Delhi News: ದೆಹಲಿ ಪ್ರವಾಸಕ್ಕೆ ಹೋಗುವವರಿಗೆ ಹಲವರು ಸರೋಜ್ನಿ ಮಾರ್ಕೇಟ್‌ಗೆ ಹೋಗಿ ಅಲ್ಲಿ ಬ್ರ್ಯಾಂಡೆಡ್ ಬಟ್ಟೆಗಳು ಕಡಿಮೆ ಬೆಲೆಗೆ ಸಿಗುತ್ತದೆ ಅನ್ನೋ ಸಜೆಶನ್ ನೀಡುತ್ತಾರೆ. ಅಲ್ಲದೇ, ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ, ಬ್ಯಾಗ್, ಇನ್ನೂ ಹಲವು ವಸ್ತುಗಳು ಇಲ್ಲಿ ಸಿಗುತ್ತದೆ. ಆದರೆ ಅದರ ಹಿಂದಿನ ಸತ್ಯದ ಬಗ್ಗೆ ಹಲವರಿಗೆ ತಿಳಿದಿಲ್ಲ.
ಆದ್ರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದ ಮೂಲಕ ಸರೋಜ್ನಿ ಮಾರ್ಕೇಟ್ ರಿಯಾಲಿಟಿ ಜನರಿಗೆ ತಿಳಿಯುತ್ತಿದೆ. ಸರೋಜ್ನಿ ಮಾರ್ಕೇಟ್‌ನಿಂದ ಬಟ್ಟೆ ಖರೀದಿಸಿದವರು, ಅನುಭವಿಸಿದ ನಕಾರಾತ್ಮಕ ಅನುಭವವನ್ನು ಹಂಚಿಕೊಂಡಿದ್ದಾರೆ.

Case No.1: ದೆಹಲಿಯ ಹಾಸ್ಟೇಲ್ ಒಂದರಲ್ಲಿ ಇದ್ದು, ವಿದ್ಯಾಭ್ಯಾಸ ಮಾಡುವ ಯುವತಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಮಗಾದ ಅನುಭವವನ್ನು ಶೇರ್ ಮಾಡಿದ್ದಾರೆ. ಆಕೆ ಸರೋಜ್ನಿ ಮಾರ್ಕೇಟ್‌ಗೆ ಹೋಗಿ ಅಲ್ಲಿ, 1 ಡೆನಿಮ್ ಜಾಕೇಟ್ ಖರೀದಿ ಮಾಡಿದ್ದಳಂತೆ. ಅದರ ಜೊತೆ ಇನ್ನೂ ಹೆಚ್ಚು ಬಟ್ಟೆ ಖರೀದಿಸಿದ್ದಳು.
ಆದ್ರೆ ಅವಳಿಗೆ ಹೆಚ್ಚು ಇಷ್ಟವಾಗಿದ್ದು, ಈ ಡೆನಿಮ್ ಜಾಕೇಟ್ . ಅದನ್ನು ಹಾಕೊಂಡ್ರೆ ಸಖತ್ ಕೂಲ್ ಆಗಿ ಕಾಣ್ತಾಳೆ ಅಂತಾ ಅವಳ ಸ್ನೇಹಿತರು ಅವಳಿಗೆ ಹೇಳಿದ್ರಂತೆ. ಅದಕ್ಕೆ ಅವರು, ಆ ಡೆನಿಮ್ ಜಾಕೇಟ್ ಹೆಚ್ಚು ಯ್ಯೂಸ್ ಮಾಡ್ತಿದ್ಲಂತೆ. ಆದರೆ ಅವಳು ಯಾವಾಗ ಆ ಜಾಕೇಟ್ ಬಳಸುತ್ತಾಳೋ, ಆ ದಿನ ಎಲ್ಲಾ ಹಾಳಾಗಿ ಹೋಗೋದಂತೆ.
