ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದು ಅತ್ಯುತ್ತಮ ನಿರ್ಧಾರವಾಗಿದೆ ಎಂದು ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಆ ಮೂಲಕ ೨೦ ವರ್ಷಗಳ ಯುದ್ಧಕ್ಕೆ ಅಂತ್ಯ ಹಾಡಲಾಗಿದೆ, ರಾಷ್ಟ್ರೀಯ ಹಿತಾಸಕ್ತಿಯ ವಿರುದ್ಧ ಯುದ್ಧದಲ್ಲಿ ಮುಂದುವರೆಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಶ್ವೇತಭವನದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಅವರು ಮಾತನಾಡಿದ ಸಂದರ್ಭದಲ್ಲಿ ತಿಳಿಸಿದರು.
ಚುನಾವಣೆಗೆ ಮುನ್ನ ನಾನು ಈ ಯುದ್ಧವನ್ನು ಕೊನೆಗೊಳಿಸುವುದಾಗಿ ಮಾತುಕೊಟ್ಟಿದ್ದೆ, ಆ ಮಾತಿಗೆ ಬದ್ಧನಾಗಿ ನಡೆದುಕೊಳ್ಳುತ್ತಿದ್ದೇನೆ. ಇದು ಅಮೇರಿಕದ ಜನರೊಂದಿಗೆ ಪ್ರಮಾಣಿಕವಾಗಿರಬೇಕಾದ ಸಮಯ. ಇನ್ನು ಮುಂದೆ ಅಫ್ಘಾನಿಸ್ತಾನದಲ್ಲಿ ನಡೆಯುವ ಮುಕ್ತ ಕಾರ್ಯಾಚರಣೆಯಲ್ಲಿ ನಾವು ಯಾವುದೇ ಉದ್ದೇಶವನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೇರಿಕಾಗೆ ಚೀನಾ, ರಷ್ಯಾಗಳಿಂದ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಎದುರಾಗಿದೆ, ಅವುಗಳಲ್ಲಿ ಸೈಬರ್ ದಾಳಿ, ಪರಮಾಣು ಪ್ರಸರಣದ ಸವಾಲುಗಳು ನಮ್ಮ ಮುಂದಿದೆ ಎಂದು ಅವರು ಅಭಿಪ್ರಾಯ ತಿಳಿಸಿದರು.
ಅಮೇರಿಕಾ ತಾಲಿಬಾನ್ ಉಗ್ರರಿಗೆ ಆ.೩೧ಕ್ಕೆ ಅಫ್ಘಾನ್ ಬಿಟ್ಟು ಹೋಗುವುದಾಗಿ ತಿಳಿಸಿತ್ತು. ಆದರೆ ಹಲವು ದಾಳಿಗಳು ಹೆಚ್ಚಿದ ಹಿನ್ನೇಲೆ ಒಂದು ದಿವಸ ಮೊದಲೇ ಜಾಗ ಖಾಲಿ ಮಾಡಿತ್ತು.
Discussion about this post