ಚಿಕ್ಕಮಗಳೂರು: ಸರ್ಕಾರ ಪಂಚಮಸಾಲಿ ಲಿಂಗಾಯುತ ಸಮುದಾಯವನ್ನು ಕೇಳಿದ ಅವಧಿಯಲ್ಲಿ ೨ಎ ಮೀಸಲಾತಿಗೆ ಸೇರ್ಪಡೆಗೊಳಿಸುವ ನಂಬಿಕೆ ಇದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯವನ್ನು ೨ಎ ಮೀಸಲಾತಿಗೆ ಸೇರಿಸುವುದು ಕೇಳಿದ ಅವಧಿಯಲ್ಲಿ ಸೇರ್ಪಡೆಗೊಳಿಸುವುದು ತಡ ವಾದಲ್ಲಿ ಮತ್ತೇ ಧರಣಿ ನಡೆಸುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದರು.
೨ಎ ಮೀಸಲಾತಿ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ವರ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅಂದು ನಮ್ಮ ಪಾದಯಾತ್ರೆಗೆ ಬೆಂಬ ಲ ನೀಡಿದ ಸಚಿವರಲ್ಲಿ ಅವರು ಒಬ್ಬರಾಗಿದ್ದರು ಎಂದರು.
ಪಂಚಮಸಾಲಿ ಲಿಂಗಾಯುತ ಸಮುದಾಯ ಕಷ್ಟ ಸುಖ ನೋವು ಹಾಗೂ ವಿದ್ಯಾರ್ಥಿ ಗಳ ಬಡವಣೆ ಅವರಿಗೂ ಗೊತ್ತು. ಅವರೇ ಬಂದು ಆಶೀರ್ವಾದ ಪಡೆದು ನಮ್ಮ ಮೇಲೆ ವಿಶ್ವಾಸವಿಡಿ ಪಂಚಮಸಾಲಿ ಲಿಂಗಾಯುತ ಸಮುದಾಯವನ್ನು ೨ಎ ಮೀಸಲಾತಿ ಗೆ ಸೇರಿಸುವ ಭರವಸೆಯನ್ನು ನೀಡಿದ್ದಾರೆ.
ಅಕ್ಟೋಬರ್ ೧ರಂದು ನಮ್ಮ ಅಭಿಯಾನ ಬೆಂಗಳೂರು ತಲುಪಲಿದೆ. ಅಂದು ಮೀಸ ಲಾತಿ ಸಿಕ್ಕರೇ ಅಭಿನಂದನಾ ಸಮಾರಂಭ ಮಾಡಲಾಗುವುದು ಸಿಗದಿದ್ದಲ್ಲಿ ಧರಣಿ ನಡೆ ಸುವುದಾಗಿ ಎಚ್ಚರಿಕೆ ನೀಡಿದರು.

























Discussion about this post