ಚಿಕ್ಕಮಗಳೂರು: ಜಿಲ್ಲೆಯ ಮುಳ್ಯಯ್ಯನಗಿರಿ ಪರ್ವತಶ್ರೇಣಿ ಸಾಲನ್ನು ಕಣ್ತುಂಬಿಕೊಳ್ಳಲು ಪ್ರವಾಸ ಬಂದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಕುಟುಂಬ ಪ್ರಕೃತಿ ಸೊಬಗನ್ನು ವೀಕ್ಷಿಸಿದ್ದಾರೆ.
ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸೀತಾಳಯ್ಯನಗಿರಿ ಸಮೀಪದ ಖಾಸಗಿ ರೆಸಾರ್ಟ್ನಲ್ಲಿ ತಂಗಿದ್ದು ಭಾನುವಾರ ಸಿರಿ ಸೊಬಗನ್ನು ಕಣ್ತುಂಬಿಕೊಂಡಿದ್ದಾರೆ.
ನಿತ್ಯ ಒತ್ತಡದ ಕಾರ್ಯದಲ್ಲಿರುವ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಒತ್ತಡದಿಂದ ದೂರಾಗಿ ವಿಶ್ರಮಿಸಲು ಗಿರಿಶ್ರೇಣಿಗೆ ಪ್ರವಾಸ ಬಂದಿದ್ದು ಬೆಟ್ಟ ಗುಡ್ಡಗಳ ನಡುವೆ ಕಾಫಿ ಕಂಪಿನ ನಡುವೆ ಇರುವ ಐಷರಾಮಿ ರೆಸಾರ್ಟ್ನಲ್ಲಿ ಎರಡು ದಿನಗಳು ತಂಗಿ ಗಿರಿಶ್ರೇಣಿಯನ್ನು ವೀಕ್ಷಿಸಿ ನಂತರ ಹಿಂತಿರುಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

























Discussion about this post