ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದ್ದು, ಜನಜೀವನ ಮೂರಾಬಟ್ಟೆಯಂತಾಗಿದೆ. ಹಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನರು ನಿದ್ದೆ ಇಲ್ಲದೇ ಇಡೀ ರಾತ್ರಿ ನೀರು ಹೊರ ಹಾಕೋದರಲ್ಲಿ ನಿರತರಾಗಿದ್ದರು.
ಹಬ್ಬದ ಖರೀದಿಗೆ ಹೋದವರು, ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು ಮಳೆಯಿಂದಾಗಿ ಮನೆಗೆ ತೆರಳಲು ಪರದಾಡುವಂತಾಗಿದೆ. ರಸ್ತೆಗಳಲ್ಲಿ ಎರಡು ಮೂರು ಅಡಿಗಳಷ್ಟು ನೀರು ಹರಿದ್ದು ವಾಹನ ಸವಾರರು ಪರದಾಡುವಂತಾಗಿತ್ತು.
ಮಲ್ಲೇಶ್ವರದ ಶ್ರೀರಾಮಮಂದಿರ ಮೈದಾನದ ಪಟಾಕಿ ಮಳಿಗೆಗಳಿಗೆ ನೀರು ನುಗ್ಗಿ, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಯಾವ ಏರಿಯಾದಲ್ಲಿ ಎಷ್ಟು ಮಳೆಯಾಗಿದೆ.?
ವಿವಿ ಪುರಂ – 137.0 ಮಿ.ಮೀ, ನಾಗರಭಾವಿ – 103.5 ಮಿ.ಮೀ, ದೊಡ್ಡನಕ್ಕುಂದಿ – 127.5 ಮಿ.ಮೀ, ಅಗ್ರಹಾರ ದಾಸರಹಳ್ಳಿ – 40.0 ಮಿ.ಮೀ, ಸಂಪಗಿರಾಮನಗರ – 63.0 ಮಿ.ಮೀ, ನಾಯಂಡನ ಹಳ್ಳಿ 87.5 ಮಿ.ಮೀ, ಹಂಪಿ ನಗರ – 120.5 ಮಿ.ಮೀ.ನಷ್ಟು ಮಳೆಯಾಗಿದೆ.
ಮೆಜೆಸ್ಟಿಕ್, ಶಾಂತಿನಗರ, ವಿಧಾನಸೌಧ, ರಾಜಾಜಿ ನಗರ, ಮತ್ತಿಕೆರೆ, ಯಶವಂತಪುರ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ.
ಇದನ್ನೂ ಓದಿ: petrol-diesel prices: ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಭಾರೀ ಇಳಿಕೆ
ಇದನ್ನೂ ಓದಿ: Mental Health: ಈ ಎರಡು ನಿಮಿಷದ ಮಾನಸಿಕ ವ್ಯಾಯಾಮ ಮಾಡಿದರೆ ಸ್ಟ್ರೆಸ್ ಕಡಿಮೆಯಾಗುತ್ತೆ
Torrential rain in Bengaluru

























Discussion about this post