ಅಲ್ಲದೇ 1 ದಿನ ಆಕೆ ಡೆನಿಮ್ ಜಾಕೇಟ್‌ನ್ನಾ ತನ್ನ ಹಾಸ್ಟೇಲ್ ರೂಮ್‌ನಲ್ಲಿ ಇದ್ದ ಚೇರ್ ಮೇಲೆ ಇಟ್ಟು ಮಲಗಿದ್ದಳಂತೆ. ಆಗ ಅವಳ ಕೋಣೆಯಲ್ಲಿ ಯಾರೋ, ಒದ್ದೆ ಕಾಲಿನಲ್ಲಿ ಓಡಾಡಿದಂತೆ ಸೌಂಡ್ ಬಂತಂತೆ. ಅಲ್ಲದೇ ಮರುದಿನ ಅವಳ ಕೋಣೆಯಲ್ಲಿದ್ದ ಕಪಾಟಿನಲ್ಲಿ ಆ ಜಾಕೇಟ್ ಇರಿಸಿದಾಗ, ಯಾರೋ ಒಳಗಿನಿಂದ ನಾಕ್ ಮಾಡಿದ ಅನುಭವ ಅವಳಿಗಾಯಿತಂತೆ.
ಆಗ ರೂಮೇಟ್ ಬಳಿ ಅಂದ್ರೆ ಅವಳು ಯಾರ ಜೊತೆಗೆ ಶಾಪಿಂಗ್‌ಗೆ ಹೋಗಿದ್ಲೋ, ಅವಳ ಬಳಿ ಈ ಅನುಭವ ಹೇಳಿದಾಗ, ಇಬ್ಬರೂ ಸೇರಿ, ಕಪಾಟ್ ಬಾಗಿಲು ತೆಗೆದಾಗ ಒಳಗೆ ಯಾರೂ ಇರಲಿಲ್ಲ. cರುದಿನ ಇಬ್ಬರೂ ತಮ್ಮ ಕೋಣೆಯೊಳಗೆ ತಮಗಾದ ಅನುಭವವನ್ನು ಶೇರ್ ಮಾಡಿದರು. ಅವರಿಬ್ಬರು ಮಾತನಾಡುವಾಗ, ಸರೋಜ್ನಿ ಮಾರ್ಕೇಟ್‌ನಿಂದ ನಾವು ಬಟ್ಟೆ ಖರೀದಿ ಮಾಡಿದಾಗಿನಿಂದ ರೂಮ್‌ನಲ್ಲಿ ಈ ಸಮಸ್ಯೆ ಶುರುವಾಗಿದೆ. ಅದನ್ನೆಲ್ಲ ಸೇರಿಸಿ, ನಾವು ವಾಶ್ ಮಾಡೋಣವೆಂದು ಹೇಳಿದರು.
ಬಳಿಕ ಎಲ್ಲ ಬಟ್ಟೆ ವಾಶ್ ಮಾಡಿ, ಕೊನೆಗೆ ಡೆನಿಮ್ ಜಾಕೇಟ್ ವಾಶ್ ಮಾಡುವಾಗ, ಅದರ ಹಿಂಭಾಗದಲ್ಲಿ ಕೆಂಪು ಬಣ್ಣದ ಸಿಂಬಾಲ್ ಕಂಡಿದೆ. ಇದನ್ನು ಕಂಡು ಇಬ್ಬರು ಹೆದರಿದ್ದಾರೆ. ಬಳಿಕ ಎಲ್ಲ ಬಟ್ಟೆ ವಾಶ್ ಮಾಡಿ, ಒಣಗಿಸಿ, ಊಟ ಮುಗಿಸಿ, ಮಲಗಿದ್ದಾರೆ.
