ಚಿಕ್ಕಮಗಳೂರು: ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದ ತಮ್ಮ ಶಾಲೆಯ ವಿದ್ಯಾರ್ಥಿ ಎಚ್.ಎಂ. ಹರ್ಷಿತ್ ಅವರನ್ನು ನಗರದ ಸಂತ ಜೋಸೆ-ರ ಪ್ರೌಢಶಾಲೆಯಲ್ಲಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ರೋನಾಲ್ಡ್ ಲೂಯಿಸ್, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಚ್.ಎಂ. ಹರ್ಷಿತ್ ೬೨೫ ಕ್ಕೆ ೬೨೫ ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ಇದರಿಂದಾಗಿ ಶಾಲೆಯ ಕೀರ್ತಿ ಹೆಚ್ಚಾಗಿದೆ ಎಂದರು.
ಪ್ರತಿ ದಿನ ೪ ರಿಂದ ೫ ಗಂಟೆಗಳ ಕಾಲ ಸತತ ಅಧ್ಯಯನ ಮಾಡಿದರ ಫಲವಾಗಿ ೬೨೫ ಅಂಕ ಬರಲು ಸಾಧ್ಯವಾಗಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಭವಿಷ್ಯದಲ್ಲಿ ಪ್ರಮುಖ ಘಟ್ಟವಾಗಿದ್ದರಿಂದ ಶ್ರಮ ವಹಿಸಿ ಅಭ್ಯಾಸ ಮಾಡಿ ಹೆಚ್ಚಿನ ಅಂಕ ಪಡೆದುಕೊಂಡರೆ ಮುಂದಿನ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಹರ್ಷಿತ್ ತಂದೆ ಮಲ್ಲೇಶಪ್ಪ ವೃತ್ತಿಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರು, ತಾಯಿ ಮೀನಾಕ್ಷಿ ಗೃಹಿಣಿ, ಮಗನ ಓದಿಗೆ ನೀರೆರೆದು ಪೋಷಿಸಿದರು ಎಂದು ಹೇಳಿದರು. ಹರ್ಷಿತ್ ಅವರನ್ನು ಸನ್ಮಾನಿಸಿದ ಸಂದರ್ಭದಲ್ಲಿ ಶಾಲೆಯ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

























Discussion about this post