ಚಿಕ್ಕಮಗಳೂರು: ಯುವ ಜನರು ನಮ್ಮ ದೇಶದ ದೊಡ್ಡ ಸಂಪತ್ತು, ವಿದ್ಯಾರ್ಥಿಗಳು ಶಿಕ್ಷಣ ಪಡೆದ ನಂತರ ಸ್ವಯಂ ಉದ್ಯೋಗಿಗಳಾಗಿ ಇತರರಿಗು ಉದ್ಯೋಗ ಕಲ್ಪಿಸುವಂತಹ ವ್ಯಕ್ತಿಗಳಾಗಬೇಕು ಎಂದು ಜಿಲ್ಲಾಧಿಕಾರಿ ಕೆ,ಎನ್. ರಮೇಶ್ ಹೇಳಿದರು.
ಅವರು ಇಂದು ಐ,ಡಿ,ಎಸ್,ಜಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಮಿನಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು . ಕೋವಿಡ್-೧೯ ಕಾರಣದಿಂದ ರಾಷ್ಟ್ರದಲ್ಲಿ ಹಾಗೂ ರಾಜ್ಯದಲ್ಲಿ ಅನೇಕ ಯುವಕರು ಉದ್ಯೋಗವನ್ನು ಕಳೆದುಕೊಂಡರು ಆದರೆ ಇತ್ತಿಚೇಗೆ ಸಾಕಷ್ಟು ಉದ್ಯೋಗಳು ಲಭ್ಯವಾಗುತ್ತಿರುವುದು ಆಶಾಧಯಕ ಬೆಳವಾಣಿಗೆಯಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ನೀವು ಭವಿಷ್ಯ ರೂಪಿಸುವಂತಹ ಜೀವನಕ್ಕೆ ಕಾಲಿಡುತ್ತಿದ್ದೀರಾ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು ನೀವೆ ಸ್ವಯಂ ಉದ್ಯೋಗಗಳ ಸೃಷ್ಟಿಸುವಂತಹ ವ್ಯಕ್ತಿಗಳಾಗಿ ನಿಮ್ಮ ತಂದೆ ತಾಯಿಯರಿಗೆ ಹೆಮ್ಮೆಯನ್ನು ತಂದುಕೊಡಬೇಕು ಎಂದು ಹೇಳಿದರು.
ಉದ್ಯೋಗವನ್ನು ನಾನೇ ಸೃಷ್ಟಿಮಾಡಬಲ್ಲೆ ಎಂಬ ಮನೋಭಾವನೆಯನ್ನು ಬೆಳೆಸಿಕೊಂಡು ಇತರರಿಗೂ ಉದ್ಯೋಗವನ್ನು ನೀಡುತ್ತೆನೆಂಬ ಆತ್ಮಸ್ಥರ್ಯವಿರಬೇಕು ಎಂದ ಅವರು ನಮ್ಮ ರಾಜ್ಯದಲ್ಲ್ಲಿ ಉದ್ಯೋಗ ಪಡೆಯಲು ಬಹಳಷ್ಟು ಅವಕಾಶಗಳಿವೆ ಅವುಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ನಿಮ್ಮ ಗುರಿಯನ್ನು ತಲುಪಿ, ಮುಂದಿನ ದಿನಗಳಲ್ಲಿ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು ಮಾತನಾಡಿ, ವಿದ್ಯಾರ್ಥಿಯು ವಿಧ್ಯಾಭ್ಯಾಸದ ಮೂಲಕ ಆಳವಾದ ಜ್ಙಾನವನ್ನು ಪಡೆದು ವಿದ್ಯಾವಂತರಾಗಿ ಆ ವಿದ್ಯೆಯನ್ನು ಸಮಾಜದ ಏಳಿಗೆಗಾಗಿ ಯಾವ ರೀತಿ ಬೆಳಸಿಕೊಳ್ಳಬೇಕೆಂಬುದನ್ನು ಅರಿತು, ಮೌಲ್ಯಯುತ ಜೀವನ ನಡೆಸಲಿಕ್ಕೆ ಬೇಕಾಗುವಂತಹ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗೆ ಜ್ಞಾನದ ಜೊತೆಗೆ ಅವನ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕು, ಆದರ್ಶ ವ್ಯಕ್ತಿಗಳ ವ್ಯಕ್ತಿತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಬೇಕು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಜವಾಬಾರ್ದಿಗಳನ್ನು ತೆಗೆದುಕೊಳ್ಳುವಂತಹ ವ್ಯಕ್ತಿಗಳಾಗಬೇಕು ಅದೇ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತಿಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೌಶಾಲ್ಯಾಭಿವೃದ್ಧಿ ಅಧಿಕಾರಿ ಪ್ರಶಾಂತ್ ಹೆಚ್.ಸಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದರಾಜು, ಐ,ಡಿ,ಎಸ್,ಜಿ, ಕಾಲೇಜಿನ ಪ್ರಾಂಶುಪಾಲ ನಟರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

























Discussion about this post