ಚಿಕ್ಕಮಗಳೂರು: ಭಾವಚಿತ್ರವುಳ್ಳ ಮತದಾರರ ಪಟ್ಟಿ ತಯಾರಿಕೆಗೆ ಭಾರತ ಚುನಾವಣಾ ಆಯೋಗ ನಿಯಮ ರೂಪಿಸಿರುವಂತೆ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ಕೆ ಜಿಲ್ಲಾಧಿಕಾರಿ ರಮೇಶ್ ಚಾಲನೆ ನೀಡಿದ್ದಾರೆ. ೦೧-೦೧೨೦೨೨ಕ್ಕೆ ೧೮ ವರ್ಷ ಪೂರೈಸಿರುವ ಜಿಲ್ಲೆಯ ನಿವಾಸಿಗಳು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೊಂದಾಯಿಸಲು ಮುಕ್ತ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹೆಸರು ನೊಂದಣೆ ಮಾಡಲು ನಮೂನೆ -೬ (FORM-6) ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಇದರ ಜೊತೆಗೆ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ, ಬದಲಾವಣೆ, ಸ್ಥಳಾಂತರಗಳು ಇದ್ದಲ್ಲಿ ನಿಗದಿಪಡಿಸಿದ ಅರ್ಜಿ ನಮೂನೆಯಲ್ಲೇ ಭರ್ತಿ ಮಾಡತಕ್ಕದ್ದು. ನವೆಂಬರ್ ೧ ರಂದು ಮತದಾರರ ಪಟ್ಟಿ ಪ್ರಕರಣೆ ಮಾಡಲಾಗುತ್ತಿದ್ದು, ನಂ.೧-೩೦ರವರೆಗೆ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗುವುದು. ೨೦೨೧ರ ನವೆಂಬರ್ ತಿಂಗಳಿನ ಈ ತಾರೀಖುಗಳಲ್ಲಿ ೭, ೧೪, ೨೧ ಹಾಗೂ ೨೮ರ ಭಾನುವಾರಗಳಂದು ವಿಶೇಷ ಆಂದೋಲನ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
೨೦೨೧ರ ಡಿಸೆಂಬರ್ ೨೦ರೊಳಗೆ ಎಲ್ಲಾ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ ಚುನಾವಣಾ ಅಯೋಗದ ಅನುಮತಿ ಪಡೆದು ೨೦೨೨ರ ಜನವರಿ ೦೫ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.

























Discussion about this post