ಚಿಕ್ಕಮಗಳೂರು: ಗಜರಾಜನು ಮೂಡಿಗೆರೆ ಪಟ್ಟಣದೊಳಗೆ ಮಾರ್ನಿಗ್ ವಾಕ್ ಮಾಡಲು ಕಾಡಿನಿಂದ ಧಾವಿಸಿದ್ದು, ಪಟ್ಟಣ ಪಂಚಾಯಿತಿವರೆಗೂ ಹೋಗಿ ನಿಂತಿತ್ತು
ಸ್ಥಳದಲ್ಲಿ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿ ಸಿಡಿಸಿ ಕಾಡಾನೆಯನ್ನು ಗೆಂಡೆಹಳ್ಳಿ ಮಾರ್ಗದಲ್ಲಿ ಕಳಿಸಿದ್ದಾರೆ. ಬೆಳಿಗ್ಗೆ ಹಳಸೆ ಮಾರ್ಗದ ಬಳಿ ಸಹ ಆನೆ ಕಾಣಿಸಿಕೊಂಡಿತ್ತು ಎಂದು ಗ್ರಾಮಸ್ಥ ತಿಳಿಸಿದ್ದಾರೆ. ಇದೇ ಆನೆ ನಾಲ್ಕು ದಿವಸದ ಹಿಂದೆಯಷ್ಟೇ ಗೋಣಿಬೀ ಹತ್ತಿರ ಜಿ. ಹೊಸಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು ನಂತರ ಕಸ್ಕೇಬೈಲು, ಕಲ್ಲುಗುಡ್ಡದ ಮೂಲಕ ಹಳಸೆ ಕುನ್ನಳ್ಳಿಗೆ ಸಹ ಬಂದಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

























Discussion about this post