ಈ ದಿನ ರಾತ್ರಿ ಆ ಡೆನಿಮ್ ಜಾಕೇಟ್ ಖರದಿಸಿದ ಯುವತಿಗೆ ನಿದ್ದೆ ಗಣ್ಣಿನಲ್ಲಿ ಯಾರೋ ಬಂದು ಕುತ್ತಿಗೆ ಹಿಸುಕಿದ ಅನುಭವವಾಗಿದೆ. ಮಧ್ಯರಾತ್ರಿ ಹೆದರಿ ಎದ್ದು ಕನ್ನಡಿ ನೋಡಿಕೊಂಡಾಗ, ಆಕೆಯ ಕುತ್ತಿಗೆಯ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಹಾಗಾಗಿದೆ. ಆಗ ಇಬ್ಬರೂ ಸೇರಿ, ಆ ಡೆನಿಮ್ ಜಾಕೇಟ್ ಬಿಸಾಕಿ ಬಿಡಬೇಕು ಎಂದು ನಿರ್ಧರಿಸಿದ್ದಾರೆ. ಮರುದಿನ ಬೆಳಿಗ್ಗೆ ಜಾಕೇಟ್ ಬಿಸಾಕಿ ಬಂದಿದ್ದಾರೆ. ಅದಾದ ಬಳಿಕ, ಅವರು ಆರಾಮವಾಗಿದ್ದಾರಂತೆ.

Case No.2: ಇದು ಒಂದು ಉದಾಹರಣೆಯಾದರೆ, ಇನ್ನೊಬ್ಬರು ಇದೇ ರೀತಿ ತಮ್ಮ ಅನುಭವ ಹೇಳಿದ್ದಾರೆ. ಆರ್ಯನ್ ಎನ್ನುವ ವ್ಯಕ್ತಿ ಸರೋಜ್ನಿ ಮಾರ್ಕೇಟ್‌ಗೆ ಹೋಗಿ, ಅಲ್ಲಿ ಬಟ್ಟೆ ಖರೀದಿಸಿದ್ದಾನೆ. ಬಳಿಕ ಅದನ್ನು ವಾಶ್ ಮಾಡದೇ, ಒಮ್ಮೆ ಟ್ರೈ ಮಾಡುವಾ ಹೇಳಿ, ಬಟ್ಟೆ ಹಾಕಿ ಟ್ರೈ ಮಾಡಿದ್ದಾನೆ. ಆ ತಕ್ಷಣ ಅವನ ಬೆನ್ನಲ್ಲಿ ಏನೋ 1 ರೀತಿಯ ಹುಳ ಓಡಾಡಿದ ಅನುಭವವಾಯಿತಂತೆ. ಆತ ವಾಶ್ ಮಾಡದೇ ಹಾಕಿದ್ದಕ್ಕೆ ಹೀಗಾಗಿರಬೇಕು ಎಂದು ಸುಮ್ಮನಾಗಿದ್ದಾನೆ.
ಬಳಿಕ ಬೆಡ್ ಬಳಿ ಆ ಬಟ್ಟೆ ಇರಿಸಿ, ನಿದ್ದೆ ಮಾಡಿದ್ದಾನೆ. ಆ ದಿನ ರಾತ್ರಿ ಅವನಿಗೆ ಸರಿಯಾಗಿ ನಿದ್ರೆ ಬರಲಿಲ್ಲ. ಅಲ್ಲದೇ, ಬೆಡ್ ಕೆಳಗೆ ಏನೋ ಇರುವಂತೆ ಅವನಿಗೆ ಭಾಸವಾಗುತ್ತಿತ್ತು. ಆದರೆ ಬೆಡ್ ಕೆಳಗೆ ಏನೂ ಇರಲಿಲ್ಲ. ಹಾಗಾಗಿ ಆ ದಿನ ಆರ್ಯನ್ ಹೆದರಿಕೆಯಿಂದಲೇ ನಿದ್ದೆ ಮಾಡಿದ್ದ.
