ಚಿಕ್ಕಮಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಪಾರ್ಶ್ವನಾಥ ಸ್ವಾಮಿ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಿದ್ದಾರೆ. ಶ್ರೀಸಾಮಾನ್ಯನಿಗೆ ಉಳಿತಾಯದ ಮಹತ್ವ ಸಾರಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ.
ಶೃಂಗೇರಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಪದಾದಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಮತ್ತು ವಿಪತ್ತು ನಿರ್ವಹಣ ಸಮಿತಿ ಸದಸ್ಯರು ತಂಡ ಕಟ್ಟಿಕೊಂಡು ಪಾರ್ಶ್ವನಾಥ ದೇವಾಲಯ ಸ್ವಚ್ಛತೆಗೊಳಿಸಲು ಶ್ರಮಿಸಿರುವುದು ಪ್ರಶಂಸನೀಯ ಕಾರ್ಯವಾಗಿದೆ.
ಕಳೆದ ಆರು ವರ್ಷದಿಂದ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ದೇವಾಲಯಗಳನ್ನು ೩೫ ಲಕ್ಷ ಸ್ವಸಹಾಯ ಸಂಘದ ಸದಸ್ಯರಿಂದ ಈಗಾಗಲೇ ಸ್ವಚ್ಛತೆಗೊಳಿಸುತ್ತಾ ಬಂದಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ “ಸ್ವಚ್ಛ ಧಾರ್ಮಿಕ ನಗರಿ” ಎಂಬ ಬಿರುದು ಬಂದಿದ್ದು, ಅದರ ಸವಿನೆನಪಿಗೆ ಈ ಕಾರ್ಯಕ್ರಮ ನಡೆಸಲಾಗಿದೆ. ಶೃಂಗೇರಿ ವಲಯದ ೧೧ ದೇವಸ್ಥಾನವನ್ನು ಸುಮಾರು ೩೫೦ಕ್ಕೂ ಹೆಚ್ಚು ಸ್ವಸಹಾಯ ಸಂಘದ ಪಾಲುದಾರರು ನಡೆಸಿದ್ದಾರೆ. ಸದರಿ ಕಾರ್ಯವನ್ನು ತಾಲೂಕಿನ ಯೋಜನಾಧಿಕಾರಿ ಶ್ರೀ ಮೂರ್ತಿ ಶೆಟ್ಟಿ, ಮೇಲ್ವಿಚಾರಕ ರಾಜೇಶ್ ನಾಯಕ್, ಒಕ್ಕೂಟದ ಅಧ್ಯಕ್ಷೆ ಸುಜಾತ ಮೊದಲಾದವರು ಉಸ್ತುವಾರಿ ಮಾಡಿ ನಡೆಸಿಕೊಟ್ಟಿದ್ದಾರೆ.

























Discussion about this post