ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ -೭೩ (ಹಳೆ ರಾಷ್ಟ್ರೀಯ ಹೆದ್ದಾರಿ-೨೩೪), ಮಂಗಳೂರು-ತುಮಕೂರು ರಸ್ತೆಯ ಕಿ.ಮೀ ೮೬.೨೦೦ (ಚಿಕ್ಕಮಗಳೂರು ಜಿಲ್ಲಾ ಗಡಿ) ರಿಂದ ಕಿ.ಮೀ ೯೯.೨೦೦ (ಕೊಟ್ಟಿಗೆಹಾರ) ರವರೆಗಿನ ಚಾರ್ಮಾಡಿಘಾಟ್ ರಸ್ತೆಯ ಮಾರ್ಗದಲ್ಲಿ ದಿನದ ೨೪ ಗಂಟೆಯೂ ಲಘು ವಾಹನ ಹಾಗೂ ಲಘು ವಾಣಿಜ್ಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಹಾಗೂ ಎಲ್ಲಾ ರೀತಿಯ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶಿಸಿದ್ದಾರೆ.
ದಿನದ ೨೪ ಗಂಟೆಯೂ ಸಂಚರಿಸಬಹುದಾದ ಲಘು/ಘನ ವಾಹನಗಳು: ಸಾರ್ವಜನಿಕರು ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಕೆಂಪು ಬಸ್, ಆರು ಚಕ್ರದ ಲಾರಿ, ನಾಲ್ಕು ಚಕ್ರದ ವಾಹನಗಳು, ಟೆಂಪೋ ಟ್ರಾವೆಲರ್, ಆಂಬುಲೆನ್ಸ್, ಕಾರು, ಜೀಪು, ವ್ಯಾನ್, ಎಲ್.ಸಿ.ವಿ (ಮಿನಿ ವ್ಯಾನ್) ಹಾಗೂ ದ್ವಿಚಕ್ರ ವಾಹನಗಳು
ದಿನದ ೨೪ ಗಂಟೆಯೂ ನಿರ್ಬಂಧಿಸಲಾದ ಭಾರಿ ವಾಹನಗಳು : ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ, ಕಂಟೈನರ್ಸ್, ಲಾಂಗ್ ಚಾಸಿಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಏಕ್ಸೆಲ್ ವಾಹನಗಳು, ಟ್ರಕ್ ಟ್ರೈಲರ್, ಕೆ.ಎಸ್.ಆರ್.ಟಿ.ಸಿ ರಾಜಹಂಸ/ಸ್ಲೀಪರ್ ಬಸ್‌ಗಳು ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಾಣೆ ವಾಹನಗಳನ್ನು ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
24-hour traffic allowed at Charmadi Ghati

























Discussion about this post