ಅಫ್ಘಾನಿಸ್ತಾನ: ಅನ್ಯದೇಶಗಳಿಗೆ ಅಫ್ಘಾನಿಸ್ತಾನದ ನೆಲದಲ್ಲಿ ಬೇರೆ ರಾಷ್ಟ್ರಗಳಿಗೆ ನಿರ್ಬಂಧ ವಿಧಿಸಿರುವ ತಾಲಿಬಾನ್, ಭಾರತಕ್ಕೆ ಮಾತ್ರ ಮೂಲಭೂತ ಸೌಕರ್ಯ ಯೋಜನೆ ಪೂರ್ಣ ಗೊಳಿಸಿಕೊಳ್ಳಲು ವೆಲ್ ಕಂ ಎಂದಿದೆ.
ಭಾರತ ಆಫ್ಘಾನಿಸ್ತಾನದಲ್ಲಿ ಹಲವು ಯೋಜನೆಗಳನ್ನು ನಡೆಸಿದ್ದು, ಇವು ಜನಪರವಾಗಿವೆ, ಆದ್ಧರಿಂದ ಈ ಮೂಲಭೂತ ಸೌಕರ್ಯಗಳ ಯೋಜನೆಗಳನ್ನು ಭಾರತ ಪೂರ್ಣಗೊಳಿಸಬಹುದು ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಹೀಲ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಾಲಿಬಾನ್ ನೆಲವನ್ನು ಇತರೆ ಯಾವುದೇ ದೇಶಕ್ಕೂ ಬಳಸಲು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
Discussion about this post