ಮೇಷರಾಶಿ
ಕೆಲಸದಲ್ಲಿ ನಿಮ್ಮ ಏಕಾಗ್ರತೆ ಕೆಡಿಸುವಂತಹ ವಿದ್ಯಮಾನ ಸಂಭವಿಸಬಹುದು. ಆದರೆ ವಿಚಲಿತರಾಗದೆ ಕಾರ್ಯ ನಿರ್ವಹಿಸು ವುದು ಒಳಿತು. ಸ್ನೇಹಿತರು ಸಮಸ್ಯೆ ಪರಿಹಾರ ಮಾಡಲಿದ್ದಾರೆ, ಒತ್ತಡವನ್ನು ನಿಯಂತ್ರಿಸಲು ಸಂಗೀತವನ್ನು ಆಲಿಸಿ, ಅನಗತ್ಯವಾಗಿ ಹಣವನ್ನು ವ್ಯಯಿಸಬೇಡಿ, ಕುಟುಂಬ ಸದಸ್ಯರು ಉತ್ತಮ ಸಲಹೆ ನೀಡಲಿದ್ದಾರೆ, ಅಧ್ಯಯನದಿಂದ ಅಧಿಕ ಲಾಭ ದೊರೆಯಲಿದೆ, ದಿನಾಂತ್ಯಕ್ಕೆ ಶುಭ ಸುದ್ದಿಯನ್ನು ಕೇಳುವಿರಿ.
ವೃಷಭರಾಶಿ
ಆಕ್ರಮಣಶೀಲರಾಗಿ ವರ್ತಿಸುವಿರಿ. ಆದರೆ ಅನವಶ್ಯ ವಿಚಾರದಲ್ಲಿ ಜಗಳ ಕಾಯದಿರಿ. ಸಿಡುಕಿನಿಂದ ಕೆಡುಕು. ಸಹನೆಯನ್ನು ಕಾಯ್ದುಕೊಳ್ಳಿ.ಇಂದು ಹೆಚ್ಚು ಸಕ್ರೀಯರಾಗಿರುವಿರಿ, ಆರೋಗ್ಯದಲ್ಲಿಂದು ಸುಧಾರಣೆ ಕಂಡುಬರಲಿದೆ, ಸ್ನೇಹಿತರ ಜೊತೆಗೆ ಸಮಯ ಕಳೆಯುವಿರಿ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಸಂಗಾತಿಯ ಆರೋಗ್ಯದ ವಿಚಾರದಲ್ಲಿ ವೈದ್ಯರ ಭೇಟಿ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ.
ಮಿಥುನರಾಶಿ
ಹೆಚ್ಚಿದ ಜವಾಬ್ದಾರಿ, ಒತ್ತಡ. ಕೆಲಸ ಜಾಸ್ತಿ. ಇದು ಇಂದಿನ ದಿನಚರಿ. ಹಾಗಾಗಿ ಸಂತೋಷಕ್ಕೆ, ನಿರಾಳತೆಗೆ ಅವಕಾಶ ವಿಲ್ಲ. ಖರ್ಚೂ ಹೆಚ್ಚಬಹುದು. ನಿಮ್ಮ ಪಾಲಿಗೆ ವಿಶೇಷವಾದ ದಿನ, ಇತರರು ಆರ್ಥಿಕವಾಗಿ ಸಹಾಯ ಮಾಡುವರು, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ದಿ ಕಂಡುಬರಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಮನೆಯಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆಯಿದೆ, ದೂರದ ಊರುಗಳಿಗೆ ಪ್ರಯಾಣ.
ಕರ್ಕಾಟಕರಾಶಿ
ಮಕ್ಕಳ ಸಂಗದಲ್ಲಿ ಸಂತೋಷ. ವೃತ್ತಿಯ ಒತ್ತಡ ಮರೆತು, ಕುಟುಂಬಸ್ಥರ ಸಂಗದಲ್ಲಿ ಹೆಚ್ಚು ಕಾಲ ಕಳೆಯುವ ಅವಕಾಶ. ಸಂತೋಷದ ಕಾಲಕ್ಷೇಪ ಅತಿಥಿಗಳ ಆಗಮನದಿಂದ ಮನಸಿಗೆ ಸಂತಸ, ಹೊಸ ಅವಕಾಶಗಳು ಒದಗಿ ಬರಲಿದೆ, ಸುತ್ತಮುತ್ತಲಿನ ಜನರ ಸಂಬಂಧದಲ್ಲಿ ವ್ಯತ್ಯಾಸ ಕಂಡುಬರಲಿದೆ, ಉದ್ಯೋಗದಲ್ಲಿ ಮುಂಭಡ್ತಿ ಕಂಡುಬರಲಿದೆ, ಆಧ್ಯಾತ್ಮದ ಕಡೆಗೆ ಒಲವು, ಮೇಲಾಧಿಕಾರಿಗಳ ಸಹಕಾರ ದೊರೆಯಲಿದೆ.