ಮರುದಿನ ಸಂಜೆ ಫ್ರೆಂಡ್ ಬರ್ತ್‌ಡೇ ಪಾರ್ಟಿ ಇತ್ತು. ಆಗ ಹೊಸ ಟೀ ಶರ್ಟ್ ಹಾಕೋಣವೆಂದು ಆರ್ಯನ್ ನಿರ್ಧರಿಸಿದ್ದ. ಆದರೆ ಅದನ್ನು ಆಗಲೂ ಆತ ವಾಶ್ ಮಾಡಿರಲಿಲ್ಲ. ಹಾಗೆಯೇ ಧರಿಸಿದ್ದ. ಟೀ ಶರ್ಟ್ ಧರಿಸಿ, ಕನ್ನಡಿ ನೋಡಿದಾಗ, 1 ಕ್ಷಣ ಅವನ ಹಿಂದೆ ಯಾವುದೋ ಆಕೃತಿ ಬಂದು ನಿಂತ ಹಾಗೆ ಆತನಿಗೆ ಅನ್ನಿಸಿದೆ. ಬಳಿಕ ತನ್ನ ಭ್ರಮೆ ಎಂದು ಆತ ಪಾರ್ಟಿಗೆ ತೆರಳಿದ್ದಾನೆ.
ಬಳಿಕ ಮನೆಗೆ ಬಂದು ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಿದ್ದಾಗ, ಅದರಲ್ಲಿ 1 ರೀಲ್‌ನಲ್ಲಿ ಓರ್ವ ವ್ಯಕ್ತಿ, ನೀವು ಮಾರುಕಟ್ಟೆಯಿಂದ ತರುವ ವಸ್ತ್ರವನ್ನು ಉಪ್ಪು ನೀರಿಗೆ ಹಾಕಿ ವಾಶ್ ಮಾಡಿ, ಬಳಿಕ ಬಳಸಬೇಕು ಎಂದಿದ್ದಾರೆ. ಇದನ್ನು ಕೇಳಿದ ಆರ್ಯನ್‌ಗೆ, ತಾನು ತಂದ ಬಟ್ಟೆಯಿಂದ ಈ ನಕಾರಾತ್ಮಕತೆ ನನ್ನ ಬಳಿ ಸುಳಿದಿರಬಹುದು ಎಂಬ ಅನುಮಾನ ಬಂದು, ಆತ ಉಪ್ಪು ನೀರಿಗೆ ಹೊಸ ಬಟ್ಟೆಗಳನ್ನ ಹಾಕಿ, ವಾಶ್ ಮಾಡಿ, ಬಳಿಕ ಅದನ್ನು ಧರಿಸಲು ಶುರು ಮಾಡಿದ್ದಾನೆ. ಈ ಘಟನೆ ನಡೆದ ಬಳಿಕ, ಆತನಿಗೆ ಯಾವುದೇ ನಕಾರಾತ್ಮಕತೆ ಉಂಟಾಗಲಿಲ್ಲವಂತೆ.

Case No.3: ಇನ್ನು ಮೂರನೇ ವ್ಯಕ್ತಿ ಕೂಡ ಇದೇ ರೀತಿ ಸರೋಜ್ನಿ ಮಾರ್ಕೇಟ್ ಬಗೆಗಿನ ರಿಯಾಲಿಟಿ ಶೇರ್ ಮಾಡಿದ್ದಾರೆ. ಸಮೀಕ್ಷಾ ಎಂಬಾಕೆ ತನ್ನ ಅಪ್ಪ ಅಮ್ಮನೊಂದಿಗೆ ದೆಹಲಿಯ ಒಂದು ಪುಟ್ಟ ಮನೆಯಲ್ಲಿ ವಾಸವಿದ್ದಳು. ಸ್ವಲ್ಪ ಸಮಯದ ಹಿಂದೆ, ಆಕೆ ಸರೋಜ್ನಿ ಮಾರ್ಕೇಟ್‌ಗೆ ಹೋಗಿ ಅಲ್ಲಿ ಬಟ್ಟೆ ಖರೀದಿಸಿ ಬಂದಿದ್ದಳು.
