ಚಿಕ್ಕಮಗಳೂರು (ಕನ್ನಡನಾಡಿ ಸುದ್ದಿಜಾಲ): ಗೃಹಖಾತೆ ಲಭಿಸಿದ ಸಂಭ್ರಮ ದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ ಅವರು ಗೌರಿಗದ್ದೆಗೆ ತೆರಳಿ ದೇವರ ಆಶೀರ್ವಾದ ಪಡೆದಿದ್ದಾರೆ. ನಂತರ ಅಲ್ಲಿನ ವಿನಯ್ ಗುರೂಜಿಯವರ ಜೊತೆಗೆ ಸಮಾಲೋಚನೆ ನಡೆಸಿ ದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಜೀವರಾಜ್ ಸಹ ಉಪಸ್ಥಿತರಿದ್ದರು.
ಶೃಂಗೇರಿ,ಎನ್ ಆರ್ ಪುರ ತಾಲ್ಲೂಕಿನ ಮಳೆ ಹಾನಿಗೆ ಒಳಗಾದ ಸ್ಥಳಗಳಿಗೆ ಇಂದು ಬೇಟಿ ನೀಡಿದ್ದ ಸಂಧರ್ಬದಲ್ಲಿ ಅವರು ಕೊಪ್ಪ ಸಮೀಪದ ಧಾರ್ಮಿಕ. ಸ್ಥಳವಾದ ಗೌರಿಗದ್ದೆ ಗೆ ತೆರಳಿದ್ದರು.
ನಂತರದಲ್ಲಿ ಲಿಂಗಾಯಿತರ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ತೆರಳಿ ಗುರುಗಳ ಆಶೀರ್ವಾದ ಪಡೆದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿದರು.

























Discussion about this post