ಮೂಡಿಗೆರೆ: ಇಲ್ಲಿನ ಅಲೇಖಾನ್ ಹೊರಟ್ಟಿ ಎಂಬಲ್ಲಿ ಕಾಡಾನೆಗಳು ಧಾಳಿ ನಡೆಸಿದ್ದು, ನೂರಾರು ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ನಾಶಪಡಿಸಿದೆ. ಅಷ್ಟೇ ಅಲ್ಲದೆ ಆಹಾರಕ್ಕಾಗಿ ತೋಟದಲ್ಲೇ ಜಾಂಡಾ ಊರಿವೆ.
ಸುಮಾರು ಇಪ್ಪತ್ತಕ್ಕೂ ಹೆಚ್ಚು ಆನೆಗಳ ಗುಂಪು ಅಲೆಖಾನ್ ಹೊರಟ್ಟಿ ಗ್ರಾಮದಲ್ಲಿನ ಸುರೇಶ್ ಗೌಡ, ಪ್ರಕಾಶ್ ಗೌಡ, ನಾರಾಯಣ ಗೌಡ, ಸಂಧೀಪ್,, ನಂಜುಂಡೇಗೌಡ, ರಾಮೇಗೌಡ ಮೊದಲಾದವರ ತೋಟಗಳಲ್ಲಿ ನುಗ್ಗಿ ದಾಂದಲೆ ನಡೆಸಿವೆ.
ಅರಣ್ಯ ಇಲಾಖೆಯ ವತಿಯಿಂದ ಕಾಡಾನೆಗಳನ್ನು ಅರಣ್ಯಕ್ಕೆ ಮರಳಿಸುವಂತೆ ಪಟಾಕಿ ಸಿಡಿಸಿ ಓಡಿಸಲಾಗಿತ್ತು, ಆದರೂ ಸಹ ಆನೆಗಳು ಮರಳಿ ಬಂದಿರುತ್ತವೆ ಎಂ ಸ್ಥಳೀಯರು ತಿಳಿಸಿದ್ದಾರೆ

























Discussion about this post