ಸಿಂಹರಾಶಿ
ನೀವಿಂದು ಅಸಹನೆ ಯಿಂದ ವರ್ತಿಸುವಿರಿ. ನಿಮ್ಮ ವರ್ತನೆಯು ಅದೃಷ್ಟವನ್ನು ದೂರ ಮಾಡಬಹುದು. ಆಪ್ತರು ದೂರ ಸರಿದಾರು. ಭರವಸೆಗಳು ಸಾಕಾರಗೊಳ್ಳಲಿದೆ, ಆಕಸ್ಮಿಕವಾದ ಅವಕಾಶವೊಂದು ತೆರೆದುಕೊಳ್ಳಲಿದೆ, ಅದೃಷ್ಟ ನಿಮ್ಮ ಪಾಲಿಗೆ ತೆರೆದುಕೊಳ್ಳಲಿದೆ, ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ, ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ.
ಕನ್ಯಾರಾಶಿ
ಹಳೆ ನೆನಪು ಕಾಡುವಂತಹ ವ್ಯಕ್ತಿಗಳ ಭೇಟಿ. ಪ್ರೀತಿಪಾತ್ರರು ನಿಮ್ಮ ದಿನವನ್ನು ಆನಂದಗೊಳಿಸುತ್ತಾರೆ. ವೃತ್ತಿಯಲ್ಲಿ ಹೆಚ್ಚು ಏರುಪೇರಿರದು. ಹೆಚ್ಚು ವಿಶ್ರಾಂತಿಯನ್ನು ಪಡೆಯುವಿರಿ, ಆಪ್ತ ಸ್ನೇಹಿತರಿಂದ ಕುಟುಂಬ ಸದಸ್ಯರಲ್ಲಿ ಸಂತಸ, ಸಂಗಾತಿಯ ಆರೋಗ್ಯದ ಚಿಂತೆ ಕಾಡಲಿದೆ, ದೂರದ ಊರುಗಳಿಂದ ಶುಭ ಸಮಾಚಾರ, ಹಿರಿಯರ ಸಲಹೆಯನ್ನು ಆಲಿಸಿ, ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.
ತುಲಾರಾಶಿ
ನೀವಿಂದು ಭಾವುಕರಾಗಿ ವರ್ತಿಸುವಿರಿ. ನಿಮ್ಮ ನೈಜ ಭಾವನೆಯನ್ನು ವ್ಯಕ್ತಪಡಿಸಲು ಅಹಂ ಅಡ್ಡ ಬರುತ್ತದೆ. ಆಪ್ತರೊಂದಿಗೆ ಮುಕ್ತ ಮನಸ್ಸು ಒಳಿತು. ಹಣದ ಸಹಾಯ ಪಡೆದು ಹಿಂದಿರುಗಿಸದ ಸ್ನೇಹಿತರಿಂದ ದೂರವಿರಿ, ಸಂಗಾತಿಯ ಆರೋಗ್ಯದಿಂದ ಚಿಂತೆ ಕಾಡಲಿದೆ, ಇತರರ ಹಸ್ತಕ್ಷೇಪದಿಂದ ಸಾಂಸಾರಿಕ ಕಿರಿಕಿರಿ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ಕುಟುಂಬ ಸದಸ್ಯರ ಜೊತೆಗೆ ಸಮಯವನ್ನು ಕಳೆಯುವಿರಿ.
ವೃಶ್ಚಿಕರಾಶಿ
ಅವ್ಯಕ್ತ ಆತಂಕವೊಂದು ದಿನವಿಡೀ ಕಾಡ ಬಹುದು. ಅದನ್ನು ನಿಭಾಯಿಸಲು ನಿಮ್ಮಿಂದಾಗದು. ಬೇರೆ ವಿಚಾರಗಳಲ್ಲಿ ಮನಸ್ಸು ತೊಡಗಿಸಿಕೊಳ್ಳಿ. ಕುಟುಂಬ ಸದಸ್ಯರ ಜೊತೆಗೆ ಪ್ರವಾಸ ಹೋಗುವಿರಿ, ಅಧಿಕ ಖರ್ಚು ನಿಮ್ಮನ್ನು ಕಂಗೆಡಿಸಲಿದೆ, ಮನೆಯಲ್ಲಿ ಸಂತಸದ ವಾತಾವರಣ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ನೆರೆ ಹೊರೆಯವರ ಜೊತೆಗೆ ಉತ್ತಮ ಬಾಂಧವ್ಯ, ವಾದ ವಿವಾದಗಳಿಂದ ದೂರವಿರಿ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ.
