ಚಿಕ್ಕಮಗಳೂರು : ಕೊವೀಡ್ 3ನೇ ಅಲೆ ನಡುವೆ ರಾಜ್ಯದಲ್ಲಿ ಶಾಲಾ ಕಾಲೇಜುಗಳು ಆರಂಭವಾಗಿದ್ದು, ಇದೀಗ 6-12 ನೇ ತರಗತಿಯವರೆಗೆ ಸಂಪೂರ್ಣ ಶಾಲಾರಂಭಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸೂಚನೆ ನೀಡಿದ್ದಾರೆ.
ಬೆಳಗ್ಗೆಯಿಂದ ಸಂಜೆಯವರೆಗೂ ಶಾಲೆ ನಡೆಸಲು ಹೇಳಿದ್ದೇವೆ. ಸದ್ಯ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಬಲವಂತ ಮಾಡುವಂತಿಲ್ಲ. ದಸರಾ ಹಬ್ಬದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂಬುದಾಗಿ ಅವರು ತಿಳಿಸಿದ್ದಾರೆ.
ರಾಜ್ಯದ ತುಂಬಾ ಕಡೆ ಕೋವಿಡ್ ಪಾಸಿಟಿವ್ ರೇಟ್ ಕಡಿಮೆ ಇದೆ. ಹಾಗಾಗಿ ಶಾಲೆಗಳಿಗೆ ತೊಂದರೆಯಾಗುತ್ತದೆ ಎಂದು ಅನಿಸುವುದಿಲ್ಲ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಖಾಸಗಿ ಶಾಲೆಗಳ ಶಾಲಾ ಶುಲ್ಕದ ಬಗ್ಗೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸಲಾಗಿದೆ. ಶಾಲಾ ಶುಲ್ಕ ಸಂಬಂಧ ರಾಜ್ಯ ಸರ್ಕಾರ ಶೇ. 30 ರಷ್ಟು ವಿನಾಯಿತಿ ನೀಡಿತ್ತು. ಆದರೆ ಖಾಸಗಿ ಶಾಲಾ ಒಕ್ಕೂಟ ಸರ್ಕಾರ ಕ್ರಮ ಪ್ರಶ್ನಿಸಿ ಕೋರ್ಟ್ ಮೊರೆ ಹೊಗಿತ್ತು. ಕೋರ್ಟ್ ಶೇಕಡಾ 15 ರಷ್ಟು ವಿನಾಯಿತಿಗೆ ಆದೇಶಿಸಿದೆ. ಆದರೂ ಸಹ ಶೇ. 30 ರಷ್ಟು ವಿನಾಯಿತಿ ನೀಡಲು ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸಲಾಗುತ್ತದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

























Discussion about this post