ಚಿಕ್ಕಮಗಳೂರು: ಅರಣ್ಯ ಇಲಾಖೆಗೆ ಮರ ಕದಿಯುವ ಕುರಿತು ಮಾಹಿತಿ ನೀಡಿದ್ದಾರೆ ಎಂಬ ದ್ವೇಷದ ಹಿನ್ನೆಲೆ ಇಟ್ಟುಕೊಂಡು ಮನೆಗೇ ನುಗ್ಗಿ ಯುವತಿಯ ಮೇಲೆ ಹಲ್ಲೆ ನಡೆಸಲಾಗಿದೆ.
ಓರ್ವ ಮಹಿಳೆಯ ನೇತೃತ್ವದಲ್ಲಿ ಬಂದ ಒಟ್ಡು ಜನರಿದ್ದ ಗುಂಪು ತೊಗರಿಹಂಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಹಿರೇಬಿದರೆ ಗ್ರಾಮದ ಯುವತಿಯ ಮನೆಗೆ ತೆರಳಿ ಈ ದುಷ್ಕೃತ್ಯ ಎಸಗಿದೆ.
ಪುಂಡರ ಗುಂಪಿನಲ್ಲಿ ಮೀನಾಕ್ಷಿ ಎಂಬ ಮಹಿಳೆಯೂ ಇದ್ದು ಮೊಬೈಲ್ ಕಿತ್ತುಕೊಂಡಿದ್ದಾರೆ, ಉಳಿದ ಇಬ್ಬರು ಪುನೀತ್, ನಾರಾಯಣ್ ಮುಖಕ್ಕೆ ಥಳಿಸಿ ಚಪ್ಪಲಿ ಕಾಲಿನಿಂದ ಒದ್ದು, ಬಿದಿರು ದೊಣ್ಣೆಯಿಂದ ಥಳಿಸಿ ದೈಹಿಕ ದೌರ್ಜನ್ಯ ನೀಡಿದ್ದಾರೆ ಎಂದು ನೊಂದ ಯುವತಿ ಆರೋಪಿಸಿದ್ದಾರೆ.
ತಾವು ಮತ್ತು ತಮ್ಮ ತಾಯಿ ಅರಣ್ಯ ಇಲಾಖೆಯವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದರೂ ಸಹ ಕೇಳದೆ ಹೀನಾಮಾನ ಥಳಿಸಿದ್ದಾರೆ ಎಂದು ಯುವತಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಹಿನ್ನೇಯಲ್ಲಿ ಹಿರೇಬಿದರೆಯಲ್ಲಿ ಮರಗಳ್ಳರು ಮರ ಕಡೆಯುತ್ತಿದ್ದ ವೇಳೆ ಯುವತಿ ಮತ್ತು ಆಕೆಯ ತಾಯಿ ಹೊರಗೆ ಬಂದು ಲೈಟ್ ಹಾಕಿದ್ದರು ಎನ್ನಲಾಗಿದೆ.
ಅರಣ್ಯ ಇಲಾಖೆಯಲ್ಲಿ ೫ ಜನರ ಮೇಲೆ ಕೇಸ್ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

























Discussion about this post