ಅದರಲ್ಲಿ 1 ಕುರ್ತಿ ಆಕೆ ಧರಿಸಿದಾಗ, ಅದು ತುಂಬಾ ತಂಪಾಗಿರುವಂತೆ ಅವಳಿಗೆ ಅನುಭವವಾಗಿದೆ. ಅದನ್ನು ಯಾರೋ ಫ್ರೀಜರ್‌ನಲ್ಲಿ ಇಟ್ಟು ಕೊಟ್ಟಂತೆ ಅವಳಿಗೆ ಭಾಸವಾಗಿದೆ. ಆದರೆ ಇದೆಲ್ಲ ಭ್ರಮೆ ಎಂದು ಆಕೆ, ತಂದ ವಸ್ತ್ರವನ್ನು ಕಪಾಟಿನಲ್ಲಿರಿಸಿ, ಓದಲು ಕುಳಿತಿದ್ದಾಳೆ. ಬಳಿಕ ಬಾಯಾರಿಕೆಯಾಗಿ ನೀರು ತರಲು ಕಿಚನ್‌ಗೆ ಹೋದಾಗ, ಆಕೆಗೆ ತನ್ನ ಕೋಣೆಯಿಂದ ಗೆಜ್ಜೆ ಸದ್ದು ಕೇಳಿತಂತೆ.
ಆದರೆ ಆಕೆ ನಡೆದಾಗ ಮಾತ್ರ ಆ ಗೆಜ್ಜೆ ಸದ್ದು ಕೇಳುತ್ತಿತ್ತು. ಬಳಿಕ ಅದು ನಿಲ್ಲುತ್ತಿತ್ತು. ಆದರೆ ಸಮೀಕ್ಷಾ ಗೆಜ್ಜೆ ಧರಿಸಿರಲಿಲ್ಲ. ಆದರೂ ಆಕೆ ನಡೆಯುವಾಗ ಗೆಜ್ಜೆ ಸದ್ದು ಬರುತ್ತಿತ್ತು. ಆಕೆ ನಿಂತಾಗ ಸದ್ದು ಕೂಡ ನಿಲ್ಲುತ್ತಿತ್ತು. ಆದರೆ ಆಕೆ ಅದರ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ. ಆದರೆ ಅಂದು ರಾತ್ರಿ ಆಕೆ ನಿದ್ದೆ ಮಾಡಿದಾಗ, ಆಕೆಯ ಹಿಂದೆ 1 ಆಕೃತಿ ಕುಳಿತು ಆಕೆಯ ಕೂದಲನ್ನು ಮುಟ್ಟಿದಂತೆ ಆಕೆಗೆ ಅನುಭವವಾಯಿತಂತೆ. ಆಕೆ ಲೈಟ್ ಹಾಕಿ ಕಂಡಾಗ, ಆಕೆಯ ಸುತ್ತಮುತ್ತ ಏನೂ ಇರಲಿಲ್ಲ. ಬಳಿಕ ಆಕೆ ಹೆದರುತ್ತಲೇ ನಿದ್ದೆ ಮಾಡಿದ್ದಳಂತೆ.
ಕಾಲೇಜಿಗೆ ಹೋಗಿ ಸ್ನೇಹಿತೆಯ ಬಳಿ ಈ ಮಾತು ಹೇಳಿದಾಗ, ನಿನ್ನ ಭ್ರಮೆ ಇರಬೇಕು ಎಂದು ಹೇಳಿದರಂತೆ. ಬಳಿಕ ಆ ಯುವತಿ 1 ವಾರ ಬಿಟ್ಟು ಮತ್ತೆ ಅದೇ ಬಟ್ಟೆ ಧರಿಸಿದಾಗ, ಅದೇ ರೀತಿಯ ಅನುಭವ ಆಯಿತಂತೆ. ಗೆಜ್ಜೆ ಸದ್ದು, ಮಲಗಿದಾಗ ಕೂದಲು ಮುಟ್ಟುವುದು, ತಲೆ ಸವರುವುದು ಹೀಗೆ ಸೇಮ್ ಅನುಭವ ಆಯಿತಂತೆ.
