ಸಿನಿ ಸುದ್ಧಿ: ಬಿಗ್ ಬಾಸ್ ಹಿಂದಿ 13ನೇ ಸೀಸನ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ. ಅವರ ಅಭಿಮಾನಿಗಳಿಗೆ ಈ ಸುದ್ದಿ ನುಂಗಲಾರದ ತುತ್ತಾಗಿದೆ. ‘ಕತ್ರೋಂಕೆ ಕಿಲಾಡಿ ಸೀಸನ್ 7’ರಲ್ಲೂ ಅವರು ವಿನ್ನರ್ ಆಗಿದ್ದರು. ಬಿಗ್ ಬಾಸ್ 14ರಲ್ಲಿ ಅವರು ಗೆಸ್ಟ್ ಆಗಿ ದೊಡ್ಮನೆ ಪ್ರವೇಶಿಸಿದ್ದರು
ಸೀರಿಯಲ್ನಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದು ಮಾತ್ರವಲ್ಲದೆ, ಹಲವು ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ಅತಿಥಿ ಪಾತ್ರ ಮಾಡಿದ್ದರು. ಬಾಲಿವುಡ್ನ ಕೆಲವು ಸಿನಿಮಾಗಳಲ್ಲೂ ಕೂಡ ಅವರು ನಟಿಸಿದ್ದರು. ವರುಣ್ ಧವನ್ ನಾಯಕತ್ವದ ‘ಹಂಪ್ಟಿ ಶರ್ಮಾ ಕಿ ದುಲ್ಹನಿಯಾ’ ಚಿತ್ರದಲ್ಲಿ ಸಹ ಒಂದು ಪಾತ್ರ ಮಾಡಿದ್ದರು.
ಏಕ್ತಾ ಕಪೂರ್ ನಿರ್ಮಾಣದ ‘ಬ್ರೋಕನ್ ಬಟ್ ಬ್ಯೂಟಿಫುಲ್ 3’ ವೆಬ್ ಸಿರೀಸ್ನಲ್ಲಿ ಸಿದ್ಧಾರ್ಥ್ ನಟಿಸಿದ್ದರು. ಈ ವರ್ಷ ಓಟಿಟಿ ಮೂಲಕ ಅದು ರಿಲೀಸ್ ಆಗಿತ್ತು.ಸೋಶಿಯಲ್ ಮೀಡಿಯಾದಲ್ಲಿ ಸಿದ್ಧಾರ್ಥ್ ಶುಕ್ಲಾ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದರು. ಟ್ವಿಟರ್ನಲ್ಲಿ 10 ಲಕ್ಷ ಹಾಗೂ ಇನ್ಸ್ಟಾಗ್ರಾಮ್ನಲ್ಲಿ 36 ಲಕ್ಷ ಜನರು ಅವರನ್ನು ಫಾಲೋ ಮಾಡುತ್ತಿದ್ದರು. ಫಿಟ್ನೆಸ್ ಬಗ್ಗೆ ಅವರು ಅಪಾರ ಕಾಳಜಿ ಹೊಂದಿದ್ದರು.
ಷೋಕಿ ಕ್ರೇಜ್ ನಲ್ಲಿ ಇವರು ಹಿಂದೆ ಬಿದ್ದಿರಲಿಲ್ಲ. ಅವರು ಎರಡು ದುಬಾರಿ ಕಾರುಗಳನ್ನಿಟ್ಟುಕೊಂಡಿದ್ದರು. ಒಂದು 78 ಲಕ್ಷ ರೂ. ಬೆಲೆ ಬಾಳುವ BMW X5 ಮತ್ತು 41 ಲಕ್ಷ ರೂ. ಗಳ MERCEDES AAMG, 15 ಲಕ್ಷ ಬೆಲೆಯ ಸುಜುಕಿ ಹಯಬೂಸಾ ಬೈಕ್ ಹೊಂದಿದ್ದರು.
ಸಿದ್ದಾರ್ಥ ಅವರ ಆಸ್ತಿಯ ಮೌಲ್ಯ ಸುಮಾರು 15 ಕೋಟಿ ಎಂದು ಹೇಳಲಾಗುತ್ತಿದೆ. ಅವರ ವಾರ್ಷಿಕ ಆದಾಯ ರೂ 2 ಕೋಟಿ ಆಗಿತ್ತು. ಮಾಸಿಕ ಸರಾಸರಿ ಗಳಿಕೆ ರೂ 20 ಲಕ್ಷ ಆಗಿತ್ತು. ಬಿಗ್ ಬಾಸ್ ಸೀಸನ್ 13 ಗೆದ್ದ ನಂತರ ಅವರ ಬೇಡಿಕೆ ಜೊತೆಗೆ ಗಳಿಕೆ ಜಾಸ್ತಿಯಾಗಿದ್ದವು.
ತಾವು ಅತಿಯಾಗಿ ಪ್ರೀತಿಸುತ್ತಿದ್ದ ಅಪ್ಪ-ಅಮ್ಮ ತಂದೆ ಅಶೋಕ್ ಶುಕ್ಲಾ-ರೀಟಾ ಶುಕ್ಲಾ ಹಾಗೂ ಮನದನ್ನೆ ಶೆಹನಾಹ್ ಗಿಲ್ ಮತ್ತು ಇಬ್ಬರು ಸಹೋದರರನ್ನು ಇಷ್ಟು ಬೇಗ ಸಿದ್ಧಾರ್ಥ್ ಅಗಲಿ ಹೋಗಿದ್ದಾರೆ.

























Discussion about this post