ಬೆಂಗಳೂರು: ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣ ಭಾರತದ ಬಹು ನಿರೀಕ್ಷಿತ ಸಿನೆಮಾ ಕೆಜಿಎಫ್ ಚಾಪ್ಟರ್-೨ ಬಿಡುಗಡೆಗೆ ಡೇಟ್ ನಿಗದಿ ಮಾಡಲಾಗಿದೆ. ೨೦೨೨ರ ಏಪ್ರಿಲ್ ೧೪ರಂದು ಚಿತ್ರಮಂದಿರಗಳಲ್ಲಿ ಕೆಜಿಎಫ್ ಚಾಪ್ಟರ್ ೨ ಬಿಡುಗಡೆಯಾಗಲಿದೆ. ಇದನ್ನು ನಾಯಕ ನಟ ಯಶ್ ಟ್ವೀಟ್ ಮಾಡಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಪ್ರಸ್ತುತ ಕೆಲವು ಅನಿಶ್ಚಿತತೆಗಳಿಂದ ತಡವಾಯ್ತು, ಆದರೆ ನಿಗದಿತ ಸಮಯಕ್ಕೆ ಸಿನೆಮಾ ಬಿಡುಗಡೆಯಾಗಲಿದೆ ಎಂದವರು ಹೇಳಿದ್ದಾರೆ. KGF chapter ೨ ಸ್ಯಾಟಲೈಟ್ ಹಕ್ಕುಗಳನ್ನು ಜೀ ಸಂಸ್ಥೆ ಈಗಾಗಲೇ ಪಡೆದುಕೊಂಡಿದ್ದು ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಆಭಿನಯದ ಬಹು ನಿರೀಕ್ಷಿತ ಚಿತ್ರದಲ್ಲಿ ಸಂಜಯ್ ದತ್, ರವಿನಾ ಟಂಡನ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಕೆಳಗೆ ವಿಜಯ್ ಕಿರಂಗದೂರು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸಿನೆಮಾ ಇದಾಗಿದೆ.
Discussion about this post