ಹಾಸನ : ಅತ್ಯಾಧುನಿಕ ಯಂತ್ರೋಪಕರಣಗಳು, ಮುಂದುವರೆದ ತಂತ್ರಜ್ಞಾನ ಬಳಸಿ ಬರುವ ದಿನಗಳಲ್ಲಿ ಅಧಿಕ ಹಾಲನ್ನು ಉತ್ಪಾದನಾ ಯೋಜನೆಯನ್ನು ದೇಶದ ಪ್ರತಿಷ್ಠಿತ ಹಾಲು ಉತ್ಪಾದನಾ ಘಟಕ ನಂದಿನಿ ಇದೀಗ ತಯಾರು ಮಾಡಿದೆ.
167 ಕೋಟಿ ರೂಪಾಯಿ ವೆಚ್ಚದ ಮೌಲ್ಯದಲ್ಲಿ ಈ ಘಟಕವು ಸಿದ್ಧವಾಗಿದೆ. ಅಕ್ಟೋಬರ್ ತಿಂಗಳಿನಿಂದ ಕಾರ್ಯಾರಂಭ ಮಾಡಲಿದ್ದು, ಪ್ರಸ್ತುತ ಪ್ರಾಯೋಗಿಕ ಚಾಲನೆ ನೀಡಲಾಗಿದೆ. ಕೊರೋನ ಹೆಮ್ಮಾರಿ ದೇಶವನ್ನೇ ಆಕ್ರಮಿಸಿದ ಕಾರಣ ಕಳೆದ ವರ್ಷವೇ ಚಾಲನೆ ದೊರೆಯಲಿಲ್ಲ.
ಮುಂದಿನ ತಿಂಗಳಿನಿಂದ ಕಾರ್ಯಾರಂಭ ಆಗಲಿದೆ ಎಂಬುದು ಬಹುತೇಕ ಖಚಿತವಾಗಿದೆ. ಪ್ರತೀ ಗಂಟೆಗೆ ಮೂವತ್ತು ಸಾವಿರ ಬಾಟಲ್ನಂತೆ ದಿನಕ್ಕೆ 5 ಲಕ್ಷದ 40 ಸಾವಿರ ಬಾಟಲ್ ಹಾಲು ತಯಾರಾಗಲಿದೆ. ಬಾದಾಮ್ ಮಿಲ್ಕ್, ಪಿಸ್ತಾ, ಸ್ಟ್ರಾಬೆರಿ, ವೆನಿಲ್ಲಾ, ಕಾರಾಮೆಲ್, ಬನಾನ, ಮ್ಯಾಂಗೋ, ಪೆಪ್ಪರ್, ಚಾಕೋ, ಕೇಸರ್, ಸೋಯಾ ಹೀಗೆ ಹತ್ತಾರು ಫ್ಲೇವರ್ಗಳಲ್ಲಿ ಸುವಾಸಿತ ಹಾಲು ಉತ್ಪಾದನೆಯಾಗಿ ಬಾಟಲ್ ಸೇರಲಿದೆ.
ಹೊಸ ಆವಿಷ್ಕಾರಗಳೊಂದಿಗೆ ಉತ್ತಮ ಪ್ರಗತಿ ಹೊಂದಿ ಹೈನುಗಾರಿಕೆ ನಂಬಿರುವ ರೈತರಿಗೆ ಪೂರಕವಾಗುವ ಬೆಲೆ ಸಿಕ್ಕರೆ ರೈತನ ಜೀವನ ಕೂಡ ಪ್ರಗತಿಯಾಗುತ್ತದೆ.

























Discussion about this post