ಚಿಕ್ಕಮಗಳೂರು: ಶಾಲಾ-ಕಾಲೇಜು ಆರಂಭಕ್ಕೂ ಮುಂಚೇ ರಾಜ್ಯ ಸರ್ಕಾರ ತಜ್ಞರ ಸಮಿತಿ ವರದಿಯನ್ನು ಫಾಲೋಮಾಡಲಿ, ತಜ್ಞರೇ ತಪ್ಪು ವರದಿ ನೀಡಿದರೆ ಏನು ಮಾಡಲು ಸಾಧ್ಯ ವಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಕೋವಿಡ್ ಮೂರನೇ ಅಲೆಯ ಭೀತಿ ಜನರಲ್ಲಿದೆ. ಸರ್ಕಾರ ತಜ್ಞರ ವರದಿ ವಿರುದ್ಧ ಕಾರ್ಯಕ್ರಮಗಳನ್ನು ಮಾಡಬಾ ರದು, ತಜ್ಞರು ಸುಮ್ಮನೆ ತಮ್ಮ ಅಭಿಪ್ರಾಯವನ್ನು ನೀಡುವುದಿಲ್ಲ, ನೈಜ್ಯಸ್ಥಿತಿಯನ್ನು ಹೇಳು ತ್ತಾರೆ. ಹಿಂದಿನ ಫಲಿತಾಂಶವನ್ನು ಆಧಾರಿಸಿ ಮುಂದಾಗೋ ದುರಂತದ ಬಗ್ಗೆ ಅಭಿಪ್ರಾಯ ನೀಡುತ್ತಾರೆ ಎಂದರು.
ರಾಜ್ಯ ಸರ್ಕಾರ ತಜ್ಞರ ವರದಿ ವಿರುದ್ಧ ಈ ಹಿಂದೇ ನಡೆದುಕೊಂಡ ಪರಿಣಾಮ ಈಗಾಗಿರೋ ಅನಾಹುತಗಳಿಗೆ ಕಾರಣವಾಗಿದೆ. ಈಗಾಗೀರುವ ಎಲ್ಲಾ ಅನಾಹುತಗಳಿಗೆ ಸರ್ಕಾರವೇ ನೇರಹೊಣೆ, ದೇಶಾದ್ಯಂತ ಲಸಿಕಾ ವಿತರಣಾ ಕಾರ್ಯಕ್ರಮದಲ್ಲಿ ಲೋಪವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿರುವ ತಪ್ಪನ್ನು ರಾಜ್ಯಗಳು ಮಾಡುತ್ತಿವೆ ಜನಸಂಖ್ಯೆಯಷ್ಟು ಲಸಿಕೆ ಇದೇಯಾ ನೋಡಿಕೊಂಡು ಹೇಳಿಕೆ ನೀಡಬೇಕು. ನಾಳೆ ಕೊಡುತ್ತೇವೆ ಎನ್ನುತ್ತಾರೆ ಬೆಳಿ ಗ್ಗೆ ವ್ಯಾಕ್ಸಿನ್ ಇಲ್ಲ ಎನ್ನುತ್ತಾರೆ ಎಂದು ಟೀಕಿಸಿದರು.

























Discussion about this post