ಚಿಕ್ಕಮಗಳೂರು: ನಗರದ ಹೊರಭಾಗದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿಗಳು ಶಿಥಿಲಗೊಂಡಿದ್ದು, ಈಗಲೋ ಆಗಲೋ ಬಿದ್ದುಹೋಗುವ ಸಾಧ್ಯತೆ ಇದೆ.
ಕುಸಿಯಲು ಸಿದ್ಧವಿರುವ ಕಟ್ಟಡದಿಂದ ಬೇರೆ ಕಡೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಪ್ರಾಂಶುಪಾಲರಾದ ಸಿದ್ದಪ್ಪ ಟಕ್ಕಳಕಿ ಹಾಗೂ ಉಪನ್ಯಾಸಕರ ತಂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದೆ.
ಮೇಲ್ಛಾವಣಿ ಈಗಾಗಲೇ ಕುಸಿದಿದ್ದು ಅಲ್ಲಿರುವ ಪ್ರಾಂಶುಪಾಲರು, ವಿದ್ಯಾರ್ಥಿಗಳು, ಉಪನ್ಯಾಸಕ್ರು ಸೇರಿದಂತೆ ಸಿಬ್ಬಂದಿ ವರ್ಗ ಎಲ್ಲರಿಗೂ ಜೀವ ಭಯ ಹುಟ್ಟಿದೆ.
ಉತ್ತಮ ಪ್ರಯೋಗಶಾಲೆಯ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಕಷ್ಟವಾಗಿದ್ದು, ಗ್ರಂಥಾಲಯದ ಪುಸ್ತಕಗಳು ಗೆದ್ದಲು ಹಿಡಿದಿವೆ ಎಂದು ಉಪನ್ಯಾಸಕರು ತಮ್ಮ ನೋವು ತೋಡಿಕೊಂಡಿದ್ದಾರೆ.
ಯಾರಿಗೇ ಆಗಲಿ, ಸರಸ್ವತಿಯ ಆಲಯವೊಂದು ಈ ರೀತಿ ಆಗುವುದು ಮನಸ್ಸಿಗೆ ಬಹಳ ಖೇಧ ಉಂಟು ಮಾಡುವುದು. ಜನಪ್ರತಿನಿಧಿಗಳು, ದಾನಿಗಳು ಮುಂದೆ ಬಂದು ಕ್ರಮ ಕೈಗೊಳ್ಳಬೇಕಿದೆ.
ಸರ್ಕಾರಿ ಕಾಲೇಜು ಎಂದು ಎಲ್ಲರೂ ನಿರ್ಲಕ್ಷ ವಹಿಸದೇ ಹೋದರೆ ಅಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬಹುದು.

























Discussion about this post