ಕೊಟ್ಟಿಗೆಹಾರ: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಯವರು ಗದ್ದೆ ತುಳಿದು ಭತ್ತ ನಾಟಿ ಮಾಡಿ, ರೈತಾಪಿ ಜನರೊಂದಿಗೆ ಸಹಬೋಜನ ನಡೆಸಿ ಕೃಷಿಯತ್ತ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಹಳ್ಳಿ ಹೆಂಗಸರು ಹಾಡುವ ಸೋಬಾನೆ ಪದಕ್ಕೆ ಪದ ಹಾಡಿ, ರೈತರಾಗಿದ್ದಾರೆ. ಭತ್ತ ನಾಟಿಗೆ ಕೊಟ್ಟಿಗೆ ಹಾರದ ಸುತ್ತಮುತ್ತಲ ಹಳ್ಳಿ ಯುವಕರು ಸಹ ಕೈಜೋಡಿಸಿದ್ದು, ಕೆಲಸ ಭರದಿಂದ ಸಾಗಿತ್ತು.
ದೇವನಗುಲು ಯಶೋದಮ್ಮ ಸುಂದರೇಶ್ ಗೌಡ ಗದ್ದೆಯಲ್ಲಿ ನಾಟಿ ನಡೆಯಿತು. ಹಾರೆಯಿಂದ ಗದ್ದೆಯನ್ನು ಹದ ಮಾಡಿ ಟಿಲ್ಲರ್ ಓಡಿಸಿ ಗ್ರಾಮೀಣ ಭಾಷೆಯಲ್ಲೇ ಮಾತಾಡುತ್ತಾ ರೈತಾಪಿ ಕೆಲಸ ನಡೆಸಿದ್ದರು. ಆ ಮೂಲಕ ರಾಜಕೀಯವನ್ನು ಮರೆತು ಹಾಯಾಗಿದ್ದರು.

























Discussion about this post