ಅಲ್ಲದೇ, ಕೆಟ್ಟ ಕೆಟ್ಟ ಕನಸು ಬೀಳೋದು, ರೂಮಿನಲ್ಲಿ ತನ್ನ ಜೊತೆ ಯಾರೋ ಇರುವ ಅನುಭವ ಹೀಗೆ ಹಲವು ರೀತಿಯ ಅನುಭವ ಆಗುತ್ತಿತ್ತಂತೆ. ಯಾರ ಬಳಿ ಹೇಳಿದರೂ ಅದು ನಿನ್ನ ಭ್ರಮೆ ಎನ್ನುವ ನೀರಸ ಉತ್ತರ ಬಿಟ್ಟರೆ ಮತ್ತೇನೂ ಸಿಗುತ್ತಿರಲಿಲ್ಲ.
ಆದರೆ 1 ದಿನ ಆಕೆ ತನ್ನ ಸ್ನೇಹಿತೆಯ ಮನೆಗೆ ಹೋದಾಗ, ಅಲ್ಲಿ ಆಕೆಯ ಸ್ನೇಹಿತೆಯ ಅಪ್ಪ 1 ಮಾತು ಹೇಳಿದ್ರಂತೆ. ಈಗಲೂ ಜನ ಹೊಟ್ಟೆ ಕಿಚ್ಚು ಇರುವವರ ಮೇಲೆ ಮಾಟ ಮಂತ್ರ ಮಾಡುತ್ತಿದ್ದಾರೆಂದರೆ ನಂಬಲೂ ಆಗೋದಿಲ್ಲಾ. ಜನರಿಗೆ ಯಾವಾಗ ಬುದ್ಧಿ ಬರುತ್ತದೆಯೋ ಏನೋ. ಮಕ್ಕಳೆ ನೀವು ಯಾರಾದ್ರೂ ಏನಾದ್ರೂ ಕೊಟ್ಟಾಗ ಅದನ್ನು ಕಣ್ಣು ಮುಚ್ಚಿ ತೆಗೆದುಕೊಳ್ಳಬೇಡಿ. ಅಲ್ಲದೇ, ಪ್ರಸಾದ ಎಂದು ಏನಾದ್ರೂ ಕೊಟ್ರೆ ಅದನ್ನು ತಿಂದು ಬಿಡಬೇಡಿ ಎಂದು ಎಚ್ಚರಿಕೆ ನೀಡಿದರಂತೆ.
ಆಗ ಸಮೀಕ್ಷಾಗೆ ತನಗೆ ಯಾರಾದ್ರೂ ಮಾಟ ಮಂತ್ರ ಮಾಡಿದ್ರಾ ಅನ್ನುವ ಯೋಚನೆ ಬಂತಂತೆ. ಆಕೆ ಈ ಆತಂಕಗಳೆಲ್ಲಾ ಯಾವಾಗಿನಿಂದ ಶುರುವಾಯ್ತು. ಯಾಕೆ ಶುರುವಾಯ್ತು ಅಂತಾ ಯೋಚನೆ ಮಾಡಲು ಶುರು ಮಾಡಿದಾಗ, ಆಕೆಗೆ ತಾನು ಸರೋಜ್ನಿ ಮಾರ್ಕೇಟ್‌ನಿಂದ ತಂದಿದ್ದ ಬಟ್ಟೆ ತಣ್ಣಗಿದ್ದ ನೆನಪಾಯ್ತು. ಆಗ ಆಕೆ ಆ ಬಟ್ಟೆಯಿಂದಲೇ ಈ ಸಮಸ್ಯೆ ಶುರುವಾಗಿರಬಹುದಾ ಎಂದು ಅಂದಾಜಿಸಿ, ಅದನ್ನು ಆಚೆ ಕಸಕ್ಕೆ ಎಸೆದು ಬಂದಳಂತೆ. ಅಂದಿನಿಂದ ಆಕೆ ಆರಾಮವಾಗಿದ್ದಾಳೆಂದು ಆಕೆ ಹೇಳಿದ್ದಾಳೆ.

