ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಮಾಕೋನ ಹಳ್ಳಿಯ ಹತ್ತಿರ ಮರದ ದಿಮ್ಮಿಗಳನ್ನು ಹೊತ್ತಿದ್ದ ಟ್ರ್ಯಾಕ್ಟರ್ ಹೋಗುವಾಗ ಅತಿಯಾದ ಭಾರದಿಂದ ಪಲ್ಟಿ ಹೊಡಿದಿದೆ. ಮಲೆನಾಡಿನ ತೋಟಗಳಲ್ಲಿ ಮರದ ದಿಮ್ಮಿಗಳನ್ನು ಸಾಗಾಣಿಕೆ ಮಾಡುವುದು ಮಾಮೂಲಿ.
ಸಿಲ್ವರ್ ಮರದ ತುಂಡುಗಳನ್ನು ಟ್ರ್ಯಾಕ್ಟರ್ ಗೆ ಭರ್ತಿ ಮಾಡಲಾಗಿತ್ತು, ಇದ್ದಕ್ಕಿದ್ದಂತೆ ಪಲ್ಟಿಯಾದ ಗಾಡಿಗೆ ಹಿಂದುಗಡೆ ಅಥವಾ ಮುಂದುಗಡೆಯಿಂದ ಅದೃಷ್ಟವಶಾತ್ ಯಾವುದೇ ವಾಹನ, ಜನ, ಪ್ರಾಣಿಗಳು ಬಂದಿರುವುದಿಲ್ಲ. ಗೇರ್ ಬದಲಾಯಿಸುವಾಗ ರಿವರ್ಸ್ ಗೇರ್ ಗೆ ಹೋದ ಗಾಡಿ ಪಲ್ಟಿಯಾಗಿತ್ತು. ದೇವರ ದಯದಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

























Discussion about this post