ಚಿಕ್ಕಮಗಳೂರು: ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ಹೆಚ್ಚಾಗಿ ಜನಪರ ಕೆಲಸ ಮಾಡುವುದರಿಂದ ಸಮಾಜದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು ಹಾಗೆಯೇ ಕೋವಿಡ್ ನಿರ್ಮೂಲನೆ ಮಾಡಬಹುದು ಎಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಜೇಸಿ ಸಂಸ್ಥೆ ವತಿಯಿಂದ 7 ದಿನ ನಡೆಯುವ ಬಾಂಧವ್ಯ ಜೇಸಿ ಸಪ್ತಾಹ 2021 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅನೇಕ ಸಂಘ ಸಂಸ್ಥೆಗಳು ತನ್ನದೇ ಆದ ಶೈಲಿಯಲ್ಲಿ ಜನಪರವಾದ ಕಾರ್ಯ ನಡೆಸುತ್ತಾ ಬಂದಿವೆ.
ಇದರಲ್ಲಿ ಜೇಸಿ ಸಂಸ್ಥೆ ವಿಭಿನ್ನವಾಗಿದೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವವರು ನಾಯಕತ್ವದ ಗುಣ ಸಂಪಾಧಿಸಲು ಅನುಕೂಲವಾಗುತ್ತದೆ. ಅಲ್ಲದೇ ಒಂದೇ ಕುಟುಂಬದ ಭಾವನೆ ಹೊಂದುವುದರಿಂದ ಸಂಸ್ಥೆಯಿಂದ ಮಾಡುವ ಎಲ್ಲಾ ಜನಪರ ಕಾರ್ಯಕ್ರಮಗಳು ಯಶಸ್ವಿಯಾಗಲು ಸಹಕಾರಿಯಾಗುತ್ತಿದೆ.
ಈ ವೇಳೆ ಎಮ್ ಜಿ ಎಮ್ (MGM HOSPITAL) ಆಸ್ಪತ್ರೆ ಸಹಯೋಗದೊಂದಿಗೆ 150 ಮಂದಿಗೆ ಕೋವಿಡ್ ಲಸಿಕೆ, 200 ಮಾಸ್ಕ್ ವಿತರಣೆ ಮಾಡಲಾಯಿತು.
ಸಮಾಜ ಸೇವಕರಿಗೆ ಗೌರವ: ಇದೇ ಸಂದರ್ಭದಲ್ಲಿ ಎಂಜಿಎಂ ಆಡಳಿತ ವೈದ್ಯಾಧಿಕಾರಿ ಡಾ.ಶಾಂಭವಿ, ಜೇಸಿ ಕಟ್ಟಡ ಸಮಿತಿ ಅಧ್ಯಕ್ಷ ಅಧ್ಯಕ್ಷ ಎನ್.ಎಲ್.ಪುಣ್ಯಮೂರ್ತಿ, ನೀಲಮ್ ಟೆಕ್ಸ್ ಟೈಲ್ಸ್ ಮಾಲೀಕ ಮೋಹನ್ಲಾಲ್ ಜೈನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷ ಕೆ.ಎಚ್.ಚಂದ್ರಶೇಖರ್ ವಹಿಸಿದ್ದರು. ಪ.ಪಂ. ಅಧ್ಯಕ್ಷ ಧರ್ಮಪಾಲ್, ನಿಕಟಪೂರ್ವ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಶ್ರೇಷ್ಠಿ, ಜೇಸಿರೇಟ್ ಅಧ್ಯಕ್ಷೆ ಸುಧಾ ಚಂದ್ರಶೇಖರ್, ಕಾರ್ಯದರ್ಶಿ ಕೃತಿ ಪ್ರದೀಪ್, ಜೂನಿಯರ್ ಜೇಸಿ ಅಧ್ಯಕ್ಷೆ ರಾಣಿ ಚಂದ್ರಶೇಖರ್, ಹಮೀದ್ ಮೊದಲಾದವರು ಉಪಸ್ಥಿತರಿದ್ದರು.

























Discussion about this post