Case No.4: ಇನ್ನು ನಾಲ್ಕನೇ ಉದಾಹರಣೆ ಅಂದ್ರೆ ಓರ್ವ ಹೌಸ್ ವೈಫ್‌ದು. ದೆಹಲಿಯಲ್ಲಿ ವಾಸವಿದ್ದ ಮಹಿಳೆ ಸರೋಜ್ನಿ ಮಾರ್ಕೇಟ್‌ಗೆ ಹೋಗಿ, ಅಲ್ಲಿ ತನಗೂ ತನ್ನ ಮನೆಯವರಿಗೆಲ್ಲ ರಾಶಿ ರಾಶಿ ಬಟ್ಟೆ ಖರೀದಿ ಮಾಡಿದ್ದಳು. ಬಟ್ಟೆ ಕಂಡು ಪತಿ- ಮಕ್ಕಳೆಲ್ಲ ಖುಷಿ ಪಟ್ಟರು. ಎಲ್ಲರೂ ಆದನ್ನು ಧರಿಸಿ, ಸೈಜ್ ಸರಿಯಾಗಿ ಇದೆಯಾ ಇಲ್ಲವಾ ಅಂತೆಲ್ಲಾ ನೋಡಿದ್ರು.
ಈ ಮಹಿಳೆ ಕೂಡ ತನಗೆ ತಂದ ಬಟ್ಟೆಯನ್ನು ಧರಿಸಿ, ನೋಡಿದ್ರು. ಆದರೆ ಅವರೆಲ್ಲ ಮಾಡಿದ ತಪ್ಪು ಅಂದ್ರೆ, ಅದನ್ನು ತೊಳೆಯದೇ ಅವರು ಧರಿಸಿದ್ದು. ಆ ಬಟ್ಟೆ ಮನೆಗೆ ಬಂದ ಬಳಿಕ ಪತಿ-ಪತ್ನಿ ಮಧ್ಯೆ ಪ್ರತೀ ದಿನ ಜೋರು ಜೋರಾಗಿ ಜಗಳವಾಗಲು ಶುರುವಾಯ್ತು. ಮಹಿಳೆ ಮತ್ತು ಮಕ್ಕಳ ಆರೋಗ್ಯ ಹಾಳಾಗಲು ಶುರುವಾಯ್ತು. ಸದಾ ಮೌನಿ, ಹಸನ್ಮುಖಿಯಾಗಿದ್ದ ಪತಿ ಸಿಟ್ಟು ಸಿಟ್ಟಾಗಿಯೇ ದಿನ ಶುರು ಮಾಡಿ, ಸಿಡುಕಿನಿಂದಲೇ ಮಲಗುತ್ತಿದ್ದ.
ಹೀಗೆ ದಿನಗಳೆದು ಜಗಳ ಹೆಚ್ಚಾಗಿ, ಮನೆಯ ನೆಮ್ಮದಿ ಸರ್ವನಾಶವಾಯಿತು. ಬಳಿಕ, ಸಂಬಂಧ ಮುರಿದು ಬೀಳುವ ಹಂತಕ್ಕೆ ಬಂತು. ಡಿವೋರ್ಸ್ ಆಗಿ ಪತಿ-ಪತ್ನಿ ದೂರವಾದ್ರು. ಮಹಿಳೆ ಈ ಬಗ್ಗೆ ಯೋಚಿಸಿದಾಗ, ಆಕೆಗೆ ಸರೋಜ್ನಿ ಮಾರ್ಕೇಟ್‌ನಲ್ಲಿ ಬಟ್ಟೆ ಖರೀದಿಸಿದ ನೆನಪಾಗಿದೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹಲವರು ಈ ಬಗ್ಗೆ ಹೇಳಿದಾಾಗ, ತಾನು ಬಟ್ಟೆ ಖರೀದಿಸಿದ ಬಳಿಕ ಜಗಳ ಶುರುವಾಗಿದೆ ಎಂದೇ ಆಕೆ ಇಂದಿಗೂ ನಂಬುತ್ತಾಳೆ.
