ಚಿಕ್ಕಮಗಳೂರು: 2021-22 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಯಾದ ಚಿಕ್ಕಮಗಳೂರು ಜಿಲ್ಲೆಯ ಶಿಕ್ಷಕರ ವಿವರ ಇಂತಿದೆ.
ಕಿರಿಯ ವಿಭಾಗದಲ್ಲಿ: ಬೀರೂರು ಶೈಕ್ಷಣಿಕ ವಲಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬ್ಯಾಲದಾಳು ತಾಂಡ್ಯದ ಸಹ ಶಿಕ್ಷಕ ಎಚ್.ಗಂಗಾಧರಪ್ಪ, ಚಿಕ್ಕಮಗಳೂರು ವಲಯದ ಸುಗುಡುವಾನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ದಿವಿನ್, ಕಡೂರು ವಲಯದ ಮಲ್ಲಪ್ಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎ.ಇ.ಮೋಹನ್ಕುಮಾ ರ್, ಕೊಪ್ಪ ವಲಯದ ಸಣ್ಣಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಎ.ಭಾರತಿ, ಮೂಡಿಗೆರೆ ವಲಯದ ಕೊಲ್ಲಿಬೈಲು ಸರ್ಕಾರಿ ಪ್ರಾಥಮಿಕ ಶಾಲೆಯ ಸಹಶಿಕ್ಷ ಕ ಆರ್.ಪ್ರಕಾಶ್, ನರಸಿಂಹರಾಜಪುರ ವಲಯದ ಹೊಡೆಯಾಲ ಸರ್ಕಾರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಟಿ.ನೇತ್ರಾವತಿ, ಶೃಂಗೇರಿ ವಲಯದ ಅಸನಬಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಕೆ.ಎಲ್.ಸುಂದರೇಶ್, ತರೀಕೆರೆ ವಲಯದ ಬಿ,ರಾಮನ ಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಎ.ಆರ್.ಸೋಮಪ್ಪ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗ: ಬೀರೂರು ವಲಯದ ಡಿ.ಕಾರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಟಿ.ಎಸ್.ಕುಬೇರ, ಚಿಕ್ಕಮಗಳೂರು ವಲಯದ ಹಿರೇಕೊಳಲೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕೆ.ಅಣ್ಣನಾಯಕ್, ಕಡೂರು ವಲಯದ ಗೌಡನಕಟ್ಟೆಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಜಿ.ಎಂ.ಕುಮಾರಸ್ವಾಮಿ, ಕೊಪ್ಪ ವಲಯದ ಕೆಳಪೇಟೆ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಶೈಲ, ಮೂಡಿಗೆರೆ ವಲಯದ ಕಳಸ ಕೆಪಿಎಸ್ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಬಿ.ಡಿ.ಲಲಿತಾ, ನರಸಿಂಹರಾಜಪುರ ವಲಯದ ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಡಿ.ಸುರೇಶ್, ಶೃಂಗೇರಿ ವಲಯದ ಮಸಿಗೆ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಎಂ.ಎನ್.ರಾಜೇಶ್, ತರೀಕೆರೆ ವಲಯದ ಕೆಂಚಿಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಲಲಿತಮ್ಮ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗ: ಬೀರೂರು ಶೈಕ್ಷಣಿಕ ವಲಯದ ಗುಬ್ಬಿಹಳ್ಳಿ ಪ್ರೌಢಶಾಲೆಯ ಸಹಶಿಕ್ಷಕ ದಯಾನಂದ, ಚಿಕ್ಕಮಗಳೂರು ಮೂಗ್ತಿಹಳ್ಳಿ ಪ್ರೌಢಶಾಲೆಯ ಸಹಶಿಕ್ಷಕ ಎನ್.ಎಂ,ಭಾಗ್ಯಶ್ರೀ, ಕಡೂರು ವಲಯದ ಚೌಳಹಿರಿಯೂರು ಕೆಪಿಎಸ್ ಶಾಲೆಯ ಸಹಶಿಕ್ಷಕ ಎಚ್.ಎಂ.ರುದ್ರೇಶ್, ಕೊಪ್ಪ ವಲಯದ ಬೊಮ್ಲಾಪುರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಎಂ.ಎಲ್.ಸುಧಾ, ಮೂಡಿಗೆರೆ ಶೈಕ್ಷಣಿಕ ವಲಯದ ಗೋಣಿಬೀಡು ಹೊಯ್ಸಳ ಅನುದಾನಿತ ಶಾಲೆಯ ದೈಹಿಕ ಶಿಕ್ಷಕಿ ವೇಣಿ, ನರಸಿಂಹರಾಜಪುರ ವಲಯದ ಮೇಲ್ಪಾಲ್ ಪ್ರೌಢಶಾಲೆಯ ಸಹಶಿಕ್ಷಕ ಕೆ.ಎಂ.ರಾಘವೇಂದ್ರ, ಶೃಂಗೇರಿ ವಲಯದ ಹೊಳೆಕೊಪ್ಪ ಪ್ರೌಢಶಾಲೆಯ ಸಹಶಿಕ್ಷಕ ಎಂ.ಆರ್.ಭಾಸ್ಕರ್, ತರೀಕೆರೆ ವಲಯದ ಹಾದಿಕೆರೆ ಪ್ರೌಢಶಾಲೆಯ ಸಹಶಿಕ್ಷಕಿ ಟಿ.ವಾಣಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

























Discussion about this post