ಹಣಕಾಸು ಪರಿಸ್ಥಿತಿಯಲ್ಲಿನ ಅನಿಶ್ಚಿತ ಏರಿಳಿಕೆಗಳು ಚಿನ್ನ ಹಣದುಬ್ಬರಕ್ಕೆ ರಕ್ಷಾಕವಚವಾಗಿ ಪರಿಣಮಿಸಿದ್ದು ಒಂದು ಅತಿಮುಖ್ಯ ಹೂಡಿಕೆಯ ಮಾರ್ಗವಾಗಿದೆ. ಈ ಕೆಳಕಂಡ ವಿವರಗಳನ್ನು ಕೇವಲ ನಮ್ಮ ಓದುಗರ ಮಾಹಿತಿಯ ಸೌಲಭ್ಯಕ್ಕಾಗಿ ನೀಡಲಾಗಿದ್ದು ಪ್ರಮುಖ ಚಿನ್ನ-ಬೆಳ್ಳಿ ವರ್ತಕರಿಂದ ಸಂಗ್ರಹಿಸಲಾಗಿದೆ.
ನೀವೇನಾದರೂ ಚಿನ್ನ/ಬೆಳ್ಳಿ ಖರೀದಿಸಲು ಆಸಕ್ತಿ ಹೊಂದಿದವರಾಗಿದ್ದರೆ ಚಿನ್ನ-ಬೆಳ್ಳಿ ದರಗಳನ್ನು ಒಮ್ಮೆ ಪರಿಶೀಲಿಸಿ.
22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂ 4,569/= ರೂ.ಗಳು, 8 ಗ್ರಾಂ 36,552/= ರೂ.ಗಳು 10 ಗ್ರಾಂ 45,690/= ರೂ.ಗಳು, ಮತ್ತು 100 ಗ್ರಾಂ 4,56,900/= ರೂ.ಗಳು. ಮಾರುಕಟ್ಟೆಯ ನೆನ್ನೆಯ ಬೆಲೆಗಳು ಕ್ರಮವಾಗಿ 4,568/= ರೂ.ಗಳು, 36,544/= ರೂ.ಗಳು, 45,680/= ರೂ.ಗಳು, ಹಾಗೂ 4,56,800/=ರೂ.ಗಳು ಆಗಿದ್ದು ಕ್ರಮವಾಗಿ 1 ರೂ., 8 ರೂ., 10 ರೂ., ಹಾಗೂ 100 ರೂ. ಗಳ ಹೆಚ್ಚಳ ಕಂಡಿವೆ.
24 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂ 4,669/= ರೂ.ಗಳು, 8 ಗ್ರಾಂ 37,352/= ರೂ.ಗಳು 10 ಗ್ರಾಂ 46,690/= ರೂ.ಗಳು, 100 ಗ್ರಾಂ 4,66,900/= ರೂ.ಗಳು. ನೆನ್ನೆಯ ಮಾರುಕಟ್ಟೆಯಲ್ಲಿ ಇದೇ ಬೆಲೆಗಳು ಕ್ರಮವಾಗಿ 4,668/= ರೂ.ಗಳು, 37,344/= ರೂ.ಗಳು, 46,680/= ರೂ.ಗಳು, ಹಾಗೂ 4,66,800/=ರೂ.ಗಳು ಆಗಿದ್ದು ಕ್ರಮವಾಗಿ 1 ರೂ, 8 ರೂ, 10 ರೂ, ಮತ್ತು 100 ರೂ.ಗಳ ಏರಿಕೆ ಕಂಡಿದೆ.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆಗಳು (ಕ್ರಮವಾಗಿ 22 ಕ್ಯಾರಟ್ ಮತ್ತು 24 ಕ್ಯಾರಟ್) ಹೀಗೆವೆ: ಬೆಂಗಳೂರು ರೂ.43,600/= ಮತ್ತು ರೂ.47,560/=, ಮುಂಬೈ ರೂ.45,690/= ಮತ್ತು ರೂ.46,690/=, ದೆಹಲಿ ರೂ.45,910/= ಮತ್ತು ರೂ.50,090/=, ಕೋಲ್ಕತ್ತಾ ರೂ.46,160/= ಮತ್ತು ರೂ.48,860/=, ಹಾಗೂ ಹೈದರಾಬಾದ್ ರೂ.43,600/= ಮತ್ತು ರೂ.47,560/=.
ಇನ್ನು ಬೆಳ್ಳಿಯ ದರವನ್ನು ನೋಡುವುದಾದರೆ ಬೆಂಗಳೂರಿನಲ್ಲಿ ಒಂದು ಕೆಜಿಗೆ 60,600 ರೂಪಾಯಿಗಳಾಗಿದ್ದು ಸುಮಾರು 100 ರೂಪಾಯಿಗಳ ಏರಿಕೆ ಕಂಡಿದೆ, ಚೆನ್ನೈನಲ್ಲಿ 64,800/= ರೂಪಾಯಿಗಳಾಗಿದ್ದು ಸ್ಥಿರತೆ ಕಾದುಕೊಂಡಿದೆ, ಮುಂಬೈನಲ್ಲಿಯೂ 100 ರೂಪಾಯಿಗಳ ಏರಿಕೆ ಕಂಡಿದ್ದು ಒಂದು ಕೆಜಿಯ ಬೆಲೆ 60,600 ರೂಪಾಯಿಗಳಾಗಿತ್ತು.
ಇಂದು ಎಲ್ಲಾ ಮಹಾನಗರಗಳಲ್ಲಿಯೂ ಚಿನ್ನದ ದರ ಅಲ್ಪಪ್ರಮಾಣದಲ್ಲಿ ಏರಿಕೆ ಕಂಡಿದ್ದು ಚಿನ್ನ ಖರೀದಿಸುವವರಿಗೆ ಪ್ರೋತ್ಸಾಹದಾಯಕವಾಗಿದೆ ಎನ್ನಬಹುದಾಗಿದೆ. ಅದರೆ, ಬೆಳ್ಳಿಯ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದ್ದು ಗ್ರಾಹಕರು ಕೊಳ್ಳುವ ಮನಸ್ಸು ಮಾಡಬಹುದಾಗಿದೆ.
*ವಿ.ಸೂ.: ಮೇಲ್ಕಾಣಿಸಿರುವ ಚಿನ್ನದ ಬೆಲೆಗಳು ಕೇವಲ ಸೂಚಿತ ದರಗಳಾಗಿದ್ದು ಜಿಎಸ್‌ಟಿ, ಟಿಸಿಎಸ್, ಮತ್ತು ಇತರ ತೆರಿಗೆಗಳನ್ನು ಒಳಗೊಂಡಿರುವುದಿಲ್ಲ. ನಿಖರವಾದ ಬೆಲೆಗಳಿಗೆ ನಿಮ್ಮ ಸಮೀಪದ ಚಿನ್ನ-ಬೆಳ್ಳಿ ವರ್ತಕರನ್ನು ಸಂಪರ್ಕಿಸಿ.
(ಮಾಹಿತಿ: ವಿವಿಧ ಜಾಲತಾಣಗಳು)

























Discussion about this post