ಹುಬ್ಬಳ್ಳಿ: ಕರ್ನಾಟಕದ ವಿಚಾರಕ್ಕೆ ಬಂದಾಗ ಕೇಂದ್ರ ಇಬ್ಬಗೆ ನೀತಿ ಅನುಸರಿಸುತ್ತಿದ್ದು, ಕಾವೇರಿ ನದಿಯ ವಿಚಾರದಲ್ಲೂ ಸಹ ಮಲತಾಯಿ ತೋರಿದೆ, ಹೀಗಾಗಿ ತಮಿಳುನಾಡು ಪರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದರು. ಇದೆ ತರಾತುರಿಯನ್ನು ಯುಕೆಪಿಎ ನೀರಾವರಿ ಯೋಜನೆಯಲ್ಲೂ ತೋರಿಸಬೇಕೆಂದು ಹೇಳಿದರು.
ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ ಜನರಿಗೆ ದ್ರೋಹ ಮಾಡಿದೆ, ದೇವೇಗೌಡರು ಪ್ರಧಾನಿಯಾಗಿದ್ದಾಗ ೨೦೦ ಕೋಟಿ ಹಣ ನೀಡಿದ್ದರು, ಚಂದ್ರ ಬಾಬು ನಾಯ್ಡು ಬೆದರಿಕೆಗೂ ಬಗ್ಗಲಿಲ್ಲ, ಕೇಂದ್ರ ಮಹದಾಯಿ ಸೇರಿದಂತೆ ಪ್ರವಾಹಕ್ಕೂ ಹೆಚ್ಚಿನ ಅನುಕೂಲ ನೀಡಲಿಲ್ಲ ಎಂದಿದ್ದಾರೆ.
ಬಿಜೆಪಿ ಜನಾಶೀರ್ವಾದ ಯಾತ್ರೆಯು ಹಾರ, ತುರಾಯಿ, ಗಾಳಿಯಲ್ಲಿ ಗುಂಡು ಹಾಯಿಸುವುದಕ್ಕೆ ಸೀಮಿತವಾಗಿದೆ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಿಎಂ ಬೊಮ್ಮಾಯಿ ಹುಬ್ಬಳ್ಳಿ ಬೇಟಿ ಮಾಡಿದ್ದ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಹುಬ್ಬಳ್ಳಿ ಬೇಟಿ ಚರ್ಚೆಗೆ ಗ್ರಾಸವಾಗಿದೆ.

























Discussion about this post