ಧನಸುರಾಶಿ
ಕೌಟುಂಬಿಕ ಜವಾಬ್ದಾರಿ ಹೆಚ್ಚುತ್ತದೆ. ಮಹತ್ವದ ಕಾರ್ಯವೊಂದನ್ನು ಇಂದು ಪೂರೈಸ ಬೇಕಾ
ಗುವುದುಇತರರ ಸಹಕಾರ ನಿರೀಕ್ಷಿಸು ವುದು ವ್ಯರ್ಥ. ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಕಾರ್ಯಸಾಧನೆ, ಅಮೂಲ್ಯವಾದ ವಸ್ತುವೊಂದು ಕಳೆದು ಹೋಗುವ ಸಾಧ್ಯತೆ, ಜಾಗರೂಕತೆಯಿಂದ ಸಂಚಾರ ಮಾಡಿ, ನಿಮ್ಮ ಆಸೆಗಳು ಇಂದು ಈಡೇರಿಕೆಯಾಗಲಿದೆ, ಪ್ರಿಯತಮೆ ಅಸಮಧಾನಗೊಳ್ಳುವ ಸಾಧ್ಯತೆ, ಉದ್ಯೋಗದಲ್ಲಿ ಅಭಿವೃದ್ದಿ ಕಂಡುಬರಲಿದೆ.
ಮಕರರಾಶಿ
ಕೆಲದಿನಗಳ ಕಠಿಣ ಶ್ರಮದ ಬಳಿಕ ಇಂದು ಅದರ ಫಲ ಉಣ್ಣಲು ತಯಾರಾಗಿರಿ. ನೀವು ಕುಶಿ ಪಡುವ ಬೆಳವಣಿಗೆ ಸಂಭವಿಸುವುದು. ನಿರೀಕ್ಷೆ ಈಡೇರಿಕೆ. ಕೆಲಸದ ಒತ್ತಡ ನಿಮ್ಮನ್ನು ಹೈರಾಣಾಗಿಸಲಿದೆ, ಹಣಕಾಸಿನ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ, ಭವಿಷ್ಯಕ್ಕಾಗಿ ಸಂಪತ್ತಿನ ಕ್ರೂಢೀಕರಣ, ಕುಟುಂಬಸ್ಥರಿಗೆ ಅನುಕೂಲವಾಗುವಂತೆ ಸಕಾರಾತ್ಮಕ ಆಲೋಚನೆಯನ್ನು ಮಾಡಿ, ಸ್ನೇಹಿತರ ಸಲಹೆಯನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.
ಕುಂಭರಾಶಿ
ಹಣಕಾಸು ವಿಚಾರಗಳಲ್ಲಿ ಇಂದು ಎಚ್ಚರ ವಹಿಸಿ. ಆರ್ಥಿಕವಾಗಿ ಹಿನ್ನಡೆ ಉಂಟಾಗುವ ಸಾಧ್ಯತೆಗಳಿವೆ. ಕೌಟುಂಬಿಕ ನೆಮ್ಮದಿ. ಹಳೆಯ ಸ್ನೇಹಿತರ ಭೇಟಿ, ನಿಮ್ಮಲ್ಲಿ ಸ್ನೇಹಿತರು ಹಣದ ಸಹಾಯ ಕೇಳುವ ಸಾಧ್ಯತೆ, ಆರ್ಥಿಕ ಸ್ಥಿತಿ ದುರ್ಬಲವಾಗಲಿದೆ, ಕುಟುಂಬದ ಜವಾಬ್ದಾರಿ ಹೆಚ್ಚಾಗಲಿದೆ, ಪ್ರೀತಿ ಪಾತ್ರರ ಜೊತೆಗೆ ಸಂಭ್ರಮದ ಕ್ಷಣ, ಇಂದು ನೀವು ಭಯಸಿದ ಆಸೆಗಳು ಈಡೇರಿಕೆಯಾಗಲಿದೆ.
ಮೀನರಾಶಿ
ಇತರರ ತಪ್ಪಿನ ಹೊಣೆಗಾರಿಕೆ ನಿಮ್ಮ ಮೇಲೆ ಬೀಳಬಹುದು. ಬೇರೆಯವರ ತಪ್ಪಿಗೆ ನೀವು ಟೀಕೆ ಎದುರಿಸುವಿರಿ. ಆರ್ಥಿಕ ಒತ್ತಡ. ಆರೋಗ್ಯ ಸಮಸ್ಯೆ ನಿಮ್ಮ ಕಾಡಲಿದೆ, ಹಲವು ಸಮಯಗಳಿಂದಲೂ ಬಾಕಿ ಉಳಿದಿದ್ದ ಕಾರ್ಯಗಳನ್ನು ಪೂರ್ಣಗೊಳಿಸುವಿರಿ, ಸ್ನೇಹಿತರ ಜೊತೆಗೆ ಸಮಯ ಕಳೆಯುವಿರಿ, ವಾಹನ ಚಾಲನೆ ಮಾಡುವಾಗ ಹೊಂದಾಣಿಕೆ ಅಗತ್ಯ, ಪ್ರಮುಖ ಜನರ ಭೇಟಿಯಿಂದ ಸಂತಸ, ಸಾಮಾಜಿಕವಾಗಿ ಗೌರವ ಪ್ರಾಪ್ತಿ.
Discussion about this post