ಕೊಯಿಕ್ಕೋಡ್ : ಮೊದಲ ಬಾರಿಗೆ ಕಾಣಿಸಿಕೊಂಡಿರುವ ನಿಫಾ ವೈರಸ್ ದಾಳಿಯಿಂದಾಗಿ, ೧೨ ವರ್ಷದ ಬಾಲಕನೋರ್ವ ಬಲಿಯಾದ ಘಟನೆ ನಡೆದಿದೆ. ಸದರಿ ಸಂಗತಿಯನ್ನ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಖಚಿತ ಪಡಿಸಿದ್ದಾರೆ.
ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಾಲಕನ ವಿವರಗಳನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳಿಸಿ ಕೊಡಲಾಗಿತ್ತು. ಪ್ರಯೋಗಾಲಯದ ಪರೀಕ್ಷೆ ನಂತರ ನಿಫಾ ವೈರಸ್ ಇರೋದು ಸಹ ದೃಢಪಟ್ಟಿತ್ತು.
ಈ ಮಧ್ಯೆ ತೀವ್ರ ಅಸ್ವಸ್ಥನಾಗಿದ್ದ ಬಾಲಕ ಬೆಳಗಿನ ಜಾವ ಸಾವನ್ನಪ್ಪಿದ್ದಾನೆ. ಇನ್ನು ಬಾಲಕನ ಸಾವಿನ ಬಳಿಕ ಈಗಾಗಲೇ ಆರೋಗ್ಯ ತಂಡವನ್ನು ರಚಿಸಲಾಗಿದ್ದು, ನಿಫಾ ವೈರಸ್ ಬಾಲಕನಿಗೆ ಹೇಗೆ ತಗುಲಿತು ಎಂಬುದರ ಬಗ್ಗೆ ವಿವಿಧ ಅಂಶಗಳನ್ನು ಪತ್ತೆಹಚ್ಚಲಾಗುತ್ತಿದೆ. ಮೃತ ಬಾಲಕನ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.
ಕೇಂದ್ರ ತಂಡ ಕೇರಳಕ್ಕೆ ಭೇಟಿ ಮಾಡಿ ಸಧ್ಯ ಅಧ್ಯಯನ ನಡೆಸಲಿದೆ. ೨೦೧೮ ರಲ್ಲಿ ಮೊದಲ ಬಾರಿಗೆ ನಿಫಾ ವೈರಸ್ ಪತ್ತೆಯಾಗಿದ್ದು,ಇಲ್ಲಿಯವರೆಗೆ ೧೭ ಜನ ಮೃತರಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ.

























Discussion about this post