ಚಿಕ್ಕಮಗಳೂರು : ಹಾಸನ ಹಾಲು ಒಕ್ಕೂಟದ ಸಹಕಾರದೊಂದಿಗೆ ನಗರದಲ್ಲಿ ನೂತನವಾಗಿ ನಂದಿನಿ ಸಿಹಿ ಉತ್ಸವ ಮಳಿಗೆಯನ್ನು ಶನಿವಾರ ಉದ್ಘಾಟಿಸಲಾಯಿತು.
ಉಪನಿರ್ದೇಶಕ ಎಂ.ಪ್ರಕಾಶ್ ನೂತನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ ಹಾಸನ ಹಾಲು ಒಕ್ಕೂಟದ ಸಹಕಾರದೊಂದಿಗೆ ನಗರದಲ್ಲಿ ಹಲವಾರು ನಂದಿನಿ ಉತ್ಪನ್ನ ಮಳಿಗೆಗೆಳು ಪ್ರಾಂಚೈಸಿ, ಪಾರ್ಲರ್‍ನಲ್ಲಿ ಆರಂಭಗೊಂಡಿದ್ದು ಇದೀಗ ನೂತನವಾಗಿ ನಂದಿನಿ ಸಿಹಿ ಉತ್ಪನ್ನ ಹೆಸರಿನಲ್ಲಿ ಮಳಿಗೆ ಆರಂಭಗೊಂಡಿದ್ದು ಇಲ್ಲಿ ಶೇ 10 ರಷ್ಟು ರಿಯಾಯಿತಿ ದರದಲ್ಲಿ ನಂದಿನ ಹಾಲಿನ ಸಿಹಿ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ನಂದಿನ ಹಾಲಿನ ಉತ್ಪನ್ನದ ಮಾರುಕಟ್ಟೆ ಅಧಿಕಾರಿ ರವಿಶಂಕರ್ ಮಾತನಾಡಿ ನಂದಿನಿ ಹಾಲಿನಿಂದ ತಯಾರಿಸಲಾದ ಪೇಡಾ, ಕುಂದಾ, ರಸಗುಲ್ಲ, ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳು ಇಲ್ಲಿ ದೊರೆಯಲಿದ್ದು ಪ್ರತಿ ಉತ್ಪನ್ನಗಳ ಮೇಲೆ ಶೇ 10 ರಷ್ಟು ರಿಯಾಯಿತಿ ಸಿಗಲಿದೆ. ನಗರದ ಹಾಗೂ ಜಿಲ್ಲೆಯ ಮಂದಿ ಇಲ್ಲಿನ ಸಿಹಿ ಉತ್ಪನ್ನಗಳ ಸವಿಯನ್ನು ಆನಂದಿಸುವಂತೆ ಹೇಳಿದರು.
ಅಂಗಡಿ ಮಾಲೀಕ ಶ್ರೀಕಾಂತ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಉತ್ಪನ್ನಗಳು ರಾಸಾಯನಿಕ ಯುಕ್ತವಾಗಿರುತ್ತದೇ ಆದರೆ ನಂದಿನಿ ಹಾಲಿನಿಂದ ತಯಾರಿಸಲಾದ ಉತ್ಪನ್ನಗಳು ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಂದಿನಿ ಸಿಹಿ ಉತ್ಪನ್ನ ಮಳಿಗೆಯೂ ನೂತನವಾಗಿ ಆರಂಭಗೊಂಡಿದ್ದು ರಾಸಾಯನಿಕವಿಲ್ಲದ ಪರಿಶುದ್ಧವಾದ ಉತ್ಪನ್ನಗಳು ಸಿಗಲಿದ್ದು ಸಾರ್ವಜನಿಕರು ರಿಯಾಯಿತಿ ದರವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ವ್ಯವಸ್ಥಾಪಕ ಸತೀಶ್ ಸೇರಿದಂತೆ ಮತ್ತಿತರರು ಇದ್ದರು.

























Discussion about this post