅದ್ಭುತವಾಗಿರಲಿದೆ.

ಕುಂಭ ರಾಶಿ: ಹೊಸವರ್ಷವು ಈ ರಾಶಿಯವರಿಗೆ ಬಹುತೇಕ ಶುಭವಾಗಿರಲಿದೆ, ಆರ್ಥಿಕವಾಗಿಯೂ ಉತ್ತಮವಾಗಿರಲಿದೆ. ಜನವರಿಯಲ್ಲಿ ಮಂಗಳನ ಗೋಚರವು ಇದಕ್ಕೆ ಸಹಾಯಕವಾಗಲಿದೆ. ನಾಲ್ಕು ಮುಖ್ಯ ಗ್ರಹಗಳಾದ ಶನಿ, ಮಂಗಳ, ಬುಧ, ಹಾಗೂ ಶುಕ್ರರ ಯುತಿಯು ಮಾರ್ಚ್‌ ತಿಂಗಳ ಆರಂಭದಲ್ಲಿ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಹಾಗೂ ಸಂಪತ್ತನ್ನು ತರಲಿದೆ. ಆದರೆ, ಏಪ್ರಿಲ್‌ 12ರ ರಾಹು ಗ್ರಹದ ಗೋಚಾರವು ನಿಮ್ಮ ರಾಶಿಯಿಂದ 3ನೇ ಮನೆಯಲ್ಲಿ ಆಗುತ್ತಿದ್ದು ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಬಹುದು, ಎಚ್ಚರವಿರಲಿ. ಜನವರಿ ತಿಂಗಳಲ್ಲಿ ಹಾಗೂ ಫೆಬ್ರವರಿಯಿಂದ ಮೇ ತಿಂಗಳವರೆಗೆ ಗ್ರಹಗಳ ಗೋಚಾರ ಪ್ರಭಾವದಿಂದ ಬಾಹ್ಯ ಸಮಸ್ಯೆಗಳು ತಲೆದೋರಬಹುದು. ರಾಹುವಿನ 3ನೇ ಮನೆಯ ಸಂಚಾರದಿಂದ ನಿಮ್ಮ ಸಹೋದರರಿಗೆ ಸಮಸ್ಯೆಗಳು ಉಂಟಾಗಬಹುದು. ಮಂಗಳನ ಧನಸ್ಸು ರಾಶಿ ಸಂಚಾರದಿಂದ ಜನವರಿ ತಿಂಗಳಲ್ಲಿ ಉದ್ಯೋಗ-ವ್ಯಾಪಾರಗಳಲ್ಲಿ ದೊಡ್ಡ ಯಶಸ್ಸು ಸಿಗಬಹುದು. ವಿವಾಹಿತರಿಗೆ ಹೊಸವರ್ಷವು ಮಿಶ್ರಫಲಗಳನ್ನು ತರಲಿದೆ. ಸಂಗಾತಿಯೊಡನೆ ಹಾಗೂ ಹಾಗೂ ಅತ್ತೆ-ಮಾವಂದಿರೊಂದಿಗೆ ವಾದ-ವಿವಾದಗಳು ತಲೆದೋರಲಿದ್ದು ಏಪ್ರಿಲ್‌ ತಿಂಗಳವರೆಗೂ ಮುಂದುವರೆಯಬಹುದು. ಏಪ್ರಿಲ್‌ ತಿಂಗಳಲ್ಲಿ ಗುರು ನಿಮ್ಮ ರಾಶಿಯಿಂದ 2ನೇ ಮನೆಯಲ್ಲಿ ಸಂಚರಿಸುವುದರಿಂದ ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿಬರಬಹುದು

