ಚಿಕ್ಕಮಗಳೂರು: ಕಾನೂನು ಬಾಹಿರವಾಗಿ ಕೆ. ಆರ್ ಪೇಟೆಯಲ್ಲಿ ತೆರೆದಿರುವ ಲಿಕ್ಕರ್ ಶಾಪ್ ಮುಚ್ಚಿಸುಚಂತೆ ಕೋರಿ ಸಂವಿಧಾನ ರಕ್ಷಣಾ ಸಮಿತಿ ಒತ್ತಾಯಿಸಿದೆ.
ನಿಯಮದ ಪ್ರಕಾರ ನೂರು ಮೀಟರ್ ವ್ಯಾಪ್ತಿಯೊಳಗೆ ಪೂಜಾ ಮಂದಿರ, ವಿದ್ಯಾ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು ಇರಬಾರದು ಎಂದಿದೆ. ಆದರೂ ಸಹ ಐವತ್ತು ಮೀಟರ್ ನೊಳಗೆ ದೇಗುಲ ಇದ್ದರೂ ಸಹ ನಿಯಮ ಉಲ್ಲಂಘನೆ ಮಾಡಿ ಹೆಂಡದ ಮಳಿಗೆ ತೆರೆಯಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸತ್ಯಾಂಶ ಬಯಲಿಗೆಳೆದಿದ್ದಾರೆ.
ಈಗಾಗಲೇ ಸಮಿತಿ ಇಲಾಖೆಗೆ ಸ್ಥಳೀಯರು ಈಗಾಗಲೇ ದೂರು ನೀಡಿದರೂ ಫಲಿತಾಂಶ ಶೂನ್ಯವಾಗಿದ್ದು, ಶಾಮೀಲಾಗಿರುವ ಅಧಿಕಾರಿಗಳ ಲಾಭಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಮಳಿಗೆಯಾಗಿದೆ ಎಂದು ಅಧಿಕಾರಿಗಳು ಹೇಳಿ ಕಳಿಸುತ್ತಾರೆ ಆದರೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರ ಕುಟುಂಬಕ್ಕೆ ಸೇರಿದ ಕಟ್ಟಡದಲ್ಲೇ ಸಾರಾಯಿ ಅಂಗಡಿ ತೆರೆದಿದ್ದಾರೆ ಎಂಬುದು ಸಹ ಲಾಭಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಡಿಯಲ್ಲಿ ಗೌಸ್ ಮೊಯಿದ್ದೀನ್, ಕೃಷ್ಣಮೂರ್ತಿ, ನೀಲಗುಳಿ ಪದ್ಮನಾಭ್ ಉಪಸ್ಥಿತರಿದ್ದರು

























Discussion about this post