ಚಿಕ್ಕಮಗಳೂರು: ಕೊಟ್ಟಿಗೆ ಹಾರದ ಅತ್ತಿಗೆರೆಯ ಸೋಮೇಶ್ವರ ದೇವಾಲಯದಲ್ಲಿ ಮತ್ತೊಮ್ಮೆ ಕಳ್ಳತನ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಡಿಗೆಹಾರದ ಹುಯಿಗೆರೆಯಲ್ಲಿ ಈ ಮೊದಲು ಹುಂಡಿಗೆ ಕನ್ನ ಹಾಕಲು ದೇವಾಲಯದ ಬೀಗ ಮುರಿದಿದ್ದ ಕಳ್ಳರು ಈಗ ಬೆಲೆಬಾಳುವ ಗಂಟೆಗಳ ಮೇಲೆ ಕಣ್ಣು ಹಾಕಿ ಕದ್ದೊಯ್ದಿದ್ದಾರೆ. ಸುಮಾರು ೧೨ ಗಂಟೆಗಳಿದ್ದುವು ಎಂಬುದು ಬೆಳಕಿಗೆ ಬಂದಿದೆ.
ಭಕ್ತಾದಿಗಳು ತಮ್ಮ ನಂಬಿಕೆ ಅನುಸಾರ ಗಂಟೆ ದಾನ ಕೊಡುವುದು, ಗಂಟೆ ಬಾರಿಸುವುದು ಹಿಂದೂ ದೇವಾಲಯಗಳಲ್ಲಿ ಸಹಜ ಕೆಲಸ. ಇದೀಗ ಗಂಟೆಯನ್ನೂ ಬಿಡದೆ ಕಳ್ಳತನ ಮಾಡಿರುವುದು ಬಹುಶಃ ಯಾರೋ ಪರಿಚಿತರೇ ಈ ಕೆಲಸ ಮಾಡಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಡುರಾತ್ರಿ ಕಳ್ಳರು ನುಗ್ಗಿದ್ದಾರೆ ಎನ್ನಲಾಗುತ್ತಿದ್ದು ಸ್ಥಳಕ್ಕೆ ಮೂಡಿಗೆರೆ ಸಿಪಿಐ ಸೋಮಶೇಖರ್ ಮತ್ತು ಬಣಕಲ್ ಪಿಎಸ್ ಐ ಗಾಯತ್ರಿ ಭೇಟಿ ನೀಡಿದ್ದಾರೆ. ಮೂಡಿಗೆರೆಯ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

























Discussion about this post