ಮೀನ ರಾಶಿ: ಹೊಸವರ್ಷವು ಈ ರಾಶಿಯವರಿಗೆ ಬಹುತೇಕ ಅತ್ಯಂತ ಶುಭವಾಗಿರಲಿದೆ. ವರ್ಷದ ಹೆಚ್ಚಿನ ಸಮಯ ನೀವು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರಲಿದ್ದೀರಿ. ಶನಿಯ ಏಪ್ರಿಲ್‌ ಗೋಚಾರವು ಹೊಸ ಆದಾಯದ ಮೂಲಗಳನ್ನು ತರಲಿದೆ. ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ ಸತತ ಗ್ರಹಗಳ ಸ್ಥಾನಪಲ್ಲಟಗಳಿಂದ ಆರ್ಥಿಕ ಏರಿಳಿತಗಳನ್ನು ಕಾಣಲಿದ್ದೀರಿ. ಉದ್ಯೋಗದಲ್ಲಿ ನಿರೀಕ್ಷಿತ ಫಲಗಳು ದೊರೆಯಲಿವೆ. ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಇರಲಿದೆ. ಬಡ್ತಿ ಹಾಗೂ ವೇತನದಲ್ಲಿ ಹೆಚ್ಚಳದ ಸಾಧ್ಯತೆಯೂ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಶನಿಯು ಏಪ್ರಿಲ್‌ ತಿಂಗಳ ಅಂತ್ಯದಲ್ಲಿ ನಿಮ್ಮ ರಾಶಿಯಿಂದ 12ನೇ ಸ್ಥಾನದಲ್ಲಿ ಸಂಚರಿಸುವುದರಿಂದ ಕುಟುಂಬದಿಂದ ಕೆಲ ದಿನ ದೂರ ಇರಬೇಕಾದ ಸ್ಥಿತಿ ಒದಗಬಹುದು. ಮೇ ಮತ್ತು ಆಗಸ್ಟ್‌ ತಿಂಗಳ ನಡುವೆ ನಿಮ್ಮ ತಾಯಿಯ ಆರೋಗ್ಯ ಸುಧಾರಿಸಲಿದೆ. ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಶನಿಯ ನಿಮ್ಮ ರೋಗಸ್ಥಾನವನ್ನು ಪೂರ್ಣದೃಷ್ಟಿಯಿಂದ ನೋಡುವುದರಿಂದ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಮಂಗಳ, ಶುಕ್ರ, ಹಾಗೂ ಗುರುಗ್ರಹರ ಯುತಿಯು ಮೇ ತಿಂಗಳಲ್ಲಿ ಉಂಟಾಗುವುದರಿಂದ ನಿಮ್ಮ ಕುಟುಂಬದ ಹಾಗೂ ಹಿರಿಯರ ಸದಾಶಯ ಹಾಗೂ ಆಶೀರ್ವಾದಗಳು ಲಭಿಸಲಿವೆ. ವಿವಾಹಿತರಿಗೆ ಈ ವರ್ಷ ಶುಭದಾಯಕವಾಗಿದೆ, ವರ್ಷಾರಂಭವು ಅತ್ಯಂತ ಶುಭಕರವಾಗಿದೆ. ಏಪ್ರಿಲ್‌ 21ರ ನಂತರ ವಿವಾಹಿತರಲ್ಲಿ ಹೊಸತನ ಕಾಣಲಿದೆ. ಪ್ರೇಮಿಗಳಿಗೆ ಈ ವರ್ಷ ಮಿಶ್ರಫಲ ನೀಡಲಿದೆ. ಬುಧನ ಗೋಚಾರ ಹಾಗೂ ದೃಷ್ಟಿಗಳಿಂದಾಗಿ ಪ್ರೇಮ ಸಂಬಂಧಗಳಲ್ಲಿ ಅನಿರೀಕ್ಷಿತವಾಗಿ 3ನೇ ವ್ಯಕ್ತಿಯ ಪ್ರವೇಶವಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್‌ ಹಾಗೂ ನವೆಂಬರ್‌ ತಿಂಗಳುಗಳ ನಡುವೆ ಸಣ್ಣ-ಪುಟ್ಟ ವಿಷಯಗಳಿಗೆ ವಾದ-ವಿವಾದ ಮಾಡಿಕೊಳ್ಳಬೇಡಿ, ಮಾತಿನ ಮೇಲೆ ಗಮನವಿರಲಿ.

Find out what is there in store for you astrologically in 2022

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್‌ ಸರಣಿ: ಕನ್ನಡಿಗ ರಾಹುಲ್‌ಗೆ ನಾಯಕತ್ವ ಸಾಧ್ಯತೆ

ಇದನ್ನೂ ಓದಿ: Cricket: 2018-20ರ ಅವಧಿಯಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದೆ: ಅಶ್ವಿನ್‌

Tags: TOP NEWSYearly Predictions
ShareSendTweetShare
Join us on:

Related Posts

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

12 DEC ( ನಿತ್ಯ ಭವಿಷ್ಯ)

12 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Two killed: ಬೈಕ್‌ಗೆ ಮಹೀಂದ್ರಾ ಪಿಕಪ್ ಡಿಕ್ಕಿ ಇಬ್ಬರು ಸಾವು

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಹೀಗೆ ಮಾಡಿದರೆ ಏನಾಗುತ್ತದೆ..?

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In