ಕಾಬೂಲ್: 20 ವರ್ಷಗಳ ಕಾಲ ನಡೆಸಿದ್ದ ಯುದ್ಧ ಈಗ ಕೊನೆಗೊಂಡಿದ್ದು, ಅಫ್ಘನ್ ನಿಂದ ಅಮೇರಿಕಾ ತನ್ನ ಸೇನೆಯನ್ನ ವಾಪಾಸ್ಸು ಹಿಂಪಡೆದಿದ್ದು, ಕಾರ್ಯಾಚರಣೆ ಮುಕ್ತಾಯಗೊಳಿಸಿದೆ ಎಂದಿದೆ. ಶತಕೋಟಿ ಡಾಲರ್ ವೆಚ್ಚದಲ್ಲಿ ದೇಶದ ಪುನರ್ ನಿರ್ಮಾಣ ಕಾರ್ಯ ಆರಂಭಿಸಿದ್ದ ಅಮೇರಿಕಾದ ಕೆಲಸ ತಾಲಿಬಾನ್ ಕಾಲದಲ್ಲಿ ನುಚ್ಚುನೂರಾಗಿದೆ.
ಯುಎಸ್ ಸೇನೆ ವಾಪಾಸ್ ಆದ ಕ್ಷಣ ತಾಲಿಬಾನ್ ಉಗ್ರರು ಗುಂಡು ಹಾರಿಸುವ ಮೂಲಕ ತಮ್ಮ ಸಂಭ್ರಮ ವ್ಯಕ್ತಪಡಿಸಿದರು. ಇದೊಂದು ಐತಿಹಾಸಿಕ ಕ್ಷಣ ಎಂದು ತಾಲಿಬಾನಿನ ಹಿರಿಯ ಅಧಿಕಾರಿ ಹೇಳಿಕೊಂಡಿದ್ದಾರೆ.
ಅಮೇರಿಕಾ-ತಾಲಿಬಾನ್ ನಡುವಿನ ಯುದ್ಧ ಕಾಲದಲ್ಲಿ ಅಮೇರಿಕಾ ಕಾರ್ಯಚರಣೆಗಳಿಗೆ ಸಹಾಯ ಮಾಡಿದ ಅಫ್ಘನ್ ದೇಶಿಗರು, ಅಮೇರಿಕಾ ಪ್ರಜೆಗಳು ಸೇರಿದಂತೆ ೧೦,೦೦೦ಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಲಾಗಿದೆ.
ಐಸಿಸ್ ಸಂಘಟನೆಯು ಕಾಬೂಲ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹೊಣೆ ಹೊತ್ತಿದ್ದು, ೧೩ ಮಂದಿ ಅಮೇರಿಕಾ ಸೇನಾ ಸಿಬ್ಬಂದಿ ಸೇರಿದಂತೆ ೧೦೦ ಕ್ಕೂ ಹೆಚ್ಚು ಮಂದಿಯು ಸಾವನ್ನಪ್ಪಿದ್ದರು. ತಾಲಿಬಾನ್ ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿ ಉಂಟಾಗಬಹುದಾದ ತೊಂದರೆ ಬಗ್ಗೆ ಎಚ್ಚರಿಕೆ ಸಹ ನೀಡಿತ್ತು ಎನ್ನಲಾಗಿದೆ.
ಅಮೇರಿಕಾ ಸೇನೆ ವಾಪಾಸ್ ತೆರಳಿದ ಮೇಲೆ ಯಾವುದೇ ರೀತಿಯ ಹಿಂಸೆ ದೇಶದಲ್ಲಿ ನಡೆಯುವುದಿಲ್ಲ ಎಂದು ತಾಲಿಬಾನ್ ಹೇಳಿದೆ. ಸ್ವತಃ ಅಮೇರಿಕಾ ಅಧ್ಯಕ್ಷ ಬೈಡನ್ ಈ ಕುರಿತು ದಿನಾಂಕ ನಿಗದಿಪಡಿಸಿ, ಅಫ್ಘಾನ್ ನಲ್ಲಿರುವ ಅಮೇರಿಕಾ ಪ್ರಜೆಗಳು, ಸೈನಿಕರನ್ನು ಸ್ಥಳಾಂತರಗೊಳಿಸುವುದಾಗಿ ಹೇಳಿದ್ದರು. ಯುಎಸ್ ಜನರಲ್ ಕೆನ್ನತ್ ಮೆಕೆಂಜಿ ’ವಾಶಿಂಗ್ಟನ್ ಟೈಮ್ಸ್ ನಲ್ಲಿಈ ಕುರಿತು ಅಧಿಕೃತವಾಗಿ ಸ್ಥಳಾಂತರ ಕಾರ್ಯ ಮುಗಿದ ಘೋಷಣೆ ಮಾಡಿದ್ದ ಬಗ್ಗೆ ತಿಳಿಸಿದ್ದರು.
