ಚಿಕ್ಕಮಗಳೂರು: ಜನ್ನಾಪುರದ ಬಸವರಾಜ ಅವರ ತೋಟದಲ್ಲಿ ಮರವೊಂದು ವಿದ್ಯುತ್ ಕಂಬಗಳ ಮೇಲೆ ಬಿದ್ದು ವೈರ್ ತುಂಡಾಗಿ ಒಂದಿಷ್ಟು ಕಾಫಿ ಗಿಡಗಳಿಗೆ ಹಾನಿಯಾಗಿತ್ತು. ಇದರ ಕುರಿತು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಿಶ್ರಾ ಅವರಿಗೆ ವಾಟ್ಸಪ್ ಸಂದೇಶ ಮಡಿ ಸಮಸ್ಯೆ ನಿವೇದಿಸಿಕೊಳ್ಳಲಾಗಿತ್ತು.
ಸಂದೇಶ ಗಮನಿಸಿದ ಹಿರಿಯ ಅಧಿಕಾರಿ, ಚಿಕ್ಕಮಗಳೂರಿನ ಅಧಿಕಾರಿ ಶಿವಕುಮಾರ್ ಅವರಿಗೆ ಸೂಚನೆ ನೀಡಿದ್ದು, ಕೂಡಲೇ ಶಿವಕುಮಾರ್ ಅವರು ಸ್ಥಳಕ್ಕೆ ಆಗಮಿಸಿ, ವಿದ್ಯುತ್ ತಂತಿ ಬದಲಾಯಿಸುವ ಕುರಿತು ಭರವಸೆ ನೀಡಿದ್ದಾರೆ.
ಈ ಮೊದಲು ತೋಟದ ಮಧ್ಯದಲ್ಲಿ ವಿದ್ಯುತ್ ಲೈನ್ ಹಾದುಹೋಗಿದ್ದು, ಅದನ್ನು ಬದಲಿಸುವಂತೆ ಹಲವು ಬಾರಿ ಜನ್ನಾಪುರ ಹಾಗೂ ಸ್ಥಳೀಯರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ ವಾಟ್ಸಪ್ ಸಂದೇಶದಿಂದ ತಟ್ಟನೆ ಕೆಲಸ ನಡೆದಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಹಾಗೂ ಮೆಸ್ಕಾಂ ಬಗ್ಗೆ ಭರವಸೆ ಉಂಟುಮಾಡಿದೆ.

























Discussion about this post