ಗುಜರಾತ್: ಗುಜರಾತ್ನ ಸೂರತ್ನಲ್ಲಿ ಆಟವಾಡುತ್ತಿದ್ದ ಮಗುವೊಂದು ೮ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.
ಎರಡು ವರ್ಷದ ಮಗು ಮಿಹಿರ್ ಪೋಷಕರು ಅಪಾರ್ಟ್ಮೆಂಟ್ನ ಎಂಟನೇ ಮಹಡಿಯಲ್ಲಿ ವಾಸವಾಗಿದ್ದರು. ಮಗು ಆಟವಾಡುತ್ತಿದೆ ಎಂದು ಸುಮ್ಮನಾಗಿದ್ರು. ಆದ್ರೆ ಮಗು 70 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದೆ. ಕೆಳಗಿನ ಮನೆಯವರು ಏನಾಗಿದೆ ಎಂದು ಹೊರ ಬಂದು ನೋಡುವಾಗ ಮಗು ಕೆಳಗೆ ಬಿದ್ದಿತ್ತು.
ಕೆಳಗಿನ ಮನೆಯವರು ಏನಾಗಿದೆ ಎಂದು ಹೊರ ಬಂದು ನೋಡುವಾಗ ಮಗು ಕೆಳಗೆ ಬಿದ್ದಿತ್ತು. ಕೂಡಲೇ ಮಗುವಿನ ಪೋಷಕರಿಗೆ ಸುದ್ದಿ ತಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮಗುವಿನ ಈ ದುರ್ಘಟನೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಕುರಿತು ಕಗರ್ತಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರ ನಿರ್ಲಕ್ಷ್ಯದ ಕುರಿತು ಪೊಲೀಸರು ತನಿಖೆಯನ್ನು ನಡೆಸಲಿದ್ದಾರೆ.

























Discussion about this post