1929 GMT ವೇಳೆಗೆ ಕಾಬೂಲ್ನಿಂದ ಕೊನೆಯ C-17 ವಿಮಾನ ಅಮೆರಿಕಾಗೆ ಹಾರಿತು. ಈ ರಾತ್ರಿ ಸೇನಾ ಹಿಂತೆಗೆದುಕೊಳ್ಳುವಿಕೆ ಮತ್ತು ಸ್ಥಳಾಂತರಿಸುವಿಕೆಯು ಮಿಲಿಟರಿ ಘಟಕದ ಅಂತ್ಯವನ್ನು ಸೂಚಿಸಿದೆ. ಜೊತೆಗೆ 2001ರ ಸೆಪ್ಟೆಂಬರ್ 11ರ ನಂತರ ಅಫ್ಘಾನಿಸ್ತಾನದಲ್ಲಿ ಪ್ರಾರಂಭವಾದ ಸುಮಾರು 20 ವರ್ಷಗಳ ಕಾರ್ಯಾಚರಣೆಯ ಅಂತ್ಯವನ್ನೂ ಸೂಚಿಸುತ್ತದೆ,” ಎಂದು ಅವರು ವಿವರಿಸಿದ್ದಾರೆ.
ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ ತಾಲಿಬಾನ್: ಅಫ್ಘಾನಿಸ್ತಾನದಿಂದ ಯುಎಸ್ ಸೇನೆ ಹಿಂತಿರುಗುವಿಕೆಯು ಸಂಪೂರ್ಣ ಸ್ವಾತಂತ್ರ್ಯದ ಸಂಕೇತವಾಗಿದೆ ಎಂದು ತಾಲಿಬಾನ್ ಸಂಘಟನೆ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. “ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹೆಮ್ಮೆಯಾಗುತ್ತದೆ,” ಎಂದು ತಾಲಿಬಾನ್ ಸಂಘಟನೆಯ ಹಿರಿಯ ಅಧಿಕಾರಿ ಅನಾಸ್ ಹಕ್ಕಾನಿ ಬಣ್ಣಿಸಿದ್ದಾರೆ.
ಅಫ್ಘಾನಿಸ್ತಾನದ ಚೆಕ್ ಪಾಯಿಂಟ್ ಗಳಲ್ಲಿ ತಾಲಿಬಾನ್ ಉಗ್ರರು ಗುಂಡು ಸಿಡಿಸುವ ಮೂಲಕ ಸಂಭ್ರಮಿಸಿದರು. ಇದರ ಮಧ್ಯೆ ಯುಎಸ್ ಸೇನೆ ಹಿಂತೆಗೆದುಕೊಳ್ಳುವಿಕೆ ಕುರಿತು ಮಂಗಳವಾರ ಯುಎಸ್ ಅಧ್ಯಕ್ಷ ಜೋ ಬೈಡನ್ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಸಹ ವರದಿಯಾಗಿದೆ.
1.23 ಲಕ್ಷ ಪ್ರಜೆಗಳನ್ನು ಸ್ಥಳಾಂತರಿಸಿದ ಅಮೆರಿಕಾ: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿರುವ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುಎಸ್ ಸೇನೆ ನಿರಂತರ ಕಾರ್ಯಾಚರಣೆ ನಡೆಸಿತು. 1,23,000 ಅಮೆರಿಕಾ ಮತ್ತು ಅಫ್ಘಾನ್ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿತು. ಆದರೆ ಸ್ಥಳಾಂತರವನ್ನು ಬಯಸಿದ ಎಲ್ಲರಿಗೂ ಈ ಅವಕಾಶ ಸಿಗಲಿಲ್ಲ, ಕೆಲವರ ಸ್ಥಳಾಂತರಕ್ಕೆ ರಾಜತಾಂತ್ರಿಕ ಸಮಸ್ಯೆ ಎದುರಾಯಿತು ಎಂದು ಯುಎಸ್ ಜನರಲ್ ಕೆನ್ನತ್ ಮೆಕೆಂಜಿ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆಯನ್ನು ಮುಕ್ತವಾಗಿ ಬಿಡಲು ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಸೋಮವಾರ ನಿರ್ಣಯವನ್ನು ಅಂಗೀಕರಿಸಲಾಯಿತು. ವಿಶ್ವಸಂಸ್ಥೆ ಸೇರಿದಂತೆ ಇತರೆ ಜಾಗತಿಕ ಸಂಸ್ಥೆಗಳನ್ನು ಗೌರವಿಸಬೇಕು ಎಂದು ಹೇಳಿದ ಭದ್ರತಾ ಸಮಿತಿಯು, ಈ ಬಗ್ಗೆ ಕಾಬೂಲ್ನಲ್ಲಿ ಯಾವುದೇ ರೀತಿ “ಸುರಕ್ಷಿತ ವಲಯ” ವನ್ನು ರಚಿಸಲಿಲ್ಲ. ಈಗ ಕಾಬೂಲ್ ವಿಮಾನ ನಿಲ್ದಾಣವನ್ನು ಯಾರ ಹತೋಟಿಯಲ್ಲಿರುತ್ತದೆ ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ. ತಾಲಿಬಾನ್ ಭದ್ರತೆಯನ್ನು ನಿಯಂತ್ರಿಸುವಾಗ ಸೇನೆಯನ್ನು ನಿರ್ವಹಿಸುವಂತೆ ಟರ್ಕಿಗೆ ಕೇಳಿದ್ದು, ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಇನ್ನೂ ಪ್ರಸ್ತಾಪವನ್ನು ಒಪ್ಪಿಕೊಂಡಿಲ್ಲ ಎಂದು ಸಹ ವರದಿಯಾಗಿದೆ.
Discussion about this post