ದುಬೈ: ವಿಶ್ವ ಆರೋಗ್ಯ ಸಂಸ್ಥೆ (WHO) ಸೂಚಿಸಿರುವ ಎರಡೂ ಡೋಸ್ ಲಸಿಕೆ ಪಡೆದಿರುವ ಪ್ರವಾಸಿಗರಿಗೆ UAEಗೆ ಪ್ರಯಾಣಿಸಬಹುದು ಎಂದು ಪ್ರಕಟಿಸಿದೆ. UAE ಪ್ರಯಾಣವನ್ನು ನಿರ್ಬಂಧಿಸಿರುವ ದೇಶಗಳ ಪ್ರವಾಸಿ ವೀಸಾ ಹೊಂದಿರುವವರಿಗೆ ಕೂಡಾ ಇದು ಅನ್ವಯಿಸುತ್ತದೆ ಎಂದು ಅಧಿಕಾರಿಗಳು ಶನಿವಾರ (ಆ.೨೮) ಪ್ರಕಟಿಸಿದ್ದಾರೆ.
ನೂತನ ಆದೇಶವು ನಾಳೆ (ಆ.೩೦)ಯಿಂದ ಜಾರಿಯಾಗಲಿದೆ ಎಂದು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್ ಶಿಪ್ (FAIC) ಮತ್ತು ರಾಷ್ಟ್ರೀಯ ತುರ್ತು ಸ್ಥಿತಿ ಬಿಕ್ಕಟ್ಟು ಮಾತು ವಿಪತ್ತು ನಿರ್ವಹಣಾ ಪ್ರಾಧಿಕಾರ (NCEMA) ತಮ್ಮ ಜಂಟಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿವೆ.
Discussion about this post