ಹಾಗಾದ್ರೆ ಸರೋಜ್ನಿ ಮಾರ್ಕೇಟ್‌ನಿಂದ ಅಥವಾ ಕಡಿಮೆ ರೇಟಿಗೆ ಹೋಲ್‌ಸೇಲ್‌ನಲ್ಲಿ ಸಿಗುವ ಬಟ್ಟೆಗಳನ್ನು ನಾವು ಖರೀದಿಸಬಾರದಾ ಅಂತಾ ಕೇಳಿದ್ರೆ, ಖಂಡಿತವಾಗಿಯೂ ನೀವು ಬಟ್ಟೆ ಖರೀದಿಸಿ. ಆದರೆ ಅದನ್ನು ತಂದ ತಕ್ಷಣ ಧರಿಸಬೇಡಿ. ಬದಲಾಗಿ ಅದನ್ನು ಉಪ್ಪು ನೀರಿಗೆ ಹಾಕಿ, ಚೆನ್ನಾಗಿ ವಾಶ್ ಮಾಡಿ ಬಳಿಕ ಧರಿಸಿ.
ಏಕೆಂದರೆ, ಉಪ್ಪಿಗೆ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವ ಶಕ್ತಿ ಇದೆ. ಹಾಗಾಗಿ ಉಪ್ಪನ್ನು ಮನೆ ಕ್ಲೀನ್ ಮಾಡಲು, ದೃಷ್ಟಿ ತೆಗೆಯಲು, ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡಲು ಬಳಸುತ್ತಾರೆ. ಇದರಿಂದ ನಮ್ಮ ಮೇಲಿನ ದೃಷ್ಟಿ ಹೋಗುವುದಲ್ಲದೇ, ನಕಾರಾತ್ಮಕ ಶಕ್ತಿಯ ಪರಿಣಾಮವೂ ಕಡಿಮೆಯಾಗುತ್ತದೆ.
ಇನ್ನು ಕೆಲವರು ಸರೋಜ್ನಿ ಮಾರ್ಕೇಟ್ ಬಗ್ಗೆ ಹೀಗೂ ಮಾತನಾಡಿದ್ದಾರೆ. ಅಲ್ಲಿ ಸಿಗುವ ಕಡಿಮೆ ಬೆಲೆಯ ಬಟ್ಟೆಗಳನ್ನು ವಿದೇಶದಿಂದ ತರಲಾಗುತ್ತದೆಯಂತೆ. ಯಾರಾದರೂ ತೀರಿ ಹೋದರೆ, ಅವರ ಬಟ್ಟೆಗಳನ್ನೆಲ್ಲ ದಾನ ಮಾಡಲಾಗುತ್ತದೆ. ಆ ಬಟ್ಟೆಗಳನ್ನೇ ಸರೋಜ್ನಿ ಮಾರ್ಕೇಟ್‌ಗೆ ತಂದು ಮಾರಲಾಗುತ್ತದೆ.
ಅಂಥ ಸಮಯದಲ್ಲಿ ಸತ್ತವರ ಆತ್ಮದ ಪ್ರಭಾವ ಆ ಬಟ್ಟೆಗಳ ಮೇಲೆ ಇರುವ ಸಾಧ್ಯತೆ ಇರುತ್ತದೆ.ಆಗ ಆ ಬಟ್ಟೆ ಖರೀದಿಸಿದವರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಟ್ಟೆ ಖರೀದಿಸಿದ ಬಳಿಕ ಮನೆಗೆ ಬಂದು ಉಪ್ಪು ನೀರಿನಿಂದ ಅದನ್ನು ವಾಶ್ ಮಾಡಿ ಮತ್ತೆ ಧರಿಸಿ.

























Discussion about this post