ಚಿಕ್ಕಮಗಳೂರು: ಪ್ರವಾಸಿಗರಿಗೆ ಸಖತ್ ರೂಲ್ಸ್ ಮಾಡಿರುವ ನಡುವೆಯೂ ಅಬ್ಬಿ ಜಲಪಾತ ವೀಕ್ಷಣೆಗೆ ಬಂದಿದ್ದ ಮಗುವೊಂದು ಕುಟುಂಬಸ್ಥರಿಂದ ರಕ್ಷಿಸಲ್ಪಟ್ಟಿದೆ. ಮುಖ ಮತ್ತು ತಲೆಗೆ ಗಾಯಗೊಂಡಿದ್ದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸುಮಾರು ಹದಿನೇಳು ಜನರಿದ್ದ ಕುಟುಂಬದ ಜನರು ಬೆಂಗಳೂರಿನಿಂದ ಚಿಕ್ಕಮಗಳೂರಿನ ವಿವಿಧ ಸ್ಥಳಗಳ ವೀಕ್ಷಣೆಗೆ ಬಂದಿದ್ದರು. ಮೂಡಿಗೆರೆ ತಾಲ್ಲೂಕು ಬಾಳೂರು ಬಳ್ಳಾಲರಾಯನ ದುರ್ಗ ಕಡೆಯಿಂದ ಅಬ್ಬಿ ಜಲಪಾತದ ಕಡೆಗೆ ಬಂದಿದ್ದ ಸಂದರ್ಭ ಮಗು ಕಾಲು ಜಾರಿ ಸ್ವಲ್ಪ ಆಳಕ್ಕೆ ಬಿದ್ದಿದ್ದು ಕುಟುಂಬದವರು ತಕ್ಷಣವೇ ಜಾಗ್ರತೆ ವಹಿಸಿದ್ದಾರೆ.
ಗಾಯಗೊಂಡ ಮಗುವನ್ನು ಕೂಡಲೆ ಎತ್ತಿಕೊಂಡು ಕಾಲ್ನಡಿಗೆಯಲ್ಲೇ ನಡೆದು, ನಂತರ ವಾಹನದಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ತಲುಪಿದ್ದಾರೆ.
ವಿಷಯ ತಿಳಿದ ಅಗ್ನಿಶಾಮಕ ಧಳ ಮತ್ತು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

























Discussion about this post